ಶನಿವಾರ, ಮಾರ್ಚ್ 24, 2018

ನಿಮಗಿದು ಗೊತ್ತೆ?

ಜಗತ್ತಿನಾದ್ಯಂತ ನೌಕಾಯಾನ ಮಾಡಿದ ಮೊದಲ ಮಹಿಳೆ ಯಾರು?
===========
ನ್ಯೂಜಿಲ್ಯಾಂಡ್‌ನ ನ್ಯೊಮಿ ಜೇಮ್ಸ ಎಂಬ 28 ವರ್ಷದ ಮಹಿಳೆ ಮೊದಲ ಬಾರಿಗೆ ಸೆಪ್ಟೆಂಬರ್‌ 1977ರಲ್ಲಿ ಜಗತ್ತಿನಾದ್ಯಂತ ನೌಕಾಯಾನ ಕೈಗೊಂಡಳು. 48 ಸಾವಿರ ಕಿ.ಮೀ.ಗಳ ಆ ಪ್ರಯಾಣ ಅತ್ಯಂತ ರೋಚಕತೆಯಿಂದ ಕೂಡಿತ್ತು. ಜೂನ್‌ 1978ರಲ್ಲಿ ನ್ಯೊಮಿ ಜೇಮ್ಸಳ ನೌಕಾಯಾನ ಯಶಸ್ವಿಯಾಗಿ ಪೂರ್ಣಗೊಂಡಿತು.
============
ಸ್ಟೆಥೊಸ್ಕೋಪ್‌ ಕಂಡುಹಿಡಿದವರು ಯಾರು?
============
ಫ್ರೆಂಚ್‌ ವೈದ್ಯ ರೆನೆ ಥ್ಲಿಯೊಪಿಯೆ ಲಾಯೆನ್ನೆ ( Rene Theoplhie Laennec ) 1816ರಲ್ಲಿ ಸ್ಟೆಥೊಸ್ಕೋಪ್‌ ಕಂಡುಹಿಡಿದರು. ಆದರೆ 19ನೇ ಶತಮಾನದ ವೇಳೆಗೆ ಸುಧಾರಿತ ಸ್ಟೆಥೊಸ್ಕೋಪನ್ನು ತಯಾರಿಸಲಾಯಿತು.
========
ಪ್ರಪಂಚದಲ್ಲಿ ಅತ್ಯಂತ ದೊಡ್ಡ ದೇವಾಲಯ ಯಾವುದು?
===============
1999ರಲ್ಲಿ ಗಿನ್ನೆಸ್‌ ಪುಸ್ತಕದಲ್ಲಿ ದಾಖಲಾದ ಪ್ರಕಾರ ಕ್ಯಾಂಬೊಡಿಯಾದ ‘ಅಂಕೋರ್‌ ವಾಟ್‌’ (ಸಿಟಿ ಟೆಂಪಲ್‌) ಪ್ರಪಂಚದಲ್ಲಿ ಅತ್ಯಂತ ದೊಡ್ಡ ದೇವಾಲಯ ಎನ್ನುವ ಕೀರ್ತಿ ಹೊತ್ತಿದೆ. 402 ಎಕರೆ ಪ್ರದೇಶದಲ್ಲಿ ಚಾಚಿಕೊಂಡಿರುವ ದೇವಾಲಯದಲ್ಲಿ ಸುಮಾರು 72 ಮಹತ್ವದ ಸ್ಮಾರಕಗಳಿವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ