ಗುರುವಾರ, ಮಾರ್ಚ್ 29, 2018

ದೇಶದ ಮೊದಲ ರೋಡ್ ರೈಲರ್'ಗೆ ಅಸ್ತು

============
ಚೆನ್ನೈ: ಭಾರತದ ಮೊಟ್ಟ ಮೊದಲ ರೋಡ್-ರೈಲರ್ ರೈಲು ಶೀಘ್ರದಲ್ಲೇ ಆರಂಭವಾಗುವ ನಿರೀಕ್ಷೆಯಿದೆ. ದಕ್ಷಿಣ ರೈಲ್ವೆ ಸಿದ್ಧಪಡಿಸುತ್ತಿರುವ ಈ ರೋಡ್ -ರೈಲರ್ ಟ್ರೇನ್‌ಗೆ ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವಾಲಯ ಅನುಮೋದನೆ ನೀಡಿದೆ.
========
ಇದರಿಂದಾಗಿ ಸರಕು ಸಾಗಣೆ ಕ್ಷೇತ್ರದಲ್ಲಿ ಭಾರತ ಇನ್ನೊಂದು ಮೈಲಿಗಲ್ಲು ಸ್ಥಾಪಿಸುವ ನಿರೀಕ್ಷೆಯಿದೆ. 'ರೋಡ್ ರೈಲರ್ ಯೂನಿಟ್' ರಸ್ತೆಯ ಮೇಲೆ ಲಾರಿ ರೀತಿ ಹಾಗೂ ಹಳಿಯ ಮೇಲೆ ರೈಲಿನ ರೀತಿ ಇರಲಿದೆ.
========
ರೈಲಿನ ಮೂಲಕ ಸರಕು ಸಾಗಣೆಯಾದ ಬಳಿಕ, ಸರಕನ್ನು ಅನ್‌ಲೋಡ್ ಮಾಡಿ ಪುನಃ ಲಾರಿ ಮೂಲಕ ಸರಕು ಸಾಗಿಸುವ ಅಗತ್ಯ ಇದರಿಂದ ಬೀಳದು. ನಿಲ್ದಾಣಕ್ಕೆ 'ರೋಡ್ ರೈಲರ್ ಯೂನಿಟ್' ತಲುಪುತ್ತಿದ್ದಂತೆಯೇ ಲಾರಿಯಾಗಿ ಮಾರ್ಪಾಡಾಗಿ ರಸ್ತೆಗೆ ಇಳಿಯುತ್ತದೆ.
=========
ಸರಕನ್ನು ಸಂಬಂಧಪಟ್ಟವರಿಗೆ ನೇರವಾಗಿ ತಲುಪಿಸುತ್ತದೆ.
==========
ಪ್ರತಿ ರೋಡ್ ರೈಲರ್ ಯೂನಿಟ್‌ಗೆ 8 ಲಾರಿ ಚಕ್ರಗಳು ಇರುತ್ತವೆ. ಪ್ರತಿ ಬೋಗಿ 4 ರೈಲು ಚಕ್ರಗಳನ್ನು ಹೊಂದಿರುತ್ತದೆ. ಇದರಲ್ಲಿನ ಪ್ರತಿ ವ್ಯಾಗನ್ 30 ಟನ್‌ರಿಂದ 50 ಟನ್ ಭಾರದ ವಸ್ತುಗಳನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ