*##ಮಾಹಿತಿ ವೇದಿಕೆ##*
*ಪ್ರತಿಷ್ಠಿತ ಏಕಲವ್ಯ ಪ್ರಶಸ್ತಿಗೆ 13 ಪ್ರತಿಭಾವಂತರ ಆಯ್ಕೆ*
################
*ಉಡುಪಿ: ರಾಜ್ಯದ ಪ್ರತಿಷ್ಠಿತ ಕ್ರೀಡಾ ಪ್ರಶಸ್ತಿ, 2016ನೇ ಸಾಲಿನ ಏಕಲವ್ಯ ಪ್ರಶಸ್ತಿಗೆ 13 ಜನ ಪ್ರತಿಭಾವಂತರನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯ್ಕೆ ಮಾಡಿದೆ.*
==============
*ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ನೀಡುವ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿಗೆ 9 ಮಂದಿ ಆಯ್ಕೆಯಾಗಿದ್ದಾರೆ. ಅಲ್ಲದೆ, ಕ್ರೀಡೆಯನ್ನು ಪೋಷಿಸುವ ಕ್ರೀಡಾ ಪ್ರವರ್ತಕರಿಗಾಗಿ 2017-18ನೇ ಸಾಲಿನಿಂದ ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿ ನೀಡಲು ಸರ್ಕಾರ ನಿರ್ಧರಿಸಿದ್ದು, ರಾಜ್ಯಾದ್ಯಂತ 10 ಸಂಘ ಸಂಸ್ಥೆಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಪ್ರಶಸ್ತಿಗಳ ವಿವರವನ್ನು ಸೋಮವಾರ ಪ್ರಕಟಿಸಿದರು.*
=============
*ಮಾರ್ಚ್ 7 ರಂದು ಬೆಂಗಳೂರಿನ ಗುರುನಾನಕ ಭವನದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಏಕಲವ್ಯ ಸೇರಿ ಕ್ರೀಡಾ ಪ್ರಶಸ್ತಿಗಳಿಗೆ ಆಯ್ಕೆಯಾಗಿರುವ ಕ್ರೀಡಾಪಟುಗಳು ಹಾಗೂ ಕ್ರೀಡಾ ಸಂಘಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಏಕಲವ್ಯ ಸಾಧಕರಿಗೆ 2 ಲಕ್ಷ ರೂಪಾಯಿ ನಗದು ಹಾಗೂ ಏಕಲವ್ಯ ಕಂಚಿನ ಪ್ರತಿಮೆ ನೀಡಲಾಗುವುದು.*
*ಏಕಲವ್ಯ ವಿಜೇತರು*
============
* *ಹರ್ಷಿತ ಎಸ್.(ಅಥ್ಲೆಟಿಕ್)*
* *ರಾಜೇಶ್ ಪ್ರಕಾಶ್ ಉಪ್ಪಾರ್(ಬ್ಯಾಸ್ಕೆಟ್ ಬಾಲ್)*
* *ಪೂರ್ವಿಷಾ ಎಸ್. ರಾಮ್ (ಬ್ಯಾಡ್ಮಿಂಟನ್)*
* *ರೇಣುಕಾ ದಂಡಿನ್ (ಸೈಕ್ಲಿಂಗ್)*
* *ಮಯೂರ್ ಡಿ. ಭಾನು(ಶೂಟಿಂಗ್)*
* *ಕಾರ್ತಿಕ್ ಎ.(ವಾಲಿಬಾಲ್)*
* *ಮಾಳವಿಕ ವಿಶ್ವನಾಥ್(ಈಜು)*
* *ಕೀರ್ತನಾ ಟಿ.ಕೆ.(ರೋಯಿಂಗ್)*
* *ಅಯ್ಯಪ್ಪ ಎಂ.ಬಿ.(ಹಾಕಿ)*
* *ಸುಕೇಶ್ ಹೆಗ್ಡೆ(ಕಬಡ್ಡಿ)*
* *ಗುರುರಾಜ(ಭಾರ ಎತ್ತುವುದು)*
* *ಸಂದೀಪ್ ಬಿ. ಕಾಟೆ(ಕುಸ್ತಿ)*
* *ರೇವತಿ ನಾಯಕ ಎಂ. (ದಿವ್ಯಾಂಗ ಈಜುಪಟು).*
============
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ