ಗುರುವಾರ, ಮಾರ್ಚ್ 29, 2018

ಏನಿದು FSSAI ?

ಏನಿದು FSSAI ?
==========
ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ :
========
ಇದು ಭಾರತದ್ಲಲಿ ಸಾರ್ವಜನಿಕ ಬಳಕೆಗೆ ಲಭ್ಯವಿರುವ ಎಲ್ಲ ಮಾದರಿಯ ಸಂಸ್ಕರಿತ/ಪಾಕ್ಡ್ ಆಹಾರ ವಸ್ತುಗಳ ಗುಣಮಟ್ಟ ನಿರ್ಧರಣೆಗೆ ಇರುವ ಒಂದು ಮಾನದಂಡ.
===========
ಇದು ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿಯಲ್ಲಿ ಕರ್ತವ್ಯ ನಿರ್ವಹಿಸುವ ಸಂಸ್ಥೆ. ಈ ಸಂಸ್ಥೆಯನ್ನು 5ನೇ ಆಗಸ್ಟ್ 2011ರಲ್ಲಿ ಸ್ಥಾಪಿಸಲಾಯಿತು.
=========
ಇದರ ಪ್ರಧಾನ ಕಚೇರಿ ದೆಹಲಿಯಲ್ಲಿದ್ದು, ದೇಶಾದ್ಯಂತ ಅನೇಕ ಪ್ರಯೋಗಾಲಯಗಳು ಆಹಾರ ಗುಣಮಟ್ಟ ನಿರ್ಧರಣೆಗೆ ಈ ಸಂಸ್ಥೆಗೆ ಸಹಭಾಗಿಯಾಗಿವೆ.
==========
ಹೈದರಾಬಾದ್ ನಲ್ಲಿರುವ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ನ್ಯುಟ್ರಿಷನ್ (NIN)ಸಂಸ್ಥೆಯ ಜೊತೆ ಸಹಭಾಗಿತ್ವ ಹೊಂದಿದೆ.
°===========
ಇದು ಸಂಸ್ಥೆಯ ವೆಬ್ ವಿಳಾಸ : http://www.fssai.gov.in/
===========
2006ರ ಆಹಾರ ಸುರಕ್ಷೆ ಹಾಗೂ ಗುಣಮಟ್ಟ ಕಾಯ್ದೆಯಡಿಯಲ್ಲಿ ಈ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಕಾಯ್ದೆಯ ಪ್ರತಿ.
=========
ಭಾರತದಲ್ಲಿ ಬಳಸಲ್ಪಡುವ ಆಹಾರ ಪದಾರ್ಥಗಳನ್ನು ವಿವಿಧ ವಿಭಾಗಗಳಲ್ಲಿ ವಿಂಗಡಿಸಿ ಮಾರುಕಟ್ಟೆಗೆ ಬಿಡಿಗಡೆಯಾಗುವ ಪ್ರತಿ ಹೊಸ ಪದಾರ್ಥವನ್ನು ವೈಜ್ಞಾನಿಕ ಪ್ರಯೋಗಾಲಯಗಳಲ್ಲಿ ಪರೀಕ್ಷೆಗೊಳಪಡಿಸಿ ದೃಢೀಕರಿಸದ ನಂತರವೇ ಸದರಿ ಪದಾರ್ಥ ಮಾರಾಟಕ್ಕೆಲೈಸೆನ್ಸ್ ನಂಬರ್ ಪಡೆದುಕೊಂಡ ನಂತರವಷ್ಟೇ ಅದು ಮಾರಾಟಕ್ಕೆ ಲಭ್ಯ.
============

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ