ಭಾನುವಾರ, ಮಾರ್ಚ್ 25, 2018

ಸಾಮಾನ್ಯ ಜ್ಞಾನ

===========
ಪ್ರಶ್ನೆಗಳು:
1.    ರಾಷ್ಟ್ರೀಯ ಯಕ್ಷಗಾನ ತರಬೇತಿ ಕೇಂದ್ರ ಕರ್ನಾಟಕದಲ್ಲಿ ಎಲ್ಲಿದೆ?
2.    ಎನ್.ಟಿ.ಪಿ.ಸಿ ನ (NTPC) ವಿಸ್ತೃತ ರೂಪವೇನು?
3.    ಗೋಪಾಲಕೃಷ್ಣ ಅಡಿಗರ ಯಾವ ಕೃತಿಗೆ ಪಂಪ ಪ್ರಶಸ್ತಿ ದೊರಕಿದೆ?
4.    ಯುರೋಪಿನ ಯಾವ ನಗರವನ್ನು ಬಿಳಿಯ ನಗರ ಎಂದು ಕರೆಯುತ್ತಾರೆ?
5.    ಗಾಂಧೀಜಿಯವರನ್ನು ಕುರಿತು ಪ್ರಥಮ ಬಾರಿಗೆ ಕನ್ನಡದಲ್ಲಿ ಗ್ರಂಥವನ್ನು ರಚಿಸಿದವರು ಯಾರು?
6.    ಅಂಡಮಾನ್ ದ್ವೀಪಗಳಲ್ಲಿರುವ ಅತಿ ಎತ್ತರವಾದ ಶಿಖರ ಯಾವುದು?
7.    ಪರಾಗ ಸ್ಪರ್ಶಕ್ಕಾಗಿ ಕೀಟಗಳನ್ನು ಆಕರ್ಷಿಸುವ ಹೂವಿನ ಭಾಗ ಯಾವುದು?
8.    ಕಿವಿ ಪಕ್ಷಿಯ ತವರೂರು ಯಾವುದು?
9.    ಅಲಹಾಬಾದ್ ಬಳಿ ಗಂಗಾನದಿಯನ್ನು ಸೇರುವ ನದಿ ಯಾವುದು?
10.    ಬಳಸಿದ ವಿದ್ಯುಚ್ಚಕ್ತಿಯನ್ನು ಅಳತೆ ಮಾಡುವ ಸಾಧನ ಯಾವುದು?
11.    ಬಾಸ್ ಜಲಸಂಧಿ ಎಲ್ಲಿದೆ?
12.    ಪ್ರಸಿದ್ಧ ಬೃಹದೀಶ್ವರ ದೇವಸ್ಥಾನ ಎಲ್ಲಿದೆ?
13.    ವಿಶ್ವ ಸಂಸ್ಥೆ ಮಾನವ ಹಕ್ಕು ಆಯೋಗದ ಮುಖ್ಯಸ್ಥೆಯಾಗಿ ನೇಮಕವಾದ ಭಾರತೀಯ ಮೂಲದ ಮೊದಲ ಮಹಿಳೆ ಯಾರು?
14.    ಕನ್ನಡದ ಮೊದಲ ಪಾಕಶಾಸ್ತ್ರ ಕಾವ್ಯ ಯಾವುದು
15.    ಭಾರತದಲ್ಲಿರುವ ರಾವಿನದಿಗಿದ್ದ ಮೊದಲ ಹೆಸರೇನು?
16.    ಕಲರ್ಸ್ ಕನ್ನಡ ಚಾನಲ್‍ನ ಬಿಗ್‍ಬಾಸ್ ಸೀಸನ್-3 ನ ವಿನ್ನರ್ ಯಾರು?
17.    ಉಪಾಯ ಮಾಡುವುದಕ್ಕೆ ಹೆಸರಾದ ಕಾಡು ಪ್ರಾಣಿ ಯಾವುದು?
18.    ಅಂತರೀಕ್ಷಾದಲ್ಲಿ ಧೀರ್ಘಾವಧಿ ಇದ್ದು ಬಂದ ಪ್ರಥಮ ಗಗನ ಯಾತ್ರಿ ಯಾರು?
19.    ಚಾವುಂಡರಾಯನು ಸಂಸ್ಕøತದಲ್ಲಿ ರಚಿಸಿದ ಗ್ರಂಥ ಯಾವುದು? 
20.    1990 ರಲ್ಲಿ ಮೈಸೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಯಾರಾಗಿದ್ದರು?
21.    ಜ್ಯಾನ್ ಡೆವಿಡ್ ಪ್ರತಿಷ್ಟಿತ ಪ್ರಶಸ್ತಿ ಪಡೆದ ಕನ್ನಡದ ಪ್ರಥಮ ವಿಜ್ಞಾನಿ ಯಾರು?
22.    ರೆವರೆಂಡ್ ಎಫ್ ಕಿಟೆಲ್ ಅವರು ಮೂಲತಃ ಯಾವ ದೇಶದವರು?
23.    ಹಿಂದೂಸ್ತಾನಿ ಸಂಗೀತದಲ್ಲಿ ರಾಮಭಾವು ಕುಂದಗೋಳಕರ ಇವರು ಯಾವ ಹೆಸರಿನಿಂದ ಪರಿಚಿತರಾಗಿದ್ದಾರೆ?
24.    ಜಯಸಿಂಹ ಎಂ.ಎಲ್. ಯಾವ ಕ್ರೀಡೆಯಲ್ಲಿ ಹೆಸರು ಮಾಡಿದ್ದಾರೆ?
25.    ಮಹಾವೀರನ ತಾಯಿಯ ಹೆಸರೇನು?
26.    ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರು ಯಾರು?
27.    ಮೈಸೂರಿನಲ್ಲಿ ಮೊಟ್ಟ ಮೊದಲಿಗೆ ಬಾನುಲಿ ಕೇಂದ್ರವನ್ನು ಸ್ಥಾಪಿಸಿದವರು ಯಾರು?
28.    ನಗಿಸು ಅನಿಲ ಎಂದು ಯಾವುದನ್ನು ಕರೆಯುತ್ತಾರೆ?
29.    ಅಲಕಾನಂದಾ ಮತ್ತು ಮಂದಾಕಿನಿ ನದಿಗಳು ಸಂಗಮವಾಗುವ ಸ್ಥಳ ಯಾವುದು?
30.    ಈ ಚಿತ್ರದಲ್ಲಿರುವವರನ್ನು ಗುರುತಿಸಿ.
==================
ಉತ್ತರಗಳು:
1.    ಉಡುಪಿ
2.    ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಶನ್
3.    ಸುವರ್ಣ ಪುತ್ಥಳಿ
4.    ಬೆಲ್ಗ್ರೇಡ್
5.    ಹರ್ಡೇಕರ ಮಂಜಪ್ಪ
6.    ಸ್ಯಾಡಲ್ ಶಿಖರ
7.    ಪುಷ್ಪದಳ
8.    ದಕ್ಷಿಣ ಅಮೇರಿಕಾ
9.    ಯಮುನಾ ನದಿ
10.    ವೋಲ್ಟಾ ಮೀಟರ್
11.    ಇಂಗ್ಲೆಂಡ್-ಫ್ರಾನ್ಸ್ ನಡುವೆ
12.    ತಂಜಾವೂರು
13.    ನವನೀತಂ ಪಿಳ್ಳೈ
14.    ಸೂಪ ಶಾಸ್ತ್ರ
15.    ಸಿಂಧೂ
16.    ನಟಿ ಶೃತಿ
17.    ತೋಳ
18.    ವ್ಯಾಲೇರಿ ರಿಯುಮಿನ್
19.    ಚರಿತ್ರಸಾರ
20.    ಕೆ.ಎಸ್.ನರಸಿಂಹಸ್ವಾಮಿ
21.    ಸಿ.ಎಲ್.ಆರ್.ರಾವ್
22.    ಜರ್ಮನಿ 
23.    ಸವಾಯಿ ಗಂಧರ್ವ
24.    ಕ್ರಿಕೇಟ್
25.    ತ್ರಿಶಲಾದೇವಿ
26.    ಎಚ್.ಜೆ.ಕನಿಯಾ
27.    ಎಂ.ವಿ.ಗೋಪಾಲಸ್ವಾಮಿ
28.    ನೈಟ್ರಸ್ ಆಕ್ಸೈಡ್
29.    ರುದ್ರ ಪ್ರಯಾಗ
30.    ಕೆ.ವಿ.ಸುಬ್ಬಣ್ಣ (ರಂಗಕರ್ಮಿ)
=================

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ