ಟೊರಾಂಟೊ (ಕೆನಡ), ಮಾ. 30: ಕೆನಡದ ಆಲ್ಬರ್ಟ ರಾಜ್ಯದಲ್ಲಿ, ಎಪ್ರಿಲ್ 12ರಿಂದ ಪೇಟಧಾರಿ ಸಿಖ್ಖರು ಹೆಲ್ಮೆಟ್ ಧರಿಸದೆ ಮೋಟಾರ್‌ಸೈಕಲ್‌ಗಳನ್ನು ಚಲಾಯಿಸಬಹುದಾಗಿದೆ.
ಕೆನಡದಲ್ಲಿ ಬ್ರಿಟಿಶ್ ಕೊಲಂಬಿಯ ಮತ್ತು ಒಂಟಾರಿಯೊ ರಾಜ್ಯಗಳ ಬಳಿಕ ಅತಿ ಹೆಚ್ಚಿನ ಸಿಖ್ ಜನಸಂಖ್ಯೆ ಆಲ್ಬರ್ಟ ರಾಜ್ಯದಲ್ಲಿದೆ.
ಬ್ರಿಟಿಶ್ ಕೊಲಂಬಿಯ ಮತ್ತು ಮನಿಟೋಬ ರಾಜ್ಯಗಳು ಈಗಾಗಲೇ ಸಿಖ್ಖರು ಹೆಲ್ಮೆಟ್‌ಗಳನ್ನು ಧರಿಸದೆ ಬೈಕ್‌ಗಳನ್ನು ಚಲಾಯಿಸಲು ಅವಕಾಶ ನೀಡಿವೆ.
ಸಿಖ್ ಸಮುದಾಯದ ಬೇಡಿಕೆಯಂತೆ, ಅವರ ನಾಗರಿಕ ಹಕ್ಕುಗಳು ಮತ್ತು ಧಾರ್ಮಿಕ ಅಭಿವ್ಯಕ್ತಿಯನ್ನು ಮನ್ನಿಸಿ ಈ ವಿನಾಯಿತಿಯನ್ನು ನೀಡಲಾಗಿದೆ ಎಂದು ಆಲ್ಬರ್ಟದ ಸಾರಿಗೆ ಸಚಿವ ಬ್ರಯಾನ್ ಮ್ಯಾಸನ್ ಗುರುವಾರ ತಿಳಿಸಿದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ