===========
ಹಾಂಕಾಂಗ್: ವಿಶ್ವದಲ್ಲೇ ಅತೀ ಉದ್ದದ ಸಮುದ್ರ ಸೇತುವೆಯನ್ನು ಚೀನಾ ನಿರ್ಮಿಸಿದ್ದು, ಸೇತುವೆಯ ವೀಕ್ಷಣೆಗೆ ಈ ವಾರ ಅವಕಾಶ ಕಲ್ಪಿಸಲಾಗುವುದು ಎಂದು ಸರ್ಕಾರ ಹೇಳಿದೆ.
==========
ಆದರೆ ಸೇತುವೆಯನ್ನು ಸಂಚಾರ ಮುಕ್ತಗೊಳಿಸುವ ದಿನಾಂಕವನ್ನು ಅಧಿಕಾರಿಗಳು ಪ್ರಕಟಿಸಿಲ್ಲ.55 ಕಿ.ಮೀ. ಉದ್ದದ ಸೇತುವೆಯು ನೀರಿನೊಳಗೆ 6.7ಕಿ.ಮೀ. ಮಾರ್ಗವನ್ನು ಹೊಂದಿದೆ.
==========
'ಈ ಸೇತುವೆ ಹಾಂಕಾಂಗ್ ಮತ್ತು ದಕ್ಷಿಣ ಚೀನಾದ ಜುಹೈ ನಗರಕ್ಕೆ ಸಂಪರ್ಕ ಕಲ್ಪಿಸುತ್ತದೆ. ಒಂಬತ್ತು ವರ್ಷಗಳ ಹಿಂದೆ ಇದರ ನಿರ್ಮಾಣ ಕಾರ್ಯ ಆರಂಭಿಸಲಾಗಿತ್ತು. ಈ ಬೃಹತ್ ಯೋಜನೆಗೆ ಸುಮಾರು ₹ 9.83 ಲಕ್ಷ ಕೋಟಿ (15.1ಬಿಲಿಯನ್ ಡಾಲರ್) ವೆಚ್ಚ ಮಾಡಲಾಗಿದೆ' ನೀರಿನೊಳಗಿನ ಸುರಂಗ ಮಾರ್ಗ ನಿರ್ಮಾಣಕ್ಕೆ 80 ಸಾವಿರ ಟನ್ ಪೈಪ್‌ಗಳನ್ನು ಬಳಸಲಾಗಿದೆ' ಎಂದು ಮೂಲಗಳು ತಿಳಿಸಿವೆ.
=========
60 ಐಫೆಲ್ ಟವರ್ ನಿರ್ಮಿಸುವಷ್ಟು ಉಕ್ಕನ್ನು ಸೇತುವೆ ನಿರ್ಮಾಣಕ್ಕೆ ಬಳಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
==========
ಗುರುವಾರ, ಮಾರ್ಚ್ 29, 2018
ಉದ್ದದ ಸೇತುವೆ ವೀಕ್ಷಣೆಗೆ ಸಿದ್ದ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ