ಕಳೆದ ಹಲವು ವರ್ಷಗಳಲ್ಲಿ ಭಾರತವು ಅತಿ ಹೆಚ್ಚು ರಾಜ್ಯವಾರು ಜಿಡಿಪಿ ಸಾಧಿಸಿದೆ ಮತ್ತು ಉನ್ನತ ತಂತ್ರಜ್ಞಾನದ ಕೈಗಾರಿಕೆಗಳು ಹಾಗೂ ದೇಶಾದ್ಯಂತ ಹೆಚ್ಚುತ್ತಿರುವ ಜಾಗತೀಕರಣದಿಂದಾಗಿ ಅದ್ಭುತ ರೀತಿಯಲ್ಲಿ ಮಹತ್ತರ ಪ್ರಗತಿ ಸಾಧಿಸುತ್ತಿದೆ. ಈ ರಾಜ್ಯಗಳು ಸಾಂಪ್ರದಾಯಿಕ ಹಾಗೂ ಸಾಂಪ್ರದಾಯಕವಲ್ಲದ ಮೂಲಗಳಿಂದ ತಮ್ಮ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು ಮಹತ್ವಾಂಕಾಕ್ಷೆಯ ಯೋಜನೆಗಳನ್ನು ರೂಪಿಸಿವೆ. ಈ ಕಾರಣದಿಂದಾಗಿಯೇ ಭಾರತವು ನಿಸಂಶಯವಾಗಿ ಏಷಿಯಾದಲ್ಲೇ ಅತಿಹೆಚ್ಚು ಜಿಡಿಪಿ ಮೌಲ್ಯ ಹೊಂದಿರುವ ದೇಶವಾಗಿದೆ.
ಆದ್ದರಿಂದ ಪ್ರಸ್ತುತ ನಾವು ಉತ್ತಮವಾಗಿ ಅಭಿವೃದ್ದಿ ಹೊಂದುವ ಭಾರತ ನಿರ್ಮಿಸುವ ನಿಟ್ಟಿನಲ್ಲಿ ತಮ್ಮ ಕಾರ್ಯಯೋಜನೆಗಳಿಂದ ಶ್ರಮಿಸುತ್ತಿರುವ ಹಾಗು ವೇಗವಾಗಿ ಅಭಿವೃದ್ದಿ ಹೊಂದುತ್ತಿರುವ ಭಾರತದ ಅಗ್ರ 10 ರಾಜ್ಯಗಳ ಪಟ್ಟಿ ಮಾಡಿದ್ದೇವೆ.
=========
ಬನ್ನಿ, ವೇಗವಾಗಿ ಅಭಿವೃದ್ದಿ ಹೊಂದುತ್ತಿರುವ ಭಾರತದ ಅಗ್ರ 10 ರಾಜ್ಯಗಳನ್ನು ನೋಡೋಣ..
============
10. ಬಿಹಾರ
ಬಿಹಾರವನ್ನು ಭಾರತದ ಹತ್ತನೇ ವೇಗವಾಗಿ ಅಭಿವೃದ್ದಿ ಹೊಂದುತ್ತಿರುವ ರಾಜ್ಯವೆಂದು ಹೇಳಲಾಗುತ್ತದೆ. ಈ ರಾಜ್ಯವು ತನ್ನ ಮೊದಲಿನ ವಿಷಮಾವಸ್ಥೆಯನ್ನು ಮೂಲಭೂತ ಸೌಕರ್ಯದಲ್ಲಿ ಹಾಗೂ ಕೈಗಾರಿಕಾ ವಲಯದಲ್ಲಿ ಹೆಚ್ಚಿನ ಪ್ರಮಾಣದ ಅಭಿವೃದ್ದಿ ಕಾರ್ಯಗಳನ್ನು ಹಮ್ಮಿಕೊಳ್ಳುವುದರ ಮೂಲಕ ಉತ್ತಮ ಪಡಿಸಿಕೊಂಡಿದೆ. ಬಿಹಾರದಲ್ಲಿ ವಿದ್ಯುತ್ ಲಭ್ಯತೆಯ ಪ್ರಮಾಣ ಗಮನಾರ್ಹವಾಗಿ ಹೆಚ್ಚಳಗೊಂಡಿದೆ. ಇದು ಪ್ರತಿ ವರ್ಷ ಸುಮಾರು ಎರಡು ಲಕ್ಷ ತಾಂತ್ರಿಕವಾಗಿ ತರಬೇತಿ ಪಡೆದ ಸಂಪನ್ಮೂಲವನ್ನು ಉತ್ಪಾದಿಸುತ್ತದೆ. ಇದಲ್ಲದೇ, ಅಂಕಿ ಅಂಶೀಯವಾಗಿ ಈ ರಾಜ್ಯವು ಉತ್ತರ ಮತ್ತು ಪೂರ್ವ ಭಾರತದ ಮಾರುಕಟ್ಟೆಗಳಿಗೆ ಸೇವೆ ಒದಗಿಸಲು ಉತ್ತಮ ಸ್ಥಾನದಲ್ಲಿ ನೆಲೆಗೊಂಡಿದೆ. ಇದು ಪೂರ್ವ ಭಾರತದ ಐಟಿ ಕೇಂದ್ರವಾಗಿ ಬೆಳೆಯುವ ಎಲ್ಲಾ ಸಾಮರ್ಥ್ಯವನ್ನು ಹೊಂದಿದೆ. ಭಾರತದ ಅತ್ಯಂತ ದುಬಾರಿ ಐಷಾರಾಮಿ 10 ಹೋಟೆಲ್
=============
9. ಪಶ್ಚಿಮ ಬಂಗಾಳ
ಪಶ್ಚಿಮ ಬಂಗಾಳ ಭಾರತದ 9ನೇ ಅಭಿವೃದ್ದಿಶೀಲ ರಾಜ್ಯ ಎಂದು ಹೇಳಲಾಗುತ್ತದೆ. ಅಲ್ಲಿ ಇದನ್ನು ಜನಪ್ರಿಯವಾಗಿ ಪರಂಪರೆಯ ರಾಜ್ಯವೆಂದು ಕರೆಯಲ್ಪಡುತ್ತದೆ. ಇದೊಂದು ಮೇಧಾವಿಗಳ ರಾಜ್ಯ, ಸ್ಥಿರತೆಯ ಸ್ಥಿತಿಯೊಂದಿಗೆ ಬೆಳೆಯುತ್ತಿರುವ ರಾಜ್ಯ. ಇಲ್ಲಿ ಐಟಿ ಉದ್ಯೋಗದಲ್ಲಿ 61 ಪ್ರತಿಶತ ಏರಿಕೆ ಹಾಗೂ ಐಟಿ ಕ್ಷೇತ್ರದ ಹೂಡಿಕೆಯಲ್ಲಿ 169 ಪ್ರತಿಶತ ಹೆಚ್ಚಳವಾಗಿದೆ. ಕಲೆ, ಸಂಸ್ಕೃತಿ ಮತ್ತು ಜ್ಞಾನದ ಭವ್ಯವಾದ ಪರಂಪರೆಯು ಜಾಗತಿಕ ನಕ್ಷೆಯಲ್ಲಿ ಪಶ್ಚಿಮ ಬಂಗಾಳವನ್ನು ಯಾವಾಗಲೂ ಉನ್ನತ ಮಟ್ಟದಲ್ಲಿಟ್ಟಿದೆ. ಇಂದು ರಾಜ್ಯವು ಭವಿಷ್ಯದ ಪ್ರಮುಖ ಐಟಿ ಕ್ಷೇತ್ರವಾಗಿ ಹೊರಹೊಮ್ಮುವ ಭರವಸೆಯಲ್ಲಿದೆ. ಐಬಿಎಂ, ಟಿಸಿಎಸ್, ಕ್ಯಾಪ್ ಜೆಮಿನಿ, ಕಾಗ್ನಿಝೆಂಟ್, ವಿಪ್ರೋ ಮುಂತಾದ ಐಟಿ ದಿಗ್ಗಜ ಕಂಪನಿಗಳು ಪಶ್ಚಿಮ ಬಂಗಾಳವನ್ನು ಈಗಾಗಲೇ ತಮ್ಮ ಆದ್ಯತೆಯ ಪ್ರದೇಶವನ್ನಾಗಿ ಗುರುತಿಸಿವೆ.
============
8. ರಾಜಸ್ಥಾನ
ಭಾರತದ 8ನೇ ಅಭಿವೃದ್ದಿಶೀಲ ರಾಜ್ಯವೆಂದು ಹೇಳಲಾಗುವ ರಾಜಾಸ್ಥಾನವು 'ರಾಜರುಗಳ ನಾಡು' ಎಂದೂ ಕರೆಯಲ್ಪಡುತ್ತದೆ. ಮೂಲಸೌಕರ್ಯಗಳ ಅಭಿವೃದ್ದಿ, ಕೈಗಾರಿಕೆಗಳು, ಕೃಷಿ, ಆಟೋಮೊಬೈಲ್ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಪ್ರಗತಿಪರ ಬೆಳವಣಿಗೆ ಹೊಂದುವ ಮೂಲಕ ಈ ರಾಜ್ಯವು ಗಮನ ಸೆಳೆದಿದೆ. ಈ ರಾಜ್ಯವನ್ನು ಇದರ ಪ್ರಮುಖ ಆಕರ್ಷಣೆಯಾದ ಥಾರ್ ಮರುಭೂಮಿಯಿಂದಲೇ ಮೂಲತ ಗುರುತಿಸಲಾಗುತ್ತದೆ. ಇಲ್ಲಿ ಕೃಷಿ ಆಧಾರಿತ ಉತ್ಪನ್ನಗಳನ್ನು ಯಥೇಚ್ಛವಾಗಿ ಉತ್ಪಾದಿಸಲಾಗುತ್ತದೆ ಮತ್ತು ಅದರೊಂದಿಗೆ ಉನ್ನತ ಮಟ್ಟದ ಕೃಷಿಯಿಂದ ಖಾದ್ಯ ತೈಲವೂ ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಲಾಗುತ್ತದೆ.
=============
7. ಛತ್ತೀಸಗಡ
ಇದು ಭಾರತದ 7ನೇ ವೇಗವಾಗಿ ಬೆಳೆಯುತ್ತಿರುವ ರಾಜ್ಯವಾಗಿದ್ದು, ಇಲ್ಲಿನ ಕೈಗಾರಿಕೆಗಳು ರಾಜ್ಯದೊಂದಿಗೆ ಧೀರ್ಘಕಾಲೀನ ಸಂಬಂಧವನ್ನು ಹೊಂದಿದೆ. ಇದು ಕೇವಲ ಹನ್ನೆರಡು ವರ್ಷಗಳ ಹಿಂದೆ ಈ ಸಹಸ್ರಮಾನದ ಉಷ:ಕಾಲದಲ್ಲಿ ಉದಯವಾದ ಎಳೆಯರಾಜ್ಯವಾದರೂ ಈ ವರ್ಷಗಳಲ್ಲಿ ಗಮನಾರ್ಹವಾಗಿ ಬೃಹತ್ ಅಭಿವೃದ್ದಿ ಹೊಂದಿದೆ. ಇಲ್ಲಿನ ಭಿಲಾಯ್ ಉಕ್ಕು ಕಾರ್ಖಾನೆ ಒಂದು ಲಾಭ ತಂದುಕೊಡುತ್ತಿರುವ ಉದ್ಯಮವಾಗಿದ್ದು, ದೇಶಾದ್ಯಂತ ಹೆಸರುವಾಸಿಯಾಗಿದೆ. ಇದು 1955 ರಷ್ಟು ಹಿಂದೆಯೇ ಸ್ಥಾಪಿತಗೊಂಡ ಭಾರತದ ಮೊದಲ ಸಾರ್ವಜನಿಕ ವಲಯದ ಉದ್ಯಮ. ವರ್ತಮಾನದಲ್ಲಿ ಬಹುತೇಕ ಪ್ರಮುಖ ಉದ್ಯಮಿಗಳು ಈ ರಾಜ್ಯದಲ್ಲಿ ಕೆಲಸ ಮಾಡುತ್ತಿದ್ದಾರೆ ಅಥವಾ ಬೃಹತ್ ಉದ್ಯಯಮವನ್ನು ಸ್ಥಾಪಿಸಲು ಸಜ್ಜಾಗಿದ್ದಾರೆ. ಜಾಗತಿಕ ಹಿಂಜರಿತ ಕಾಲದಲ್ಲಿಯೂ ರಾಜ್ಯವು ಎರಡಂಕಿ ಅಭಿವೃದ್ಧಿಯನ್ನು ಕಾಪಾಡಿಕೊಂಡು ಬಂದಿತ್ತು. ಈ ಅಸಾಧ್ಯವೆನಿಸುವಂತಹ ಕಾರ್ಯವನ್ನು ರಾಜ್ಯದ ಸೂಕ್ಷ್ಮ ಹಾಗೂ ಪ್ರಾಮಾಣಿಕ ಆಡಳಿತದಿಂದ ಸಾಧಿಸಲಾಯಿತು. ಈ ಅಪೂರ್ವ ಬೆಳವಣಿಗೆಯು ರಾಜ್ಯದ ಅಭಿವೃದ್ದಿ ಆಧಾರಿತ ನೀತಿ ಹಾಗೂ ರಾಜ್ಯದ ಹಲವು ಉದ್ಯಮಗಳ ಅಶ್ಚರ್ಯಕರ ಬೆಳವಣಿಗೆಯ ಕೊಡುಗೆಯಿಂದ ಸಾದ್ಯವಾಯಿತು.
===========
6. ಮಧ್ಯ ಪ್ರದೇಶ
ಭಾರತದ 6ನೇ ವೇಗವಾಗಿ ಬೆಳೆಯುತ್ತಿರುವ ರಾಜ್ಯವೆಂದು ಹೇಳಲಾಗುವ ಮಧ್ಯ ಪ್ರದೇಶದ ಅಸ್ತಿತ್ವ ೨೦೦೦ದಲ್ಲಿ ರಾಜ್ಯದ ವಿವಿಧ ಕೈಗಾರಿಕಾ ಕ್ಷೇತ್ರದಲ್ಲಿನ ಬೃಹತ್ ಪ್ರಮಾಣದ ಗಮನಾರ್ಹ ಬೆಳವಣಿಗೆ ಹಾಗೂ ಅಭಿವೃದ್ದಿಯಿಂದ ಬೆಳಕಿಗೆ ಬಂದಿತು. ಒಂದು ಅಂದಾಜಿನಂತೆ ಈ ರಾಜ್ಯವು ಕಳೆದ ವರ್ಷಕ್ಕೆ ಹೋಲಿಸಿದರ ಅತ್ಯಧಿಕ ಅಂದರೆ ಸುಮಾರು 20.33% ದಷ್ಟು ಜಿಡಿಪಿ ಹೊಂದಿದೆ ಮತ್ತು ಇದು ಒಂದು ರಾಜ್ಯದ ಸ್ಥಿರ ಅಭಿವೃದ್ದಿಯನ್ನು ಬಿಂಬಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಭಾರಿ ಪ್ರಮಾಣದಲ್ಲಿ ಉತ್ತಮ ಗುಣಮಟ್ಟದ ಸೋಯಾಬೀನ್ ಅನ್ನು ಇಲ್ಲಿನ ಸಾರವತ್ತಾದ ಭೂಮಿಯಲ್ಲಿ ಬೆಳೆಯಲಾಗುತ್ತದೆ. ದಿನದಿಂದ ದಿನಕ್ಕೆ ಇದರ ಬೇಡಿಕೆ ಹೆಚ್ಚುತ್ತಿದೆ.
==========
5. ಮಹಾರಾಷ್ಟ್ರ
ಮಹಾರಾಷ್ಟ್ರವು ಭಾರತದ ಜಾಗತಿಕ ಹಣಕಾಸು ರಾಜಧಾನಿಯಾಗಿ ಮಾರ್ಪಟ್ಟಿದೆ, ಜೊತೆಗೆ ವೇಗವಾಗಿ ಅಭಿವೃದ್ಧಿ ಹೊಂದುತ್ತಿರವ ಭಾರತದ ರಾಜ್ಯಗಳ ಪಟ್ಟಿಯಲ್ಲಿ ಐದನೇ ಸ್ಥಾನವನ್ನು ಪಡೆದಿದೆ. 99.2% ರಷ್ಟು ಗ್ರಾಮಗಳು ರಾಜ್ಯದ ಲಭ್ಯವಿರುವ ಎಲ್ಲಾ ರಸ್ತೆಗಳಿಗೆ ಸಂಪರ್ಕ ಹೊಂದಿದೆ. ಈ ರಾಜ್ಯವು ರಾಷ್ಟ್ರದ 9.2% ಪ್ರತಿಶತದಷ್ಟು ರೈಲು ಮಾರ್ಗವನ್ನು ಹೊಂದಿರುವುದರ ಜೊತೆಗೆ ಎರಡು ರೈಲ್ವೇ ವಲಯಗಳನ್ನು ಮತ್ತು ಕೆಲವು ಪ್ರಮುಖ ಬಂದರುಗಳನ್ನು ಹೊಂದಿದೆ. ಇದು ನಾಲ್ಕು ಅಂತರರಾಷ್ಟ್ರೀಯ ಹಾಗೂ ಏಳು ದೇಶೀಯ ವಿಮಾನ ನಿಲ್ದಾಣಗಳನ್ನಲ್ಲದೇ, ವಿಮಾನ ಉಡ್ದಯನಕ್ಕೆ ಅನುಕೂಲವಾದ 20 ಏರ್ ಸ್ಟ್ರಿಪ್ ಗಳನ್ನು ಹೊಂದಿದೆ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ನೀವು ನಿಮ್ಮ ಸರಕನ್ನು ಯಾವುದೇ ರೀತಿಯಿಂದ ಸಾಗಿಸಲು ಬಯಸಿದರೂ ನಿಮಗೆ ಒಂದಕ್ಕಿಂತ ಹೆಚ್ಚು ವಿಶಿಷ್ಟವಾದ ಆಯ್ಕೆಗಳು ಲಭ್ಯವಿದೆ. ಈ ರಾಜ್ಯವು ಜನರು ಹಾಗೂ ಸರಕುಗಳ ಸುಲಭ ಚಲನ ವಲನ ಗಳಿಗೆ ಅನುಕೂಲವಾಗುವಂತಹ ವಾತಾವರಣ ಹೊಂದಿದೆ. ಸಾರಿಗೆ ಮಾತ್ರವಲ್ಲದೇ, ನಿಮ್ಮ ಕೈಗಾರಿಕೆಯನ್ನು ದೊಡ್ಡ ಪ್ರಮಾಣದಲ್ಲಿ ನಿರ್ಮಿಸಲು, ಇಲ್ಲಿ ನಿಮಗೆ ಬಹಳಷ್ಟು ಆಯ್ಕೆಗಳಿವೆ.
================
4. ಆಂಧ್ರ ಪ್ರದೇಶ
ಆಂಧ್ರ ಪ್ರದೇಶವು ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದಿದ ಭಾರತದ ಹತ್ತನೇ ರಾಜ್ಯವೆಂದು ಹೇಳಲಾಗುತ್ತದೆ. ಇದು ಅತೀವವಾದ ಸಾಮಾಜಿಕ ಮತ್ತು ಆರ್ಥಿಕ ಕ್ರಾಂತಿಯನ್ನು ಹೊಂದಿರುವುದಾಗಿ ಪರಿಗಣಿಸಲ್ಪಟ್ಟಿದೆ .ಶ್ರೀಮಂತ ಸಾಂಸ್ಕೃತಿಕ ಪರಂಪರೆಯಲ್ಲಿ ಮಿಂದಿರುವುದಲ್ಲದೇ, ಉತ್ತಮ ಪ್ರವಾಸೋದ್ಯಮದ ತಾಣಗಳ ಬೆಂಬಲವನ್ನೂ ಹೊಂದಿದೆ. ಇದರೊಂದಿಗೆ ನೈಸರ್ಗಿಕ ಸಂಪನ್ಮೂನಗಳೂ ಹೇರಳವಾಗಿದೆ. ಇದು ಪೂರ್ವ ಹಾಗೂ ಆಗ್ನೇಯ ಏಷಿಯಾದ ನೈಸರ್ಗಿಕ ಹೆಬ್ಬಾಗಿಲಾಗಿಯೂ ಕಾರ್ಯ ನಿರ್ವಹಿಸುತ್ತದೆ. ಇದು ತನ್ನಲ್ಲಿರುವ ವಿಮಾನ ನಿಲ್ದಾಣ, ಬಂದರು ಹಾಗೂ ರಸ್ತೆ ಸಂಪರ್ಕದ ಮೂಲಕ ಭಾರತದೊಂದಿಗೆ ಇಡೀ ವಿಶ್ವವನ್ನು ಗಮನಾರ್ಹವಾಗಿ ಸಂಪರ್ಕಿಸುತ್ತದೆ. ಇದು ವ್ಯಾವಹಾರಿಕ ಮನೋಭಾವದ ವ್ಯಕ್ತಿಗಳಿಗೆ ಕೈಗಾರಿಕಾ ಮುಖ್ಯ ತಾಣವೆಂದು ದೇಶಾದ್ಯಂತ ಪರಿಗಣಿಸಲ್ಪಟ್ಟಿದೆ. ಇದಲ್ಲದೇ ರಾಜ್ಯವು ಕಾರ್ಮಿಕ ಸುಧಾರಣಾ ನೀತಿಗಳಲ್ಲಿ ಮುಂಚೂಣಿಯಲ್ಲಿದೆ. ಆಟೋಮೊಬೈಲ್, ವಾಹನ ಬಿಡಿಭಾಗಗಳು, ಜವಳಿ ಮತ್ತು ಉಡುಪು ಉದ್ಯಮ, ಎಲೆಕ್ಟ್ರಾನಿಕ್, ಐಟಿ, ಕೃಷಿ ಮತ್ತು ಆಹಾರ ಸಂಸ್ಕರಣೆ ಉದ್ಯಮ, ವಿದ್ಯುತ್, ಔಷಧಿ ಉದ್ಯಮ ಮತ್ತು ಜೀವ ವಿಜ್ಜ್ಞಾನ ಕ್ಷೇತ್ರಗಳಲ್ಲಿ, ತನ್ನ ಉತ್ತಮ ದರ್ಜೆಯ ನೀತಿಗಳಿಂದ ಉದ್ಯಮವನ್ನು ಕ್ರಾಂತಿಕಾರಿಗೊಳಿಸುತ್ತಿದೆ.
===============
3. ಗುಜರಾತ್
ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದಿದ ಭಾರತದ ಮೂರನೇ ರಾಜ್ಯ ಗುಜರಾತ್ ಎಂದು ಹೇಳಲಾಗುತ್ತದೆ. ಇದು ಭಾರತದ ಜಿಡಿಪಿಯ ಪರಿಗಣನೆಯಲ್ಲಿ ಒಟ್ಟು ಏಳು ಪ್ರತಿಶತದಷ್ಟು ನಿವ್ವಳ ಬಂಡವಾಳ ಹೊಂದಿದೆಯೆಂದು ಅಂದಾಜಿಸಲಾಗಿದೆ. ಜಾಮ್ ನಗರ್ ತೈಲ ಸಂಸ್ಕರಣಾ ಘಟಕವು ಈ ಉದಯೋನ್ಮುಖ ರಾಜ್ಯದ ಕೈಗಾರಿಕಾ ಬೆಳವಣಿಗೆ ಹಾಗೂ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿ ತನ್ನ ಉಪಸ್ಥಿತಿಯನ್ನು ದೊಡ್ಡ ಪ್ರಮಾಣದಲ್ಲಿ ಗಮನಾರ್ಹವಾಗಿ ಸಾರಿದೆ. ತನ್ನೊಡಲೊಳಗೆ ಹಲವಾರು ಅದ್ಭುತ ಪ್ರವಾಸೀ ತಾಣಗಳನ್ನು ಹೊಂದಿರುವ ಇದು ಭಾರತದ ಪ್ರಮುಖ ಪ್ರವಾಸೋದ್ಯಮ ಸ್ಥಳಗಳಲ್ಲಿ ಒಂದಾಗಿದೆ.
==============
2. ಕರ್ನಾಟಕ
ಜಾಗತಿಕ ಮಟ್ಟದಲ್ಲಿ ಕರ್ನಾಟಕವು ಅತ್ಯಂತ ಮುಂದಾಲೋಚನೆ ಹೊಂದಿರುವ ಭಾರತದ ಪ್ರಗತಿಪರ ರಾಜ್ಯವೆಂದು ಪರಿಗಣಿತವಾಗಿದೆ. ತನ್ನಲ್ಲಿರುವ ಉದ್ದಿಮೆಗಳೊಂದಿಗೆ ವ್ಯವಹಾರಿಕವಾಗಿ ಸ್ಪಂದಿಸಿ ಅವುಗಳನ್ನು ತನ್ನಲ್ಲೇ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯೊನ್ಮುಖವಾಗುವಲ್ಲಿ ರಾಜ್ಯದ ದಾಖಲೆ ಸಾಬೀತಾಗಿದೆ. ಇದರ ಯಶಸ್ಸಿನ ಹಿಂದಿನ ಪ್ರಮುಖ ಅಂಶವೆಂದರೆ ರಾಜ್ಯದ ಜ್ಞಾನ ಭಂಡಾರ. ಭಾರತದ ಅತ್ಯಂತ ಹಳೆಯ ಮತ್ತು ಉನ್ನತ ಮನ್ನಣೆ ಹೊಂದಿದ ಹಲವಾರು ಶೈಕ್ಷಣಿಕ ಸಂಸ್ಥೆಗಳು ಇಲ್ಲಿ ಸ್ಥಿತವಾಗಿದೆ. ಇಡೀ ಏಷಿಯಾದಲ್ಲೇ ಸಾಟಿಯಿಲ್ಲದ ಆಗಾಧ ಪ್ರಮಾಣದ ಜ್ಞಾನ ಮತ್ತು ತಾಂತ್ರಿಕ ಸಾಮರ್ಥ್ಯಗಳನ್ನು ಈ ರಾಜ್ಯ ಒದಗಿಸುತ್ತದೆ. ರಾಜ್ಯದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವುದು ಪ್ರತಿಭೆಯ ಲಭ್ಯತೆ, ಜನರ ಉತ್ಸಾಹ ಮತ್ತು ಪ್ರಪಂಚದ ಇತರ ಕೇಂದ್ರಗಳಿಗೆ ಇರುವ ಇದರ ಗಮನಾರ್ಹ ಸಂಪರ್ಕ. ಮುಂಚೂಣಿಯಲ್ಲಿರುವ ವಿಶ್ವದ ಹಲವಾರು ಸಂಸ್ಥೆಗಳು ಕರ್ನಾಟಕದಲ್ಲಿ ತಮ್ಮ ಸಂಶೋಧನಾ ಘಟಕಗಳನ್ನು ಸ್ಥಾಪಿಸಿವೆ. ಕರ್ನಾಟಕವು ವಾಹನ, ಕೃಷಿ ಆಧಾರಿತ, ಅಂತರಿಕ್ಷಯಾನ, ಉಡುಪು, ತೈಲ ಮತ್ತು ಅನಿಲ, ಉಕ್ಕು, ಆಹಾರ ಸಂಸ್ಕರಣೆ, ಪ್ರವಾಸೋದ್ಯಮ, ಮತ್ತು ವಿವಿಧ ಇತರ ರೀತಿಯ ಕೈಗಾರಿಕಾ ವಲಯಗಳಿಗೆ ತನ್ನ ಬಾಗಿಲು ತೆರೆಯುತ್ತಿದೆ.
==============
1. ನವ ದೆಹಲಿ
ಭಾರತದ ರಾಜಧಾನಿಯೆಂದೇ ಜನಪ್ರಿಯವಾಗಿ ಕರೆಯಲ್ಪಡುವ ನವ ದೆಹಲಿಯು ಕೈಗಾರೀಕರಣ ಇತಿಹಾಸದಲ್ಲಿ ಭಾರತದಲ್ಲಿಯೇ ಹೊಸ ಮಾನದಂಡವನ್ನು ಪಡೆದುಕೊಂಡಿದೆ. ಭಾರತದಲ್ಲಿಯೇ ಅತಿವೇಗವಾಗಿ ಬೆಳೆಯುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ನವದೆಹಲಿ ಗಣನೀಯವಾಗಿಯೇ ಪ್ರಥಮ ಸ್ಥಾನದಲ್ಲಿದೆ. ಕಳೆದ ವರ್ಷದ ಅಂದಾಜಿನಂತೆ ರಾಜ್ಯವು ಸುಮಾರು 2.17 ಕೋಟಿಯಷ್ಟು ಜನಸಂಖ್ಯೆ ಹೊಂದಿದೆ. ರಾಷ್ಟ್ರೀಯ ರಾಜಧಾನಿಯು ತನ್ನ ಸೌಂದರ್ಯ ಮತ್ತು ಶೈಲಿಯನ್ನು ಸಮರ್ಪಕವಾಗಿ ತಕ್ಕ ರೀತಿಯಲ್ಲಿ ಕಾಯ್ದುಕೊಂಡಿದೆ. ನವದೆಹಲಿಯ ಪ್ರಮುಖ ಆಕರ್ಷಣೆಗಳಲ್ಲಿ ಕುತುಬ್ ಮಿನಾರ್, ಕೆಂಪು ಕೋಟೆ, ಜಾಮಾ ಮಸೀದಿ, ಇಂಡಿಯಾ ಗೇಟ್, ರಾಷ್ಟ್ರಪತಿ ಭವನ ಮುಂತಾದವುಗಳು ಒಳಗೊಂಡಿದೆ.
=================
ಕೊನೆ ಮಾತು
ಈ ಮೂಲಕ, ನಾವು ನಮ್ಮ ಭಾರತದಲ್ಲಿ ಅತ್ಯಂತ ವೇಗವಾಗಿ ಅಭಿವೃದ್ದಿ ಹೊಂದುತ್ತಿರುವ ಅಗ್ರ ಹತ್ತು ರಾಜ್ಯಗಳ ಸಾರಾಂಶ ಪಟ್ಟಿ ಒದಗಿಸಿದ್ದೇವೆ. ಈ ರಾಜ್ಯಗಳು ಉದ್ಯಮ, ಕೃಷಿ, ಆಹಾರ ಸಂಸ್ಕರಣೆ, ರಸ್ತೆಗಳು ಮತ್ತು ಹೆದ್ದಾರಿಗಳು, ವಾಹನ ಉದ್ಯಮ, ವಿದ್ಯುತ್ ಮತ್ತು ಶಕ್ತಿ, ನೀರಾವರಿ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಗಮನಾರ್ಹವಾದ ಬೆಳವಣಿಗೆ ತೋರಿಸಿ, ದಿನ ದಿನಕ್ಕೂ ಹೆಚ್ಚಿನ ಅಭಿವೃದ್ದಿಯನ್ನು ಸಾಧಿಸುತ್ತಿವೆ.
ಗುರುವಾರ, ಮಾರ್ಚ್ 29, 2018
2018ರಲ್ಲಿ ಅತಿ ವೇಗವಾಗಿ ಅಭಿವೃದ್ದಿಯಾಗುತ್ತಿರುವ ಭಾರತದ 10 ರಾಜ್ಯಗಳು
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ