ಸೋಮವಾರ, ಮಾರ್ಚ್ 26, 2018

ಪ್ರಾಣಿಗಳ ವಿಶೇಷತೆ

ಕಂದು ಬಣ್ಣದ ಮೊಲ
============
ಆಮೆ ಮೊಲದ ಕತೆಯನ್ನು ನೆನಪಿಸಿಕೊಂಡು ಮೊಲಗಳನ್ನು ತಾತ್ಸಾರ ಮಾಡಬೇಡಿ. ಇವುಗಳು ಸಹ ಅತ್ಯಂತ ವೇಗವಾಗಿ ಓಡುವ ಪ್ರಾಣಿಗಳು. ಒಬ್ಬ ಒಲಂಪಿಕ್ ವೇಗದ ಓಟಗಾರ ಎಷ್ಟು ಓಡುತ್ತಾನೆಯೋ, ಅದರ ದುಪ್ಪಟ್ಟು ವೇಗದಲ್ಲಿ ಈ ಮೊಲಗಳು ಓಡುತ್ತವೆ. ಅದರಲ್ಲಿಯೂ ಯೂರೋಪಿಯನ್ ಕಂದು ಮೊಲವು ಗಂಟೆಗೆ 72 ಕಿ.ಮೀ/ಗಂಟೆಗೆ ವೇಗದಲ್ಲಿ ಓಡುತ್ತವೆ.

ಚೀತಾ
=======
ಇದು ವಿಶ್ವದ ಅತ್ಯಂತ ವೇಗದ ಪ್ರಾಣಿ. ಆ ಸ್ಥಾನವನ್ನು ಯಾವುದೇ ಪ್ರಾಣಿಗಳಿಗೆ ಬಿಟ್ಟುಕೊಡದೆ ತನ್ನ ಬಳಿಯೇ ಅಗ್ರ ಸ್ಥಾನವನ್ನು ಉಳಿಸಿಕೊಂಡಿದೆ. ಚೀತಾ ಅಥವಾ ಅಸಿನೊನಿಕ್ ಜುಬಾಟುಸ್ ಎಂದು ಕರೆಯಲ್ಪಡುವ ಈ ಪ್ರಾಣಿಯು ಇದೀಗ ಭಾರತದಲ್ಲಿ ಕಂಡು ಬರುತ್ತಿಲ್ಲ. ಆದರೆ ಸ್ವಾತಂತ್ರ್ಯ ಪೂರ್ವದಲ್ಲಿ ನಮ್ಮ ಚಿತ್ರದುರ್ಗದಲ್ಲಿ ಇವು ಅಡ್ಡಾಡಿಕೊಂಡಿದ್ದವು ಎಂದರೆ ನಂಬಲೇ ಬೇಕು. ಇವುಗಳ ವೇಗ 115 ಕಿ.ಮೀ/ಗಂಟೆಗೆ, ಈ ವೇಗದ ಪ್ರಾಣಿ ಇದನ್ನು ಬಿಟ್ಟರೆ ಜಗತ್ತಿನಲ್ಲಿ ಬೇರೊಂದಿಲ್ಲ.

ಸ್ಪ್ರಿಂಗ್‌ಬಾಕ್
========
ನೈಋತ್ಯ ಆಫ್ರಿಕಾದಲ್ಲಿ ಕಂಡು ಬರುವ ಸ್ಪ್ರಿಂಗ್‍ಬಾಕ್ ಎಂಬ ಕಡವೆ ಜಾತಿಗೆ ಸೇರಿದ ಪ್ರಾಣಿಯು ಸಹ ವೇಗದ ಪ್ರಾಣಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಈ ಸುಂದರ ಪ್ರಾಣಿಯು ತನ್ನ ಕೊಂಬುಗಳಿಂದಾಗಿ ಮತ್ತಷ್ಟು ಆಕರ್ಷಕವಾಗಿ ಕಾಣುತ್ತದೆ.

ಸ್ಪ್ರಿಂಗ್‌ಬಾಕ್
=====
ಅಷ್ಟೇ ಏಕು, ಇದು ಎಷ್ಟು ವೇಗದಲ್ಲಿ ಸಾಗುತ್ತದೆಯೆಂದರೆ ಗಂಟೆಗೆ 100 ಕಿ.ಮೀ ವೇಗದಲ್ಲಿ ಇದರ ಓಟವಿರುತ್ತದೆ. ಅಲ್ಲದೆ ಗಾಳಿಯಲ್ಲಿ ಎತ್ತರ 4 ಮೀಟರ್ ಮತ್ತು ಮುಂದಕ್ಕೆ ಸುಮಾರು 15 ಮೀಟರ್ ಉದ್ದ ನೆಗೆಯುವ ಸಾಮರ್ಥ್ಯ ಈ ಪ್ರಾಣಿಗೆ ಇದೆ. ವಾರೆವ್ಹಾ ಸ್ಪ್ರಿಂಗ್‌ಬಾಕ್ ನಿನಗೆ ಈ ಹೆಸರು ಇಟ್ಟಿದ್ದಕ್ಕೂ ಸಾರ್ಥಕವಾಯಿತು.
============

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ