*##ಮಾಹಿತಿ ವೇದಿಕೆ##*
*##ನಿಮಗಿದು ಗೊತ್ತೆ##*
===========
*ಫೋರ್ಬ್ಸ್ ಪಟ್ಟಿಯಲ್ಲಿ ಅಮೆಜಾನ್ ಮುಖ್ಯಸ್ಥ ಜೆಫ್ ಬೆಜೊಸ್ ನಂ.1 ಶ್ರೀಮಂತ..!*##############
*ವಿಶ್ವದ ಅತ್ಯಂತ ಶ್ರೀಮಂತರ ಪಟ್ಟಿಯನ್ನು ಫೋಬ್ರ್ಸ್ ನಿಯತಕಾಲಿಕ ಪ್ರಕಟಿಸಿದ್ದು, ಅಮೆಜಾನ್ ಮುಖ್ಯಸ್ಥ ಜೆಫ್ ಬೆಜೊಸ್ ಜಗತ್ತಿನ ಅತಿ ಸಿರಿವಂತ ಎಂಬ ಹೆಗ್ಗಳಿಕೆ ಪಡೆದಿದ್ದಾರೆ. ಅವರು 120 ಶತಕೋಟಿ ಡಾಲರ್ ಆಸ್ತಿಗಳ ಒಡೆಯರಾಗಿದ್ದಾರೆ. ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಅವರಿಂದ ಪ್ರಥಮ ಸ್ಥಾನವನ್ನು ಜೆಫ್ ಕಸಿದುಕೊಂಡಿದ್ದಾರೆ. 90 ದಶಲಕ್ಷ ಡಾಲರ್ ಹೊಂದಿರುವ ಬಿಲ್ ಗೇಟ್ಸ್ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ. ಕಳೆದ ಒಂದು ವರ್ಷದಲ್ಲಿ ಅಮೆಜಾನ್ ವಹಿವಾಟು ಮತ್ತು ಪಾಲಿನಲ್ಲಿ ಶೇ.59ರಷ್ಟು ಏರಿಕೆ ಕಂಡು ಬಂದಿದ್ದು, ಈ ಸಾಧನೆ ಜೆಫ್‍ರನ್ನು ಜಗತ್ತಿನ ಕುಬೇರರ ಪಟ್ಟಿಯಲ್ಲಿ ಅಗ್ರಸ್ಥಾನದ ಮಾನ್ಯತೆ ನೀಡಿದೆ.*
##############
* *ಫೋಬ್ರ್ಸ್ ನಿಯತಕಾಲಿಕ ವಿಶ್ವದ ಒಟ್ಟು 2,208 ಅಗರ್ಭ ಶ್ರೀಮಂತರನ್ನು ಗುರುತಿಸಿದ್ದು. ಅವರ ಒಟ್ಟು ಆಸ್ತಿ 9.1 ಲಕ್ಷ ಕೋಟಿ ಡಾಲರ್‍ಗಳು.*
* *ಖ್ಯಾತ ಉದ್ಯಮಿ ವಾರೆನ್ ಬುಫೆಟ್ ತೃತೀಯ ಸ್ಥಾನದಲ್ಲಿದ್ದಾರೆ ಅವರ ಒಟ್ಟು ಆಸ್ತಿ 84 ಶತಕೋಟಿ ಡಾಲರ್.*
* *ಫ್ರಾನ್ಸ್‍ನ ಕೈಗಾರಿಕೋದ್ಯಮಿ ಬರ್ನಾಡ್ ಅರ್ನೌಲ್ಟ್(72 ಶತಕೋಟಿ ಡಾಲರ್) ಮತ್ತು ಫೇಸ್‍ಬುಕ್‍ನ ಮಾರ್ಕ್ ಝುಗರ್‍ಬರ್ಗ್ (71 ಶತಕೋಟಿ ಡಾಲರ್) ಅನುಕ್ರಮವಾಗಿ ನಾಲ್ಕು ಮತ್ತು ಐದನೆ ಸ್ಥಾನದಲ್ಲಿದ್ದಾರೆ.*
* *ಏಷ್ಯಾದಲ್ಲೇ ಅತ್ಯಂತ ಶ್ರೀಮಂತರಲ್ಲಿ ಒಬ್ಬರಾದ ರಿಲಾಯನ್ಸ್ ಸಮೂಹ ಸಂಸ್ಥೆಗಳ ಒಡೆಯ ಅನಿಲ್ ಅಂಬಾನಿ ಟಾಪ್-15 ಪಟ್ಟಿಯಲ್ಲಿ ಸ್ಥಾನ ವಂಚಿತರಾಗಿದ್ದಾರೆ.*
* *ಚೀನಾದ ಇಬ್ಬರು ಲಕ್ಷ ಕೋಟ್ಯಧಿಪತಿಗಳಾದ ಟೆನ್‍ಸೆನ್ ಸಿಇಒ ಮಾ ಹುವಾಟೆಂಗ್ ಮತ್ತು ಅಲಿಬಾಬಾ ಸಂಸ್ಥಾಪಕ ಜ್ಯಾಕ್ ಮಾ ಟಾಪ್-20 ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿದ್ದಾರೆ.*
* *ಕಳೆದ ಬಾರಿ ಫೋರ್ಬ್ ಪಟ್ಟಿಯಲ್ಲಿ 544 ಸ್ಥಾನದಲ್ಲಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಪಟ್ಟಿಯಲ್ಲಿ ಈಗ 766ನೇ ಸ್ಥಾನಕ್ಕೆ ಕುಸಿದಿದ್ದಾರೆ.*
#############
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ