ಶುಕ್ರವಾರ, ಮಾರ್ಚ್ 30, 2018

ಲಕ್ಷಾಂತರ ಹುದ್ದೆಗೆ ರೈಲ್ವೆ ಇಲಾಖೆ ನೇಮಕಾತಿ : ನೀವೇನು ಮಾಡಬೇಕು..?

===========
ನವದೆಹಲಿ : ಈಗಾಗಲೇ ಭಾರತೀಯ ರೈಲ್ವೆ ಇಲಾಖೆ ಲಕ್ಷಾಂತರ ಹುದ್ದೆಗಳನ್ನು ಆಫರ್ ಮಾಡಿದೆ. ಕಳೆದ ಕೆಲ ದಿನಗಳ ಹಿಂದಷ್ಟೆ 89ಸಾವಿರ ಹುದ್ದೆಗೆ ನೇಮಕಾತಿ ಆದೇಶ ಹೊರಡಿಸಿದ್ದ ರೈಲ್ವೆ ಇಲಾಖೆ ಇದೀಗ ಮತ್ತೊಮ್ಮೆ 20 ಸಾವಿರ ಹುದ್ದೆಗಳಿಗೆ ನೇಮಕಾತಿ ಆದೇಶ ಹೊರಡಿಸಿದೆ. ಇದರಲ್ಲಿ ಸಿ ಹಾಗೂ ಡಿ ಗ್ರೂಪ್ ನೌಕರರಿಗೆ ಅರ್ಜಿ ಆಹ್ವಾನಿಸಲಾಗಿದೆ.
=======
ಕಳೆದ ಕೆಲ ದಿನಗಳ ಹಿಂದೆ ಒಟ್ಟು 89 ಸಾವಿರ ಹುದ್ದೆಗಳಿಗೆ ನೇಮಕಾತಿ ಆದೇಶ ಹೊರಡಿಸಿದ್ದು ಮಾರ್ಚ್ 31 ಕೊನೆಯ ದಿನಾಂಕವಾಗಿದೆ. ನೀವು ಅರ್ಜಿ ಸಲ್ಲಿಕೆ ಮಾಡುವುದಿದ್ದಲ್ಲಿ ನಾಳೆಯ ಒಳಗೆ ಸಲ್ಲಿಕೆ ಮಾಡಬೇಕಾಗುತ್ತದೆ.
=======
ಈಗಾಗಲೇ 89 ಸಾವಿರ ಹುದ್ದೆಗಳಿಗೆ 2 ಕೋಟಿಗೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿದೆ. ಇದರಲ್ಲಿ 26,502 ಲೋಕೋ ಪೈಲಟ್, ತಾಂತ್ರಿಕ ಸಿಬ್ಬಂದಿ, ಗ್ರೂಪ್ ಡಿ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ.
=======
ಇನ್ನು ಇದಲ್ಲದೇ 9500 ಹುದ್ದೆಗಳನ್ನು ರೈಲ್ವೆ ಫ್ರೊಟೆಕ್ಷನ್ ಫೊರ್ಸ್'ನಲ್ಲಿಯೂ ಕೂಡ ಕರೆಯಲಾಗಿದೆ. ಇದರಲ್ಲಿ ಶೇ.50ರಷ್ಟು ಮಹಿಳಾ ಮೀಸಲಾತಿಯನ್ನು ನೀಡಲಾಗುತ್ತಿದೆ.
=====
ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳೇನು
*ಆಧಾರ್ ಕಾರ್ಡ್ ಕಡ್ಡಾಯವಾಗಿ ಹೊಂದಿರಲೇಬೇಕು.
*10ನೇ ತರಗತಿ ಅಥವಾ ಐಐಟಿ ಪಾಸ್ ಆಗಿರಬೇಕು.
*18ರಿಂದ 31 ವರ್ಷ ಒಳಗಿನವರಾಗಿರಬೇಕು
===========
ಲೋಕೋ ಪೈಲಟ್ ಹುದ್ದೆಯ ಅರ್ಹತೆಗಳೇನು..? ಸೇರಿದಂತೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಭಾರತೀಯ ರೈಲ್ವೆ ಇಲಾಖೆ ವೆಬ್'ಸೈಟ್'ಗೆ ಭೇಟಿ ನೀಡಿ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬಹುದಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ