ಶನಿವಾರ, ಮಾರ್ಚ್ 24, 2018

ಕೆ.ಎ.ಎಸ್.ಮತ್ತು ಐಪಿಎಸ್ ಗೆ ಉಪಯುಕ್ತ ಮಾಹಿತಿ

ಸಂಪನ್ಮೂಲ ದಕ್ಷತೆ (Resource Efficiency)
===============
ನೀತಿ ಆಯೋಗವು ಸಂಪನ್ಮೂಲ ದಕ್ಷತೆಯ ಅನುಷ್ಠಾನವನ್ನು ಪ್ರಾರಂಭಿಸಿದೆ. "ಭಾರತ ಐರೋಪ್ಯ ಒಕ್ಕೂಟದ ನಿಯೋಗ"ದೊಂದಿಗೆ ಸಂಪನ್ಮೂಲ ದಕ್ಷತೆಯಯನ್ನು ಅನುಷ್ಠಾನಗೊಳಿಸಲು ನೀತಿ ಆಯೋಗವು ಯೋಜಿಸಿದೆ. Resource Efficiencyವು ಭಾರತದಲ್ಲಿ ಸಂಪನ್ಮೂಲ ದಕ್ಷತೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ದೇಶದಲ್ಲಿ ಸಂಪನ್ಮೂಲ ದಕ್ಷತೆಯನ್ನು ಒತ್ತಿಹೇಳುವಲ್ಲಿ ಈ ಕಾರ್ಯನೀತಿಯು ಮೊದಲನೇಯದ್ದಾಗಿದೆ. ಇದನ್ನು "ಭಾರತೀಯ ಸಂಪನ್ಮೂಲ ದಕ್ಷತೆಯ ಕಾರ್ಯಕ್ರಮ (IREP)" ದ ಶಿಫಾರಸ್ಸಿನ ಮೇಲೆ ಪ್ರಾರಂಭಿಸಲಾಗಿದೆ. ಏಪ್ರಿಲ್ 2017 ರಲ್ಲಿ ಭಾರತದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ(MoEFCC) ಮತ್ತು ಭಾರತೀಯ ಸಂಪನ್ಮೂಲ ಸಮಿತಿಗಳು ಒಟ್ಟಾಗಿ IREP ಅನ್ನು ಪ್ರಾರಂಭಿಸಿವೆ. 
===============
ಭಾರತೀಯ ಸಂಪನ್ಮೂಲ ಸಮಿತಿ( Indian Resource Panel ) ಕುರಿತು
••••••••••••••••••√
ಇದನ್ನು 2016 ರಲ್ಲಿ ಅಧಿಕೃತವಾಗಿ ಅನಾವರಣಗೊಳಿಸಲಾಯಿತು, ಸಂಪನ್ಮೂಲ ಅಭಿವೃದ್ಧಿ ದಕ್ಷತೆಯ ಕುರಿತು ರಾಷ್ಟ್ರೀಯ ಸಲಹಾ ಮಂಡಳಿಯನ್ನು ಸ್ಥಾಪಿಸುವಲ್ಲಿ ಭಾರತವು ಮೊದಲ ಉದಯೋನ್ಮುಖ ಆರ್ಥಿಕ ವ್ಯವಸ್ಥೆಗಳಲ್ಲಿ ಒಂದಾಗಿದೆ. ಸಂಪನ್ಮೂಲ ಸಾಮರ್ಥ್ಯದ ಸಾಮಾನ್ಯ ಸ್ಥಿತಿಗತಿಯನ್ನು ಸುಧಾರಿಸುವಲ್ಲಿ INRP ಭಾರತದ ವ್ಯವಹಾರಗಳಿಗೆ ಮತ್ತು ನೀತಿ-ತಯಾರಕರಿಗೆ ಶಿಫಾರಸುಗಳನ್ನು ನೀಡಲಿದೆ. 
============
ಒಖ್ಲಾ ಪಕ್ಷಿ ಧಾಮ
============
ಒಖ್ಲಾ ಪಕ್ಷಿಧಾಮದ ಪುನರ್ ಸ್ಥಾಪನೆಗಾಗಿ ಮತ್ತು ಉನ್ನತೀಕರಣವನ್ನು ಇತ್ತೀಚಿಗೆ ಪ್ರಾರಂಭಿಸಲಾಯಿತು. ಒಖ್ಲಾ ಪಕ್ಷಿ ಧಾಮವು ನವ ದೆಹಲಿಗೆ ಸಮೀಪದಲ್ಲಿದೆ ಮತ್ತು ದೇಶದ 467 ಪ್ರಮುಖ ಪಕ್ಷಿ ಧಾಮಗಳಲ್ಲಿ ಒಂದಾಗಿದೆ. ಇದು 32 ಜಾತಿಯ ಸರೀಸೃಪಗಳು, 7 ಜಾತಿಯ ಉಭಯವಾಸಿಗಳು ಮತ್ತು 186 ಸಸ್ಯ ಜಾತಿಗಳಿಗೆ ನೆಲೆಯಾಗಿದೆ. ಒಖ್ಲಾ ಪಕ್ಷಿ ಧಾಮವು, ಉತ್ತರ ಪ್ರದೇಶ ರಾಜ್ಯದಲ್ಲಿದೆ. 
============
ವಿಶ್ವದ ಮೊದಲ "brass futures contract"
============
ದೇಶದ ಅತಿದೊಡ್ಡ ಸರಕು ವಿನಿಮಯ ಕೇಂದ್ರವಾದ MCX, ವಿಶ್ವದಲ್ಲಿ ಮೊದಲ ಬಾರಿಗೆ ಹಿತ್ತಾಳೆ(ಹಿತ್ತಾಳೆ ಲೋಹದ)ಯ "futures contract" ವನ್ನು ಪ್ರಾರಂಭಿಸಿದೆ. ಹಿತ್ತಾಳೆಯು ಕಡ್ಡಾಯ ವಿತರಣಾ ಆಯ್ಕೆಗಳೊಂದಿಗೆ ಮೊದಲ "futures contract" ಆಗಿದೆ. ಹಿತ್ತಾಳೆಯು ಮಿಶ್ರಲೋಹವಾಗಿದೆ, ಸಾಮಾನ್ಯವಾಗಿ ಇದು 60% ಸತುವುವನ್ನು ಹೊಂದಿರುತ್ತದೆ ಮತ್ತು ಉಳಿದದ್ದು ತಾಮ್ರವಾಗಿರುತ್ತದೆ. 
==========
Multi Commodity Exchange MCX
=========
> ಸಿಇಒ : ಮಿರಿಗಾಂಕ್ ಎಂ. ಪರಂಜೇಪ್
> ಪ್ರಧಾನ ಕಛೇರಿ: ಮುಂಬೈ
> ಸ್ಥಾಪನೆ: 10 ನವೆಂಬರ್ 2003.
============

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ