ಬುಧವಾರ, ಮಾರ್ಚ್ 28, 2018

ಮಯನ್ಮಾರ್ ನೂತನ ಅಧ್ಯಕ್ಷ ಯ್ಯಾರು?

ಮಯನ್ಮಾರ್ ನೂತನ ಅಧ್ಯಕ್ಷರಾಗಿ ಜನ ನಾಯಕಿ ಆಂಗ್ ಸಾನ್ ಸೂ ಕಿ ಅವರ ನಿಷ್ಠಾವಂತ ಯು ವಿನ್ ಮೈಂಟ್ ಆಯ್ಕೆಯಾಗಿದ್ದಾರೆ. ಆರೋಗ್ಯದ ಕಾರಣಗಳಿಗಾಗಿ ನಿವೃತ್ತರಾದ ಅಧ್ಯಕ್ಷ ಹಿಟಿನ್ ಕ್ವಾವ್ ಅವರ ಸ್ಥಾನಕ್ಕೆ ವಿನ್ ಮೈಂಟ್ ನೇಮಕರಾಗಿದ್ದಾರೆ. ರಾಷ್ಟ್ರದಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ಜಾರಿಗೆ ತರಲು ಮಯನ್ಮಾರ್ ನಾಗರಿಕ ಸರ್ಕಾರ ಪ್ರಯತ್ನ ನಡೆಸಿದೆ. ಮಿಲಿಟರಿ ಹಿಂಸಾಚಾರ, ದಂಗೆಕೋರರು ಮತ್ತು ಮುಸ್ಲಿಂ ರೋಹಿಂಗ್ಯಾ ಅಲ್ಪಸಂಖ್ಯಾತರ ವಿರುದ್ಧದ ಕ್ರೂರ ಕ್ರಮಗಳಿಂದಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಬಾರೀ ಟೀಕೆಗಳನ್ನು ಎದುರಿಸುತ್ತಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ