ಶುಕ್ರವಾರ, ಮಾರ್ಚ್ 30, 2018

ನಿಮಗಿದು ಗೊತ್ತೆ

ಸಿಟ್ರಸ್ ಜಾತಿಯ ಗಿಡಗಳ ಎಲೆಗಳು ಹಳದಿ ಚುಕ್ಕೆ ರೋಗಕ್ಕೆ ತುತ್ತಾಗಲು ಕಾರಣ - ಮ್ಯಾಗ್ನೀಷಿಯಂ

ರಾಜ್ಯದಲ್ಲಿ ಚುನಾವಣೆ ನಂತರ ಯಾವುದೇ ಪಕ್ಷ ಬಹುಮತ ಗಳಿಸದಿದ್ದಲ್ಲಿ ಮುಂದಿನ ನಿರ್ಧಾರ ರಾಜ್ಯಪಾಲರ Discretion(ವಿವೇಚನೆ) ಗೆ ಬಿಟ್ಟಿದ್ದು. ರಾಷ್ಟ್ರಪತಿಗಳ ಸಲಹೆ ಕೇಳಲೇಬೇಕು ಎಂದಿಲ್ಲ.

ಭೂಮಿಯ ಕೆಳಪದರದಲ್ಲಿ ಶೇಖರಗೊಂಡಿರುವ ಶಾಖಶಕ್ತಿ - ಜಿಯೋ ಥರ್ಮಲ್ ಶಕ್ತಿ

ಸಂಪೂರ್ಣ ಮಹಿಳೆಯರನ್ನೇ ಒಳಗೊಂಡಿದ್ದ ಎವರೆಸ್ಟ ಶಿಖರ ಏರಿದ ಭಾರತೀಯ ವಾಯು ಸೇನೆಯ ತುಕಡಿಯ ಮುಂದಾಳತ್ವ ವಹಿಸಿದವರು - ಸ್ಕ್ವಾಡ್ರನ್ ಲೀಡರ್ ನಿರುಪಮಾ ಪಾಂಡೆ 

ವಾತಾವರಣದಲ್ಲಿನ Humidity ಅಳೆಯುವ ಮಾಪಕ - Hygrometer

ಪ್ರಧಾನ ಮಂತ್ರಿಗಳು ರಾಜೀನಾಮೆ ನೀಡಲದಲ್ಲಿ ಇಡೀ ಮಂತ್ರಿಮಂಡಲ ರಾಜೀನಾಮೆ ನೀಡಿದೆ ಎಂದರ್ಥ.

National Botanical Garden ಇರುವ ನಗರ -ಲಕ್ನೋ

ಕ್ಲೋರಿನ್ ಅನ್ನು ಸುಣ್ಣದ ನೀರಿನ ಮೇಲೆ ಹಾಯಿಸುವ ಮೂಲಕ ತಯಾರಿಸಲಾಗುವ ವಸ್ತು - ಬ್ಲೀಚಿಂಗ್ ಪೌಡರ್

ಭಾರತೀಯ ಸಂವಿಧಾನ ಜಾರಿಗೆ ಬಂದದ್ದು - 26ನೇ ಜನವರಿ 1950

ನಿಸರ್ಗದ ರಾಡಾರ್(RADAR) ಎಂದು ಕರೆಸಿಕೊಳ್ಳುವ ಪಕ್ಷಿ - ಪಾರಿವಾಳ(Pigeon)

ಆಳ ಸಮುದ್ರಕ್ಕಿಳಿಯುವಾಗ ಉಸಿರಾಟಕ್ಕೆ ಬಳಸುವ ಆಮ್ಲಜನಕವನ್ನು DILUTE ಮಾಡಲು ಹೀಲಿಯಂ ಅನ್ನು ಬಳಸಲಾಗುತ್ತದೆ.

ಆಳ ಸಮುದ್ರಕ್ಕಿಳಿಯುವಾಗ ಉಸಿರಾಟಕ್ಕೆ ಬಳಸಲುಆಮ್ಲಜನಕವನ್ನು DILUTE ಮಾಡಲಾಗುತ್ತದೆ.

ರಂಗಸ್ವಾಮಿ ಕಪ್ ಸಂಬಂಧಿಸಿದ ಕ್ರೀಡೆ - ಹಾಕಿ

ಭಗವಾನ್ ಮಹಾವೀರನ ತಾಯಿ - ತ್ರಿಶಾಲಾ

ಬಯೋ ಫರ್ಟಿಲೈಜರ್ ಉತ್ಪಾದನೆಯಲ್ಲಿ ಕರ್ನಾಟಕವನ್ನು ಹಿಂದಿಕ್ಕಿದ ರಾಜ್ಯ - ತಮಿಳುನಾಡು

ಹಳದಿ ಕ್ರಾಂತಿ - ಎಣ್ಣೆ ಬೀಜಗಳ ಉತ್ಪಾದನೆ ಹೆಚ್ಚಳಕ್ಕೆ ಸಂಬಂಧಿಸಿದೆ.

ಹೆಲಿಕಾಪ್ಟರ್ ಸಂಶೋಧಿಸಿದವರು - ಬ್ರಿಗೆಟ್

ರೇಯಾನ್ ತಯಾರಿಕೆಗೆ ಬಳಸಲಾಗುವ ಪ್ರಮುಖ ಕಚ್ಚಾವಸ್ತು - ಸೆಲ್ಯುಲೋಸ್

ಸಿಂಧೂ ನಾಗರೀಕತೆಯ ಸ್ನಾನಗೃಹಗಳು ಕಂಡುಬರುವ ಸ್ಥಳ - ಮೊಹೆಂಜೊದಾರೊ

ಮರುಭೂಮೀಕರಣವನ್ನು ವಿರೋಧಿಸುವ ದಿನವನ್ನಾಗಿ ವಿಶ್ವಸಂಸ್ಥೆ ಗುರುತಿಸಿರುವ ದಿನ - ಜೂನ್ 17

ದಕ್ಷಿಣ ಭಾರತದ ಸನ್ ಗ್ರೂಪ್ ಖರೀದಿಸಿದ ವಿಮಾನಯಾನ ಕಂಪೆನಿ - ಸ್ಪೈಸ್ ಜೆಟ್ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ