ಭಾನುವಾರ, ಮಾರ್ಚ್ 25, 2018

ನದಿಗಳ ಜೋಡಣೆ

==============
ಭಾರತದ ಅಂತರ್ ನದಿಗಳ ಜೋಡಣೆ ಅತಿ ದೊಡ್ಡ ಪ್ರಮಾಣದ ಯೋಜನೆ . ಇದು ಭಾರತದ ನದಿಗಳನ್ನ ಕಾಲುವೆಗಳ   ಮೂಲಕ ಸಂಪರ್ಕ ಕಲ್ಪಿಸುವ ಗುರಿಯನ್ನ ಹೊಂದಿದೆ. ಇದು  ಭಾರತದ ಕೆಲವು ಭಾಗಗಳಲ್ಲಿನ ನೀರಿನ ಕೊರತೆ ಮತ್ತು ಪ್ರವಾಹಗಳನ್ನ ಕಡಿಮೆಗೊಳಿಸುತ್ತದೆ. ಈ ಯೋಜನೆಯನ್ನ ಭಾರತೀಯ ಜಲ ಅಭಿವೃದ್ಧಿ ಸಂಸ್ಥೆ( NWDA ) , ಜಲ ಸಂಪನ್ಮೂಲ ಸಚಿವಾಲಯದ ಅಡಿಯಲ್ಲಿ ನಿರ್ವಹಿಸುತ್ತಿದೆ. ಇದು ಹಿಮಾಲಯನ್ ಘಟಕಕ್ಕಾಗಿ 14 ಅಂತರ್ ಲಿಂಕ್ ಯೋಜನೆಗಳು, ಪೆನಿನ್ಸುಲರ ಘಟಕಕ್ಕಾಗಿ 16, ಮತ್ತು 37  ನದಿಗಳ ಜೋಡಣೆಗಳ  ಬಗ್ಗೆ ಅಭ್ಯಸಿಸಿದೆ. 
ಈ ನದಿಗಳ ಜೋಡಣೆಯ ಪ್ರಸ್ತಾವನೆ ಇಂದಿನದಲ್ಲ. ಇದಕ್ಕೆ ಸುದೀರ್ಘ ಇತಿಹಾಸವಿದೆ. ಬ್ರಿಟಿಷ ಆಳ್ವಿಕೆಯಲ್ಲೇ ಈ ವಿಷಯ ಪ್ರಸ್ತಾವನೆ ಆಗಿತ್ತು. 1970 ರಲ್ಲಿ ಮಾಜಿ ನೀರಾವರಿ ಮಂತ್ರಿಯಾಗಿದ್ದ ಡಾ. ಕೆ. ಲ್. ರಾವ್ ಅವರು ದಕ್ಷಿಣಾ ಭಾರತದಲ್ಲಿನ ನೀರಿನ ಕೊರತೆ ಮತ್ತು ಉತ್ತರ ಭಾರತದಲ್ಲಿನ ಪ್ರವಾಹದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಪ್ರವಾಹದ ನೀರನ್ನು ಕೊರತೆಯುಳ್ಳ ಭಾಗಕ್ಕೆ ತಿರುಗಿಸಬೇಕೆಂದು ಪ್ರಸ್ತಾಪಿಸಿದ್ದರು. ಗಂಗಾ ಮತ್ತು ಬ್ರಹ್ಮಪುತ್ರ ನದಿಗಳ ಹೆಚ್ಚುವರಿನೀರನ್ನ , ಕೇಂದ್ರ ಮತ್ತು ದಕ್ಷಿಣ ಭಾಗದಲ್ಲಿ ಹರಿಸಲು ಸೂಚಿಸಿದ್ದರು. ಆಗ ಹಲವಾರು ಅಂತರ್ ಜಲಾನಯನ ವರ್ಗಾವಣೆ ಯೋಜನೆಗಳನ್ನ ಅಳವಡಿಸಲಾಗಿತ್ತು. ನಂತರದಲ್ಲಿ  1982 ರಿಂದ  2013 ರವರೆಗೆ ಭಾರತೀಯ ಜಲ ಅಭಿವೃದ್ಧಿ ಸಂಸ್ಥೆ ಹಲವಾರು ಸಮೀಕ್ಷೆಗಳನ್ನ, ಅಧ್ಯನಗಳನ್ನ, ವರದಿಗಳನ್ನ ಮಾಡಿದೆ. ಆದಾಗ್ಯೂ ಯೋಜನೆಗಳನ್ನ ಅನುಸರಿಸಲಾಗಲಿಲ್ಲ. 2004 ರ ವೇಳೆಯಲ್ಲಿ ಕಾಂಗ್ರೆಸ್ ಸರಕಾರ ಯೋಜನೆಯ ಪರಿಕಲ್ಪನೆಗೆ ತನ್ನ ವಿರೊಧ್ವನ್ನ ವ್ಯಕ್ತ ಪಡಿಸಿತ್ತು. ಇದರಿಂದ ಪರಿಸರ ಹಾನಿ, ಪ್ರಕೃತಿಗೆ ಅಪಾಯ ಹಾಗೂ ದುರಂತಗಳು ಆಗಬಹುದೆಂದು ಸಾಮಾಜಿಕಕಾರ್ಯಕರ್ತರು  ಪ್ರಚಾರಮಾಡಿದ್ದರು. 2002, 2012 ರಲ್ಲಿ ಸುಪ್ರೀಂ ಕೋರ್ಟ್ ಈ ಯೋಜನೆಗಳಿಗೆ ಯಾವುದೇ ನಿರ್ದೇಶನ ನೀಡಲು ನಿರಾಕರಿಸಿತ್ತು. 
===========°
ಭಾರತ ವರ್ಷಕ್ಕೆ 4000 cubic kilometers ನಷ್ಟು ಮಳೆಯನ್ನ ಪಡೆಯುತ್ತದೆ. ಗಂಗಾ ಬ್ರಹ್ಮಪುತ್ರಾ ಜಲಾನಯನ ಪ್ರದೇಶಗಳಲ್ಲಿ ಶೇ. 85 ರಷ್ಟು ಮಳೆಯಾಗುತ್ತದೆ. ವಾಯುವ್ಯ, ಪಶ್ಚಿಮ ಮತ್ತು ದಕ್ಷಿಣ ಭಾಗಗಳನ್ನ ಹೋಲಿಸಿದರೆ ದೇಶ ದ ಈಶಾನ್ಯ ಭಾಗವು ಹೆಚ್ಚಿನ ಪ್ರಮಾಣದ ಮಳೆ ಯನ್ನ ಪಡೆಯುತ್ತದೆ. ವಾರ್ಷಿಕ ಮಳೆಯಲ್ಲಿ ಏರಿಳಿತ , ಮುಂಗಾರು ಮಳೆಯಲ್ಲಿ ಅನಿಶ್ಚಿತತೆಯು ದೇಶದ ಗಂಭೀರ ಸಮಸ್ಯೆಯಾಗಿದೆ. ಕೆಲವುಕಡೆ ಬರಗಾಲ, ಕೆಲವುಕಡೆ ಪ್ರವಾಹಗಳನ್ನ ದೇಶ ಎದುರಿಸುತ್ತಿದೆ.  ರೈತರು ಹಾಗು ಗ್ರಾಮೀಣ ಜನತೆ ಸಂಕಷ್ಟಗಳನ್ನ ಎದುರಿಸುತ್ತಿವೆ. ಬೆಳೆಯ ವೈಫಲ್ಯ ರೈತರ ಆತ್ಮಹತ್ಯೆಗೆ ಕಾರಣವಾಗುತ್ತಿದೆ. ಕೆಲವು ಪ್ರದೇಶಗಳಲ್ಲಿ ತಾತ್ಕಾಲಿಕವಾಗಿ ಅತಿಯಾದ ಮಳೆಯಾಗಿ ಪ್ರವಾಹಗಳು ಅನಾಹುತಗಳನ್ನ ಸ್ರಷ್ಟಿಸುತ್ತಿದೆ . ಕೆಲವುಕಡೆ ಕುಡಿಯುವ ನೀರಿಗೂ ಕೊರತೆ ಇದೆ.  ನದಿಗಳ ಜೋಡಣೆ  ಇವೆಲ್ಲವನ್ನೂ ಬಗೆಹರಿಸುವ ಪ್ರಸ್ತಾಪವಾಗಿದೆ. 
=============
ಭಾರತದಲ್ಲಿ ಕೃಷಿಕರು   ನೀರಾವರಿಗಾಗಿ   ಮಾನ್ಸೂನ್ ನ್ನೇ ಅವಲಂಭಿಸಿದ್ದಾರೆ. ಈ ಅಂತರ್ ಲಿಂಕ್ ಯೋಜನೆ ಉತ್ತಮ ನೀರಾವರಿ ಮತ್ತು ಬೆಳೆಯುತ್ತಿರುವ ಜನಸಂಖ್ಯೆಗೆ ಉತ್ತಮ ಆಹಾರ ಭದ್ರತೆಯಾಗಿದೆ. 
============
ಭಾರತದಲ್ಲಿ ಬಹುತೇಕ  ರಾಜ್ಯಗಳು  ನೀರಿನ ಅಭಾವದಿಂದಾಗಿ  ನದಿಜೋಡಣೆಗೆ ಕೇಂದ್ರ ಸರಕಾರಕ್ಕೆ  ಪ್ರಸ್ತಾಪಿಸುತ್ತಿವೆ.  ಹಿಂದೊಮ್ಮೆ ಅಟಲ್ ಬಿಹಾರಿ ವಾಜಪಾಯಿ ಯವರು ಕೂಡ ಈ ವಿಷಯವನ್ನ ಪ್ರಸ್ತಾಪಿಸಿದ್ದರು. 
============
* ಭಾರತದಲ್ಲಿ ಉತ್ತರ ಹಾಗು ಪೂರ್ವ ಭಾಗಗಳಲ್ಲಿ ಹೆಚ್ಚಿನ ಮಳೆಯಾಗುತ್ತದೆ. ಆದರೆ ದಕ್ಷಿಣ ಮತ್ತು ಪಶ್ಚಿಮ ಭಾಗಗಳಲ್ಲಿ ಮಳೆ ಕಡಿಮೆ. ನದಿ ಜೋಡಣೆ ಯಿಂದ ಈ ಭಾಗಗಳಲ್ಲಿ ನೀರಿನ ಅಭಾವ ಕಡಿಮೆಯಾಗಿ ವರ್ಷಪೂರ್ತಿ ನೀರಿನ ಉಪಯೋಗ ವನ್ನ ಪಡೆಯ ಬಹುದು. 
* ಭಾರತ ಕೃಷಿ ಪ್ರಧಾನ್ ದೇಶ್. ಇಲ್ಲಿನ ಕೃಷಿಕರು ಮಾನ್ಸೂನ್ ನನ್ನೇ ವಲಂಭಿಸಿದ್ದಾರೆ. ಮಾನ್ಸೂನ್ ಕೈ ಕೊಟ್ಟಿತೆಂದರೆ ಕೃಷಿ ಚಟುವಟಿಕೆಗಳು ನಿಂತು ಹೋಗುತ್ತದೆ. ಈ ಸಮಸ್ಯೆಗಳಿಗೆ ನದಿ ಜೋಡಣೆ ಉತ್ತಮ ಪರಿಹಾರ. 
* ಗಂಗಾ ಮತ್ತು ಬ್ರಹ್ಮ ಪುತ್ರನದಿಗಳು ಪ್ರತಿವರ್ಷ ಪ್ರವಾಹದಿಂದ ತುಂಬಿ ಹರಿಯುತ್ತವೆ. ಆ ನೀರನ್ನ ನೀರಿನ ಅಭಾವ ವಿರುವ ಪ್ರದೇಶಕ್ಕೆ ತಿರುಗಿಸಿದರೆ ಪ್ರವಾಹ ಮತ್ತು ಬರಗಾಲ ಎರಡನ್ನೂ ತಡೆಗಟ್ಟಬಹುದು.  
* ಇದರಿಂದ ದೇಶದ  ವಾಣಿಜ್ಯ ಕ್ಷೇತ್ರದಲ್ಲೂ ಉಪಯೋಗ ಪಡೆಯಬಹುದು. Waterways ಗಳಿಂದಾಗಿ ವಸ್ತುಗಳನ್ನ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸುಲಭವಾಗಿ ಸಾಗಿಸಬಹುದಾಗಿದೆ.
* ಈ ಯೋಜನೆಯಿಂದಾಗಿ  ನದಿಯ ಆಸು ಪಾಸು ಜನರಿಗೆ ಮೀನುಗಾರಿಕೆ ಉದ್ಯೋಗವನ್ನ ಕಲ್ಪಿಸಿದಂತಾಗುತ್ತದೆ.    
ಇಷ್ಟೆಲ್ಲ ಮುಖ್ಯವಾದ ಉಪಯೋಗಗಳು ನದಿ ಜೋಡಣೆ ಯಲ್ಲಿ ಇದ್ದರು ಕೂಡ ಕೆಲವೊಂದು ಸಮಸ್ಯೆಗಳೂ ಈ ಯೋಜನೆಯಿಂದ ಹುಟ್ಟಬಹುದೆಂಬ  ಹೇಳಿಕೆಗಳಿವೆ. 
=============°
* ನದಿ ಜೋಡಣೆ ಕಾರ್ಯದಲ್ಲಿ ಕಾಲುವೆಗಳನ್ನ ನಿರ್ಮಿಸುವಾಗ ಪ್ರಕ್ರತಿ ಮತ್ತು ಪರಿಸರಕ್ಕೆ ಹಾನಿಯುಂಟಾಗುತ್ತದೆ. ಬ್ರಹತ್ ಪ್ರಮಾಣದಲ್ಲಿ ಮರಗಳ ನಾಶ ಪರಿಸರದಲ್ಲಿ ಅಸಮತೋಲನಕ್ಕೆ ಕಾರಣವಾಗಬಹುದಾಗಿದೆ. 
* ನದಿಗಳು ಸುಮಾರು ನೂರುವರ್ಷಗಳಿಗೆ ತಮ್ಮ ದಿಕ್ಕನ್ನು ಬದಲಾಯಿಸುತ್ತವೆ. ಹಾಗಾದಾಗ ಈ ಯೋಜನೆ ಧೀರ್ಘಾವದಿಯಲ್ಲಿ ಯಶಶ್ವಿಯಾಗಲಾರದು.  
* ನದಿಗಳ ಜೋಡಣೆಯಿಂದಾಗಿ ಸಮುದ್ರಕ್ಕೆ ತಾಜಾ ನೀರಿನ ಹರಿವು ಕಡಿಮೆಯಾಗಿ ಸಮುದ್ರ ಜಲಚರಗಳ ನಾಶವಾಗುವ ಸಾಧ್ಯತೆ ಇದೆ. 
* ದೇಶದಲ್ಲಿ ಕೆಲವು ನದಿಗಳು ಕಾರ್ಖಾನೆಗಳ ತ್ಯಾಜ್ಯ ರಾಸಾಯನಿಕಗಳಿಂದ ಮಲಿನ ಗೊಂಡಿದ್ದು ಆ ನೀರು ಎಲ್ಲಾ  ಕಡೆ ಸೇರಿ ಮಾಲಿನ್ಯಗೊಳಿಸುವ ಸಾಧ್ಯತೆ ಇದೆ. 
* ಕಾಲುವೆಗಳನ್ನು ನಿರ್ಮಿಸುವಾಗ ಈ ಜಾಗಗಳಲ್ಲಿ ವಾಸಿಸುವ ಜನರನ್ನ ಇನ್ನೊಂದು ಸ್ಥಳಕ್ಕೆ ವರ್ಗಾವಣೆ  ಮಾಡುವಲ್ಲಿ ಸರಕಾರಕ್ಕೆ ತುಂಬಾ ವೆಚ್ಚ ವಾಗುತ್ತದೆ. 
* ಕೊನೆಯದಾಗಿ ಹಾಗೂ ಮುಖ್ಯವಾಗಿ ಈ ಯೋಜನೆಗಾಗಿ ತುಂಬಾ ಹಣ ಬೇಕಾಗುವುದರಿಂದ ಸರಕಾರ ವಿದೇಶಗಳಲ್ಲಿ ಸಾಲ ಮಾಡುವ ಸ್ಥಿತಿ ಉಂಟಾಗುತ್ತದೆ. 

ಇಷ್ಟೆಲ್ಲ ಸಮಸ್ಯೆಗಳಿದ್ದರೂ ನದಿ ಜೋಡಣೆಯಿಂದಾಗಿ ದೇಶದ ಗಂಭೀರ ಸಮಸ್ಯೆಯಾದ ನೀರಿನ ಅಭಾವವನ್ನ ಪರಿಹರಿಸಬಹುದಾಗಿದೆ. ಸಮಸ್ಯೆಗಳಿಗೆಲ್ಲ ಆಳವಾಗಿ ಅಭ್ಯಸಿಸಿ ಪರಿಹಾರಗಳನ್ನ ಕಂಡುಹಿಡಿದರೆ ಯಾವುದೇ ರೀತಿಯಲ್ಲಿ ಹಾನಿಗಳು ಸಂಭಿಸುವ ಸಾಧ್ಯತೆ ಕಡಿಮೆ. 
==============

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ