ಆರೋಗ್ಯ, ಸಂಪತ್ತು ಮತ್ತು ನೆಮ್ಮದಿಯೇ ಯಶಸ್ಸಿನ ಮಾನದಂಡಗಳು ಎಂದು ಲಿಂಕ್ಡ್ ಇನ್ ನಡೆಸಿದ ಸಮೀಕ್ಷೆಯೊಂದು ಹೇಳಿದೆ. ಆದರೆ ಭಾರತೀಯರ ಮನಸ್ಸಿನಲ್ಲಿರುವ ಯಶಸ್ಸಿನ ಮಾನದಂಡ ಸ್ವಲ್ಪ ಭಿನ್ನವಾಗಿದೆ. ನೆಮ್ಮದಿ ಮತ್ತು ಆರೋಗ್ಯದಿಂದ ಇರುವುದೇ ದೊಡ್ಡ ಯಶಸ್ಸು ಎಂದು ಭಾರತೀಯರು ಭಾವಿಸಿದ್ದಾರೆ.
ಹಣ ಮತ್ತು ಸಂಪತ್ತೇ ಯಶಸ್ಸು ಅಲ್ಲ ಎಂದು ಅವರು ಹೇಳಿದ್ದಾರೆ. ಉದ್ಯಮ ಮತ್ತು ಉದ್ಯೋಗ ಆಧರಿತವಾಗಿ ಈ ಸಮೀಕ್ಷೆಯ ನಡೆಸಲಾಗಿತ್ತು. ಸಮೀಕ್ಷೆಯಲ್ಲಿ ಕೇಳಿದ ಪ್ರಶ್ನೆಗಳಿಗೆ ಒಂದಕ್ಕಿಂತ ಹೆಚ್ಚು ಉತ್ತರ ನೀಡುವುದಕ್ಕೆ ಅವಕಾಶ ಇತ್ತು.
ನಿಮ್ಮ ದೃಷ್ಟಿಯಲ್ಲಿ ಯಶಸ್ಸು ಯಾವುದು?
ನೆಮ್ಮದಿಯಾಗಿವುದು: 72%
ಉತ್ತಮ ಆರೋಗ್ಯ: 65%
ವೃತ್ತಿ-ವೈಯಕ್ತಿಕ ಜೀವನ ಸಮತೋಲನ: 57%
ಸಂಬಳ ಹೆಚ್ಚಳವೇ ಯಶಸ್ಸು ಎಂದವರು: 22%
ಆರಂಕಿ ಸಂಬಳವೇ ಯಶಸ್ಸು ಎಂದವರು: 36%
ಯಶಸ್ಸು ಸಾಧ್ಯವಾಗಿದೆ ಎಂಬ ಭಾವನೆಯಲ್ಲಿ ಭಾರತೀಯರಿಗೆ ಮೂರನೇ ಸ್ಥಾನ
1: ಅರಬ್ ಸಂಯುಕ್ತ ಸಂಸ್ಥಾನ
2. ಬ್ರೆಜಿಲ್
3. ಭಾರತ
ಸಮೀಕ್ಷೆ ನಡೆದ ದೇಶಗಳು: ಆಸ್ಟ್ರೇಲಿಯಾ, ಭಾರತ, ಚೀನಾ, ಫ್ರಾನ್ಸ್, ಜರ್ಮನಿ, ಹಾಂಕಾಂಗ್, ಇಂಡೊನೇಷ್ಯಾ, ಐರ್ಲೆಂಡ್, ಇಟಲಿ, ನೆದರ್‌ಲೆಂಡ್, ಸಿಂಗಪುರ, ಸ್ಪೇನ್, ಬ್ರೆಜಿಲ್, ಅರಬ್ ಸಂಯುಕ್ತ ಸಂಸ್ಥಾನ, ಇಂಗ್ಲೆಂಡ್, ಅಮೆರಿಕ
ಸಮೀಕ್ಷೆಯಲ್ಲಿ ಭಾಗವಹಿಸಿದವರು: 18,191
ಭಾರತೀಯರಲ್ಲಿ ಆತ್ಮವಿಶ್ವಾಸ ಹೆಚ್ಚು: ಉದ್ಯೋಗ ಮಾರುಕಟ್ಟೆಯ ಕಠಿಣ ಸ್ಮರ್ಧಾತ್ಮಕತೆ ಮತ್ತು ಹಣದುಬ್ಬರದ ನಡುವೆಯೂ ಭಾರತೀಯರಲ್ಲಿ ಆತ್ಮವಿಶ್ವಾಸ ಹೆಚ್ಚಾಗಿಯೇ ಇದೆ.
ಸಮೀಕ್ಷೆಯಲ್ಲಿ ಭಾಗವಹಿಸಿದ ಶೇ 10ರಷ್ಟು ಜನರು ಒಂದು ವರ್ಷದೊಳಗೆ ಯಶಸ್ಸು ಸಾಧಿಸುವ ವಿಶ್ವಾಸ ಹೊಂದಿದ್ದಾರೆ. ಇದು ಜಾಗತಿಕ ಸರಾಸರಿಯ ದುಪ್ಪಟ್ಟು
ಯಶಸ್ಸಿನ ಕಾರಣಗಳೇನು
ಶಿಕ್ಷಣ: 79%
ಆಯ್ದುಕೊಂಡ ವೃತ್ತಿ: 68%
ವಯಸ್ಸು: 61%
ಲಿಂಗ: 56%
ವೃತ್ತಿಗಿಂತ ಸಮಾಜ ಮುಖ್ಯ: ವೃತ್ತಿಯಲ್ಲಿ ಯಶಸ್ಸು ಗಳಿಸುವುದಕ್ಕಿಂತ ಸಮಾಜದಲ್ಲಿ ಯಶಸ್ಸು ಗಳಿಸುವುದಕ್ಕೆ ಭಾರತೀಯರು ಹೆಚ್ಚಿನ ಮಹತ್ವ ನೀಡುತ್ತಾರೆ. ಸಾಮಾಜಿಕವಾಗಿ ಯಶಸ್ಸು ಪಡೆಯುವುದು ಮುಖ್ಯ ಎಂದು ಶೇ 30ರಷ್ಟು ಭಾರತೀಯರು ಹೇಳಿದ್ದಾರೆ. ಇದು ಜಾಗತಿಕ ಸರಾಸರಿಗಿಂತ (22%) ಹೆಚ್ಚು.
ಒಳ್ಳೆಯ ಗೆಳೆಯರು ಯಶಸ್ಸೇ: ನೆಮ್ಮದಿ, ಆರೋಗ್ಯದ ಹಾಗೆಯೇ ಒಳ್ಳೆಯ ಗೆಳೆಯರನ್ನು ಪಡೆಯುವುದೂ ಯಶಸ್ಸಿನ ಭಾಗ ಎಂದು ಭಾರತೀಯರು ಪರಿಗಣಿಸುತ್ತಾರೆ ಎಂದು ಸಮೀಕ್ಷೆ ಹೇಳಿದೆ. ಹಾಗೆಯೇ, ಪ್ರವಾಸದ ಅವಕಾಶಗಳನ್ನು ಪಡೆಯುವುದು, ಹೊಸ ಹವ್ಯಾಸ ರೂಪಿಸಿಕೊಳ್ಳುವ ಅವಕಾಶ ದೊರೆಯುವುದನ್ನೂ ಯಶಸ್ಸು ಎಂದು ಭಾರತೀಯರು ಪರಿಗಣಿಸುತ್ತಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ