ಸೋಮವಾರ, ಮಾರ್ಚ್ 5, 2018

ಲೇಖನ ಚಿಹ್ನೆಗಳು*

*##ಮಾಹಿತಿ ವೇದಿಕೆ##*

*ಲೇಖನ ಚಿಹ್ನೆಗಳು*
###########
*ಓಸುವುದು ಮಾತಾಡಿದಂತೆಯೇ ಆಗಬೇಕೆಂಬುದು ಓದಿನ ನಿಯಮ. ಹಾಗೆ ಓದುವಾಗ ಭಾವಕ್ಕೂ ಅರ್ಥಕ್ಕೂ ಅನುಸರಿಸಿ, ಕೆಲವೆಡೆ ಸ್ವಲ್ಪ ಹೊತ್ತು ಅಥವಾ ಹೆಚ್ಚು ಹೊತ್ತು ನಿಲ್ಲಿಸಬೇಕಾಗುತ್ತದೆ. ನಿಲ್ಲಿಸಲು ಅನುಕೂಲವಾಗುವಂತೆ ಬರೆವಣಿಗೆಯಲ್ಲಿ ಕೆಲವು ಚಿಹ್ನೆಗಳನ್ನು ಉಪಯೋಗಿಸುವರು. ಅವನ್ನು `ಲೇಖನ ಚಿಹ್ನೆಗಳು’ ಎನ್ನುವರು.*
# *ಪೂರ್ಣವಿರಾಮ(.): ಪೂರ್ತಿಯಾಗಿ ನಿಲ್ಲಿಸಬೇಕಾದಲ್ಲಿ ಪೂರ್ಣವಿರಾಮ ಚಿಹ್ನೆ ಬರುವುದು. ವಿಧಾನಾರ್ಥಕವಾಕ್ಯದ ಕೊನೆಯಲ್ಲಿಯೂ ಶಬ್ಧಗಳ ಸಂಕ್ಷಿಪ್ತ ರೂಪವನ್ನು ತಿಳಿಸುವ ಅಕ್ಷರದ ಮುಂದೆಯೂ ಪೂರ್ಣವಿರಾಮವನ್ನು ಇಡುವರು.*
*ಉದಾ:- (1) ರನ್ನನು ಗದಾಯುದ್ಧವನ್ನು ಬರೆದನು.* *(2) ರಾಮನು ಕಾಡಿಗೆ ಹೋದನು.*
# *ಅಲ್ಪವಿರಾಮ(,): ಈ ಚಿಹ್ನೆಯಿದ್ದಲ್ಲಿ ಸ್ವಲ್ಪ ತಡೆಯಬೇಕು. ಇದನ್ನು (1) ಸಮಾನ ಮಹತ್ವವುಳ್ಳ ಹಲವು ಶಬ್ಧಗಳು ಅಥವಾ ವಾಕ್ಯಗಳು ಇರುವಲ್ಲಿಯೂ, (2) ಅಪೂರ್ಣ ಕ್ರಿಯಾಪದಗಳಿರುವಲ್ಲಿಯೂ,* *(3) ಸಂಬೋಧನೆಯಲ್ಲಿಯೂ,* *(4) ಎರಡು ಅಥವಾ ಹೆಚ್ಚು ವಿಶೇಷಣ ವಾಕ್ಯಾಂಶಗಳು ಬರುವಲ್ಲಿಯೂ ಇಡುತ್ತಾರೆ. ಉದಾ:-*
*1. ಅಕ್ಕಿ, ಗೋಧಿ, ಮೆಣಸು, ಬೆಲ್ಲ ಮುಂತಾದವು ಅಂಗಡಿಯಲ್ಲಿವೆ.*
*2. ಈಗಲೇ ಮನೆಗೆ ಹೋಗಿ, ಅಣ್ಣನನ್ನು ಕಂಡು ಬರುವೆನು.*
*3. ಮಕ್ಕಳೇ, ಇತ್ತ ಬನ್ನು.*
*4. ನಾನು ಆರು ವರ್ಷದವನಾಗಿದ್ದಾಗ, ಹೆಚ್ಚಿನ ವ್ಯವಹಾರ ಜ್ಞಾನವೇ ಇಲ್ಲದಿದ್ದಾಗ, ತಂದೆಯವರೊಂದಿಗೆ ಪೇಟೆಗೆ ಹೋಗುತ್ತಿದ್ದೆ.*
##########
# *ಅರ್ಧವಿರಾಮ(;): ಈ ಚಿಹ್ನೆ* *(1) ಸಂಯುಕ್ತ ವಾಕ್ಯದಲ್ಲಿ ಸಂಯೋಜನಕ ಪದಕ್ಕೆ ಮೊದಲಾಗಿಯೂ, (2) ವಾಕ್ಯ ಪೂರ್ತಿಯಾಗಿದ್ದರೂ ಅದಕ್ಕೆ ಸಂಬಂಧಿಸಿರುವ ಅಭಿಪ್ರಾಯವು ಪೂರ್ತಿಯಾಗದಿರುವಲ್ಲಿಯೂ ಬರುವುದು. ಉದಾ:-*
*1. ದೇವರು ದೊಡ್ಡವನು; ಏಕೆಂದರೆ ಅವನು ಎಲ್ಲರನ್ನೂ ಸಲಹುವನು.*
*2. ಇಂದು ನಮಗೆ ಬೇಡವಾದುದು ನಾಳೆ ಬೇಕಾಗುವುದು; ನಾಳೆ ಬೇಡವಾದುದು ಇಂದು ಬೇಕಾಗುವುದು; ಇಂದು ಪ್ರೀತಿಸದುದನ್ನು ನಾಳೆ ಕಂಡೊಡನೆ ಪ್ರೀತಿಸತೊಡಗುವೆವು.*
#########
*ವಿವರಣ ಚಿಹ್ನೆ(-): ಈ ಚಿಹ್ನೆಯನ್ನು (1) ವಿವರಣೆ ಕೊಟ್ಟು ಹೆಚ್ಚು ಸ್ಪಷ್ಟ್ರೀಕರಿಸುವಲ್ಲಿಯೂ, (2) ಭಾವನೆಯ ಓಟವು ಫಕ್ಕನೆ ನಿಂತು ಮಾರ್ಪಡುವಲ್ಲಿಯೂ ಪ್ರಯೋಗಿಸುವರು, ಉದಾ:-*
*1. ಕನ್ನಡನಾಡಿನಲ್ಲಿ ಜಾನಪದ ಸಾಹಿತ್ಯವು -ಹಳ್ಳಿಗರ ಹಾಡು ಮುಂತಾದುವು, ಹೇರಳವಾಗಿವೆ, ಬಾ- ಎಂದು ಕರೆದನು.*
############
# *ಉದಾಹರಣೆ ಚಿಹ್ನೆ(:-): ಈ ಚಿಹ್ನೆ (1) ಅನ್ಯರ ಮಾತನ್ನು ಉದ್ಧರಿಸಿ ಬರೆಯುವಲ್ಲಿಯೂ* *(2) ಏನಾದರೊಂದ ಉಪಶಿರೋನಾಮವನ್ನು ಬರೆದು ವಿವರಿಸುವಲ್ಲಿಯೂ ಬರುವುದು. ಉದಾ:-*
*1. ಬೇಕನ್ನನ್ನು;-“ ಓದುವಿಕೆಯು ಪೂರ್ಣ ಮನುಷ್ಯನ್ನಾಗಿಯೂ ಬರೆಯುವಿಕೆಯು ನಿಜವಾದ ಮನುಷ್ಯನನ್ನಾಗಿಯೂ ಮಾತುಗಾರಿಕೆಯು ಸಿದ್ಧನಾದ ಮನುಷ್ಯನನ್ನಾಗಿಯೂ ಮಾಡುತ್ತದೆ” ಎಂದಿರುವನು.*
*2. ವಚನಗಳು:- ಇವು ಏಕವಚನ, ಬಹುವಚನ- ಎಂದು ( ಎರಡು ವಿಧ)*
#############
*# ಉದ್ದರಣ ಚಿಹ್ನೆ( “ “): ಈ ಚಿಹ್ನೆ (1) ವ್ಯಕ್ತಿಯ ಮಾತನ್ನು ರೂಪುಗೆಡದಂತೆ ಕೊಡುವಲ್ಲಿಯೂ (2) ಗಾದೆ, ಶ್ಲೋಕ, ನೀತಿವಾಕ್ಯ, ಬಿರುದಿನ ಅಥವಾ ಮಹತ್ವದ ಪದ-ಮುಂತಾದವನ್ನು ಎತ್ತಿ ಬರೆಯುವಲ್ಲಿಯೂ* *ಬರುವುದು. ಉದಾ:-*
*1. ರಾಮನು “ ಲಕ್ಷ್ಮಣಾ, ನೀನು ಬಂದೆಯಾ?” ಎಂದನು.*
*2. “ಮಾತು ಬಲ್ಲವನಿಗೆ ಜಗಳವಿಲ್ಲ” “ಶುಭಸ್ಯ ಶೀಘ್ರಂ” “ಆಡದೆ ಮಾಡುವವನು ರೂಢಿಯೊಳುತ್ತಮನು”*
*3. ವಿದ್ಯಾರಣ್ಯರಿಗೆ “ಕರ್ಣಾಟಕ ಸಿಂಹಾಸನ ಸ್ಥಾಪನಾಚಾರ್ಯ” ಎಂಬ ಬಿರುದಿದ್ದಿತು.*
######₹₹₹₹₹₹₹
# *ಪ್ರಶ್ನೆ ಚಿಹ್ನೆ(?): ಪ್ರಶ್ನೆ ಬರುವಲ್ಲಿ ಈ ಚಿಹ್ನೆಯಿರುತ್ತದೆ.*
*ಉದಾ:-ಸ್ವಾಮಿ, ನಿಮ್ಮ ಊರು ಯಾವುದು?*
############
# *ಭಾವ ಸೂಚಕ ಚಿಹ್ನೆ (!): ಈ ಚಿಹ್ನೆ (1) ಆಶ್ಚರ್ಯ, ದುಃಖ, ಭಟ, ಕೋಪ- ಮುಂತಾದ ಭಾವಗಳನ್ನು ಸೂಚಿಸುವ ಅವ್ಯಯಗಳ ಮುಂದೆಯೂ,* *(2) ವಿಸ್ಮಯ ಬೋಧಕ ವಾಕ್ಯದ ಕೊನೆಯಲ್ಲಿಯೂ, (3) ಆಮಂತ್ರಣ ಆಶೀರ್ವಾದ ರೂಪದ ವಾಕ್ಯಗಳ ಕೊನೆಯಲ್ಲಿಯೂ ಬರುವುದು.* *ಉದಾ:-*
*1. ಆಹಾ ! ಪ್ರಕೃತಿ ಸೌಂದರ್ಯವೆ !*
*ಅಯ್ಯೋ! ಹಾ! ದೇವರೇ, ಹೀಗಾಯಿತೇ!*
*ಅಬ್ಬಬ್ಬ! ಇದೇನಪ್ಪ ! ಭೂತವೋ ಪಿಶಾಚಿಯೊ!*
##############
*ಇತರ ಚಿಹ್ನೆಗಳು : *
=============
# *ಆವರಣ ಚಿಹ್ನೆ ()*
# *ವಿರೋಧಾರ್ಥಕ ಚಿಹ್ನೆ ಗಿ*
# *ಅಧಿಕ ಚಿಹ್ನೆ +*
# *ಸಮಾನಾರ್ಥಕ ಚಿಹ್ನೆ =*
# *ವಿವರಣಾತ್ಮಕ ಚಿಹ್ನೆ (:-)*

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ