ಬುಧವಾರ, ಮಾರ್ಚ್ 28, 2018

ಇದು ಪ್ರಪಂಚದಲ್ಲೇ ಅತಿ ಎತ್ತರದ ಆಂಜನೇಯ ಮೂರ್ತಿ!! ಇದೆಲ್ಲಿದೆ? ಇದರ ವಿಶೇಷತೆಗಳೇನು ಗೊತ್ತಾ?

===============
ಹೌದು.  ದೇಶದಲ್ಲಿ ಅತಿ ಎತ್ತರದ ರಾಮ-ಲಕ್ಷ್ಮಣ ಸಮೇತ 62 ಅಡಿಯ ಏಕಶಿಲಾ ಹನುಮಾನ್​ ಮೂರ್ತಿ ಕೆತ್ತನೆ ಕಾರ್ಯ ಬಹುತೇಕ ಮುಗಿದಿದ್ದು 26 ಮಾರ್ಚ ರಂದು ಕೋಲಾರದಿಂದ ಬೆಂಗಳೂರಿನ ಹೆಚ್.ಬಿ.ಆರ್ ಬಡಾವಣೆಯ ಕಡೆಗೆ ಸಾಗಲಿಸಲು ವಿಶೇಷ ಪೂಜೆ ಸಲ್ಲಿಸಿದ್ರು.
=======
ಕೋಲಾರ ತಾಲ್ಲೂಕಿನ ಬೆಳ್ಳೂರು ಗ್ರಾಮ ಪಂಚಾಯಿತಿಯ ಕಚರಕನಹಳ್ಳಿ ಗ್ರಾಮದ ಮುನಿರಾಜು ಎಂಬುವರ ಜಮೀನಿನಲ್ಲಿ ಉತ್ತಮವಾದ ಹಾಗೂ ಗುಣಮಟ್ಟದ ಕಲ್ಲು ಸಿಕ್ಕಿದ್ದು ಅದೇ ಕಲ್ಲಿನಲ್ಲಿ ಬೃಹತ್​ ಹನುಮಂತ ಕೆತ್ತನೆ ಕಾರ್ಯ ನಡೆದಿದೆ. ಶಿಲ್ಪಿಗಳ ತವರೂರು ಶಿವಾರಪಟ್ಟಣದ ಶಿಲ್ಪಿ ರಾಜಶೇಖರಾಚಾರ್ಯ ರವರು ಇಂಥಾದೊಂದು ದೊಡ್ಡ ವಿಗ್ರಹ ಕೆತ್ತನೆ ಕಾರ್ಯದ ಹೊಣೆನ್ನು ಹೊತ್ತಿದ್ದು ಕಳೆದ ಮೂರು ವರ್ಷಗಳ ಮೂರ್ತಿ ಕೆತ್ತನೆ ಮಾಡುತ್ತಿದ್ದು ಇಂದಿಗೆ ಶೇ. 60 ರಷ್ಟು ಕೆತ್ತನೆ ಕಾರ್ಯ ಮುಗಿದಿದೆ. ಕರ್ನಾಟಕ, ಆಂಧ್ರ, ತಮಿಳುನಾಡಿನ ಒಟ್ಟು 25 ಕ್ಕೂ ಹೆಚ್ಚು ಶಿಲ್ಪಿಗಳು ಕಳೆದ ಎರಡುವರೆ ವರ್ಷದಿಂದ ಈ ಬೃಹತ್​ ಆಂಜನೇಯನ ಕೆತ್ತನೆ ಕಾರ್ಯದಲ್ಲಿ ನಿರಂತವಾಗಿ ತೊಡಗಿದ್ದಾರೆ. ಸುಮಾರು 750 ಟನ್​ ತೂಕದ ಈ ಬೃಹತ್ ಬೃಹದ್ರೂಪಿ ಶ್ರೀ ಹನುಮಾನ್​ ನ 62 ಅಡಿ ಏಕಶೀಲಾ ವಿಗ್ರಹವನ್ನು ನರಸಾಪುರದಿಂದ ಬೆಂಗಳೂರಿಗೆ ವಿಗ್ರಹ ಸಾಗಾಣೆ ಮಾಡುವ ಕೆಲಸವನ್ನು ಇಂದು ಪ್ರಾರಂಭಸಲಾಗುವುದು. ನಂತ್ರ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡುವ ಸ್ಥಳಕ್ಕೆ ಸಾಗಾಣೆ ಮಾಡಿದ ನಂತರ ವಿಗ್ರಹಕ್ಕೆ ಅಂತಿಮ ಸ್ಪರ್ಶ ಕೊಡುವ ಕೆಲಸ ನಡೆಯಲ್ಲಿದೆ ಎಂದು ವಿಗ್ರಹ ನಿರ್ಮಾಣ ಮಾಡುತ್ತಿರುವ ಟ್ರಸ್ಟ್‌ ನ ಅಧ್ಯಕ್ಷ ಎಂ.ಎನ್ ರೆಡ್ಡಿ ತಿಳಸಿದ್ರು.
==========
ಇನ್ನು ಪ್ರಪಂಚದಲ್ಲೇ ಇಲ್ಲದ ಇಂಥಹದೊಂದು ಬೃಹತ್​ ಆಂಜನೇಯ ವಿಗ್ರಹವನ್ನು ಬೆಂಗಳೂರಿನ, ಹೆಚ್​.ಬಿ.ಆರ್ ಬಡಾವಣೆ ಕಾಚರಕನಹಳ್ಳಿ ಗ್ರಾಮದ ಶ್ರೀಕೋದಂಡರಾಮಸ್ವಾಮಿ ದೇವಾಲಯದ ಆವರಣದಲ್ಲಿ ಪ್ರತಿಷ್ಠಾಪಿಸಲು ಉದ್ದೇಶಿಸಲಾಗಿದೆ. ಈ ದೇವಾಲಯದ ಶ್ರೀ ರಾಮಚೈತನ್ಯ ವರ್ಧಿನಿ ಟ್ರಸ್ಟ್​​ನ ಸದಸ್ಯರುಗಳು ಇಂಥಾದೊಂದು ಬೃಹತ್ ವಿಗ್ರಹದ ನಿರ್ಮಾತೃಗಳು. ಟ್ರಸ್ಟ್​ ನ ಅಧ್ಯಕ್ಷ ಎಂ.ಎನ್​.ರೆಡ್ಡಿ ಹಾಗೂ ಅಲ್ಲಿನ ಸದಸ್ಯರುಗಳು ಕಳೆದ 25 ವರ್ಷಗಳಿಂದ ಇಂಥಾದೊಂದು ಬೃಹತ್​ ವಿಗ್ರಹ ಪ್ರತಿಷ್ಠಾಪನೆಗೆ ಆಸಕ್ತರಾಗಿ ನಂತರ ಏಕಶಿಲಾ ವಿಗ್ರಹ ನಿರ್ಮಾಣಕ್ಕೆ ಮನಸ್ಸು ಮಾಡಿದ್ದಾರೆ. ಈ ವಿಗ್ರಹದ ನಿರ್ಮಾಣಕ್ಕೆ ಹತ್ತು ಕೋಟಿಗೂ ಹೆಚ್ಚು ಹಣ ಖರ್ಚಾಗಲಿದೆ. ಸದ್ಯಕ್ಕೆ ಮೂರು ಕೋಟಿ ಕರ್ಚು ಆಗಿದ್ದು ಸುಮಾರು 750 ಟನ್​ ತೂಕದ ಈ ಬೃಹತ್​ ವಿಗ್ರಹವನ್ನು ನರಸಾಪುರದಿಂದ ಕಾಚರಕನಹಳ್ಳಿಗೆ ಸಾಗಿಸುವ ಕಾರ್ಯ ನಡೆಯುತ್ತಿದೆ. ಪುಣೆ ಹಾಗೂ ಮುಂಬಯಿ ಯಿಂದ ಬೃಹತ್​ ವಾಹನದೊಂದಿಗೆ ತೆಗೆದುಕೊಂಡು ಹೋಗಲು ರಸ್ತೆ ಸರ್ವೆಕಾರ್ಯ ಹಾಗೂ ವಿವಿದ ಇಲಾಖೆಗಳಿಂದ ಅನುಮತಿ ಪಡೆಯಲಾಗಿದೆ. ಇಂದು ವಿಶೇಷ ಪೂಜೆ ಸಲ್ಲಿಸಿ ವಿಗ್ರಹವನ್ನು ಬೃಹತ್ ಲಾರಿಯಲ್ಲಿ ಸಾಗಿಸಲು ಮುಂದಾಗಿದ್ದಾರೆ. ಇದು ನಿಜವಾಗಿಯೂ ಆಕಾಶ ಭೂಮಿಯನ್ನು ಒಂದು ಮಾಡುವ ಪ್ರತಿಮೆಯಂತಿದೆ.
=========
ಇದರ ಹಿಂಗೆ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮಿಗಳು ದೇವಾಲಯದ ಆವರಣದಲ್ಲಿ ಕಲ್ಲಿನ ಹನುಮಾನ ವಿಗ್ರಹ ಸ್ಥಾಪಿಸುವ ಸಲಹೆ ನೀಡಿದ್ದರು. ಅದರಂತೆ ಶ್ರೀರಾಮ ವರ್ಧಿನಿ ಚೈತನ್ಯ ಟ್ರಷ್ಟ್ ಬೃಹದಾಕಾರದ ಶಿಲೆಯ ಹುಡುಕಾಡದಲ್ಲಿ ತೊಡಗಿದಾಗ ನರಸಾಪುರ ಸಮೀಪದ ಭೈರಸಂದ್ರ ಗ್ರಾಮದ ಮುನಿರಾಜು ಎಂಬುವವರ ಜಮೀನಿನಲ್ಲಿ ಇಂತಹ ಬೃಹತ್ ಶಿಲೆ ಇರುವುದನ್ನು ಶಿಲ್ಪಿ ರಾಜಶೇಖರಾಚಾರ್ಯ ಪತ್ತೆ ಹಚ್ಚಿದ್ದರು. ಕೆತ್ತನೆಯ ಸಂದರ್ಭದಲ್ಲಿ ಶ್ರೀಗಳು ಎರಡು ಬಾರಿ ಸ್ಥಳಕ್ಕೆ ಬೇಟಿ ಇತ್ತು ಸಲಹೆ ಸೂಚನೆ ನೀಡಿದ್ದರು.
================

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ