ಗುರುವಾರ, ಮಾರ್ಚ್ 15, 2018

ಸ್ಪರ್ಧಾತ್ಮಕ ಪರೀಕ್ಷೆಗೆ ಉಪಯುಕ್ತ ಮಾಹಿತಿ ( ಪ್ರಬಂಧ)( 2014 ವರದಿ ಪ್ರಕಾರ)*

*##ಮಾಹಿತಿ ವೇದಿಕೆ##*

    *ಸ್ಪರ್ಧಾತ್ಮಕ ಪರೀಕ್ಷೆಗೆ ಉಪಯುಕ್ತ ಮಾಹಿತಿ ( ಪ್ರಬಂಧ)( 2014 ವರದಿ ಪ್ರಕಾರ)*
===============

*ಸ್ವಚ್ಚ ಭಾರತದ ನಿರ್ಮಾಣ ಹೇಗೆ ಸಾಧ್ಯ?*
##############
*'WE MUST NOT ONLY KNOW WHAT TO DO AND HOW TO DO BUT ALSO WHAT NOT TO DO AND WHY NOT.ಇದು ಎಡ್ನಾಮಿಲ್ಲೇ ಎಂಬಾಕೆ  Few Figs from Thistles ಕೃತಿಯ ಸಾಲು. ನ್ಯಾಷನಲ್‌ ಸ್ಯಾಂಪಲ್‌ ಸರ್ವೆ ಪ್ರಕಟಿಸಿದ ಅಂಕಿ ಅಂಶಗಳ ಪ್ರಕಾರ ಶೇ.59ರಷ್ಟು ಭಾರತದ ಹಳ್ಳಿಯ ಜನರಿಗೆ ಈಗಲೂ ಬಯಲೇ ಶೌಚಾಲಯ. ಕಂಡಲ್ಲಿ ಉಗುಳುವುದು, ಘನ ತ್ಯಾಜ್ಯಗಳ ರಾಶಿ, ಪ್ಲಾಸ್ಟಿಕ್‌ ಕಸದ ರಾಶಿ, ಕೊಳಚೆ ಪ್ರದೇಶಗಳು, ಗಬ್ಬು ವಾಸನೆಗಳಿಂದಾಗಿ ಭಾರತಕ್ಕೆ ಜಗತ್ತಿನ ಅತ್ಯಂತ ಕೊಳಕು ದೇಶಗಳಲ್ಲೊಂದು ಎಂಬ ಕುಖ್ಯಾತಿಯಿದೆ. "ಕ್ಲೀನ್‌ ಸಿಟಿ ಗ್ರೀನ್‌ ಸಿಟಿ" ಕಲ್ಪನೆ ಇನ್ನೂ ಸಾಕಾರಗೊಂಡಿಲ್ಲ. ದೇಶದ ಅಭಿವೃದ್ಧಿ ಗಾಥೆಯಲ್ಲಿ ನಮ್ಮ ತ್ಯಾಜ್ಯ ನಿರ್ವಹಣೆಯ ಸೋಲು ಒಂದು ಕರಾಳ ಅಧ್ಯಾಯ. 2040ರ ಹೊತ್ತಿಗೆ ನಮ್ಮ ದೇಶದ ನಗರಗಳ ಜನಸಾಂದ್ರತೆ ವಿಪರೀತ ಹೆಚ್ಚಲಿದೆ. ರಾಷ್ಟ್ರಾದಾಯದಲ್ಲಿ ಶ್ರೀಮಂತ ರಾಷ್ಟ್ರಗಳ ಪಟ್ಟಿಗೆ ಸೇರದಿದ್ದರೂ 2100ರ ಹೊತ್ತಿಗೆ ಭಾರತ ಅಂಥ ರಾಷ್ಟ್ರಗಳು ಉತ್ಪಾದಿಸುವ ಒಟ್ಟು ತ್ಯಾಜ್ಯದ ಶೇ.70ರಷ್ಟು ತ್ಯಾಜವನ್ನು ತಾನೊಂದೇ ಉತ್ಪತ್ತಿ ಮಾಡಲಿದೆ. ಇದು ಪ್ರಸಿದ್ಧ ನಿಯತಕಾಲಿಕೆ "ನೇಚರ್‌' ವರದಿ ಮಾಡಿರುವ ಸಂಗತಿ.*
############
*ಪರದೇಶಕ್ಕೆ ಹೋಗಿ ಬಂದವರೆಲ್ಲಾ ವಾಕರಿಸುವುದು ನಮ್ಮಲ್ಲಿರುವ ಶುಚಿತ್ವದ ಕೊರತೆಯ ಬಗ್ಗೆಯೇ. ಕೊಳಚೆ ಪ್ರದೇಶಗಳು ನಮ್ಮ ನಗರಗಳ ಅವಿಭಾಜ್ಯ ಅಂಗ. ಇನ್ನು ಪ್ರವಾಸಿ ತಾಣಗಳಲ್ಲಂತೂ ಕಸದ್ದೇ ರಾಶಿ. ನಮ್ಮಲ್ಲಿ ಸುತ್ತಮುತ್ತಲ ಪರಿಸರ ರಕ್ಷಣೆ ಬಗ್ಗೆ ಮಾತು ಜಾಸ್ತಿ, ಕೃತಿ ಕಡಿಮೆ. ಇನ್ನೊಂದೆಡೆ, ಕಾರ್ಖಾನೆಗಳಿಂದ ಬರುವ ತ್ಯಾಜ್ಯಗಳು ನೇರವಾಗಿ ನದಿಗಳನ್ನು ಸೇರುತ್ತಿವೆ. ಕಾರ್ಖಾನೆಗಳು ತ್ಯಾಜ್ಯವನ್ನು ಶುದ್ಧೀಕರಿಸಿ ಬಿಡಬೇಕು ಎಂಬ ನಿಯಮದಿಂದ ಯಾವ ಪ್ರಯೋಜನವೂ ಆಗಿಲ್ಲ.*
###############
*ಗಂಗಾನದಿ ಶುದ್ಧೀಕರಿಸಲು ಕೋಟಿಗಟ್ಟಲೆ ಹಣ ಈಗಾಗಲೇ ವ್ಯಯವಾಗಿದೆ. ಇನ್ನೂ ಆಗುತ್ತದೆ. ನಮ್ಮ ಪಟ್ಟಣದಲ್ಲಿನ ತ್ಯಾಜ್ಯವಸ್ತುಗಳನ್ನು ಪಟ್ಟಣದ ಹೊರಗಿನ ಹಳ್ಳಿಯಲ್ಲಿ ತುಂಬಿಸುವ ಪ್ರಯತ್ನ ನಡೆಯುತ್ತಿದೆ. ಬೆಂಗಳೂರಿನಲ್ಲಿ ಇದರ ಬಗ್ಗೆ ಪ್ರತಿಭಟನೆಗಳಾಗುತ್ತಿವೆ. ಮಂಗಳೂರಿನ ಕತೆಯೂ ಭಿನ್ನವಲ್ಲ. ದಿನಕ್ಕೆ 120 ಟನ್‌ ತ್ಯಾಜ್ಯ ವಿಲೇವಾರಿ ಮಾಡುವ ಸಾಮರ್ಥ್ಯ ಹೊಂದಿರುವ ಈ ನಗರದಲ್ಲಿ ಪ್ರತಿದಿನ ಸೃಷ್ಟಿಯಾಗುವ ತ್ಯಾಜ್ಯ 200 ಟನ್‌.*
##############
*ನಮ್ಮ ನೆರೆಯ ಬಾಂಗ್ಲಾದೇಶ ಅನೇಕ ಸಮಸ್ಯೆಗಳ ಮಧ್ಯೆಯೂ ಶೌಚಾಲಯ ಬಳಕೆಯಲ್ಲಿ ನಮಗಿಂತ ಸಾಕಷ್ಟು ಮುಂದಿದೆ. ಅಲ್ಲಿ ಬಯಲು ಶೌಚಕ್ಕೆ ಹೋಗುವವರ ಪ್ರಮಾಣ 2010ರಲ್ಲಿ ಶೇ.4ಕ್ಕೆ ಇಳಿದಿದೆ. ಶ್ರೀಲಂಕಾದಲ್ಲೂ ಪರಿಸ್ಥಿತಿ ಉತ್ತಮವಾಗಿದೆ. ಅಲ್ಲಿ ಶೇ.90ರಷ್ಟು ಜನ ಶೌಚಾಲಯ ಬಳಸುತ್ತಾರೆ. ಆರ್ಥಿಕತೆಯಲ್ಲಿ ಈ ದೇಶಗಳಿಗಿಂತ ಮುಂದಿರುವ ನಮಗೇಕೆ ನಿರ್ಮಲ ರಾಷ್ಟ್ರ ನಿರ್ಮಿಸಲು ಸಾಧ್ಯವಾಗಿಲ್ಲ? ಕಾರಣ ನಾವೇ. ನಮ್ಮಲ್ಲಿರುವ ಉದಾಸೀನ ಮನೋಭಾವವೇ ಇದಕ್ಕೆಲ್ಲ ಕಾರಣ.*
###########
*ನಾವೊಬ್ಬರು ನಮ್ಮ ಸುತ್ತಲಿನ ಪರಿಸರವನ್ನು ಸ್ವತ್ಛವಾಗಿಟ್ಟುಕೊಂಡರೆ ದೇಶ ಸ್ವತ್ಛವಾಗುತ್ತದೆಯೇ ಎಂದು ಬಹಳ ಜನ ಕೇಳುತ್ತಾರೆ. ಖಂಡಿತ ಸ್ವತ್ಛವಾಗುತ್ತದೆ. ಎಲ್ಲರೂ ತಮ್ಮ ಮನೆ ಸುತ್ತಮುತ್ತಲನ್ನು ಶುಚಿಯಾಗಿಟ್ಟುಕೊಂಡರೆ ಸ್ವತ್ಛ ಭಾರತದ ನಿರ್ಮಾಣ ಸಾಧ್ಯ. ಕಳೆದ 65 ವರ್ಷಗಳಿಂದಲೂ ಇದನ್ನು ಹೇಳುತ್ತ ಬಂದಿದ್ದೇವೆ. ಆದರೂ ನಮ್ಮಿಂದ ಇದು ಸಾಧ್ಯವಾಗಿಲ್ಲ. ಹಾಗಾಗಿಯೇ 2014ರಲ್ಲೂ ಈಗಿನ ಸರ್ಕಾರ ಸ್ವತ್ಛ ಭಾರತ ಅಭಿಯಾನ ಕೈಗೊಳ್ಳಬೇಕಾಗಿ ಬಂದಿದೆ.*
#############
*ಕೇಂದ್ರ ಸರ್ಕಾರ ಎರಡು ಲಕ್ಷ ಕೋಟಿ ರೂ. ವ್ಯಯಿಸಿ ಸುಮಾರು 11 ಕೋಟಿ ಶೌಚಾಲಯಗಳನ್ನು ಕಟ್ಟುವ ಗುರಿ ಹಾಕಿಕೊಂಡಿದೆ. ತಡವಾಗಿಯಾದರೂ ಎಚ್ಚೆತ್ತುಕೊಂಡಿದ್ದೇವೆ.*
########
*ಮತ್ತೆ ಮೈಮರೆತರೆ ಕಷ್ಟ*
#########
*ಈ ಅಭಿಯಾನ ಫ‌ಲಪ್ರದವಾಗಬೇಕಾದರೆ ಪ್ರತಿಯೊಬ್ಬ ಪ್ರಜೆ ಇದರಲ್ಲಿ ತೊಡಗಿಸಿಕೊಳ್ಳಬೇಕು. ನಮ್ಮ ಮೈಂಡ್‌ಸೆಟ್‌ ಬದಲಾಗಬೇಕು. ಈಗಾಗಲೆ ಸ್ವತ್ಛ ನಗರಕ್ಕೆ ಸಂಬಂಧಿಸಿದ ಯೋಜನೆಗಳು ಬೇಕಾದಷ್ಟು ಇವೆ. ಉದಾಹರಣೆಗೆ ಪ್ಲಾಸ್ಟಿಕ್‌ ಮುಕ್ತ ನಗರದ ಕನಸು - ಬರೀ ನಾಮಫ‌ಲಕಗಳಿಗೆ ಸೀಮಿತವಾಗಿದೆ. ಕ್ಲೀನ್‌ ಸಿಟಿ ಗಾರ್ಬೆàಜ್‌ ಸಿಟಿಯಂತಿದೆ. ವೇಸ್ಟ್‌ ಬಿನ್‌ಗಳೇ ವೇಸ್ಟ್‌ ಎಂಬಂತೆ ತ್ಯಾಜ್ಯ ಸಂಗ್ರಹ-ನಿರ್ವಹಣೆ ನಡೆಯುತ್ತಿದೆ. ಉತ್ತಮ ರೀತಿಯಲ್ಲಿ ತ್ಯಾಜ್ಯ ನಿರ್ವಹಣೆ, ಮರು ಸಂಸ್ಕರಣೆ ಆದರ ಮಾತ್ರ ನಮ್ಮ ಗ್ರಾಮ, ನಗರಗಳು, ಊರು ಕೇರಿಗಳು, ರಸ್ತೆ ಬೀದಿಗಳು, ಅವುಗಳ ಬದಿಗಳು, ಕಟ್ಟಡಗಳು, ವನ ಉದ್ಯಾನಗಳು, ನದಿ ಸರೋವರಗಳು ಸ್ವತ್ಛವಾಗುತ್ತವೆ. ಸ್ವತ್ಛತೆ ಒಂದು ಸಹಜ ಗುಣ. ಆದರೆ ನಮ್ಮಲ್ಲದು ಮೈಗೂಡಿಲ್ಲ. ಸ್ವತ್ಛ ಮಾಡುವುದು ಗಲೀಜು ಕೆಲಸ ಎಂಬ ಕೀಳರಿಮೆ ಮೊದಲು ನಮ್ಮ ಮನಸ್ಸಿನಿಂದ ಹೊರಹೋಗಬೇಕು.*
##########
*ಮಕ್ಕಳು ಮತ್ತು ಯುವಜನರೇ ಹೆಚ್ಚಾಗಿರುವ ನಮ್ಮ ರಾಷ್ಟ್ರದಲ್ಲಿ ಸ್ವತ್ಛತೆಯ ಬಗೆಗಿನ ಪಾಠ ಸಣ್ಣ ಮಕ್ಕಳಿಂದಲೇ ಪ್ರಾರಂಭಗೊಳ್ಳಬೇಕು. ಇದು ದೀರ್ಘಾವಧಿಯಲ್ಲಿ ಪೂರಕವಾಗಿ ಕೆಲಸ ಮಾಡಬಹುದು. ಸ್ವತ್ಛತೆಯ ಬಗ್ಗೆ ಜನರಲ್ಲಿ ತಿಳಿವಳಿಕೆ ಮೂಡಿಸುವುದು ಅತೀ ಅಗತ್ಯ. ಹಳ್ಳಿ ಪ್ರದೇಶಗಳಲ್ಲಿ ಸ್ವಸಹಾಯ ಗುಂಪುಗಳು ಈ ಯೋಜನೆಯಲ್ಲಿ ಈಗಾಗಲೇ ತೊಡಗಿಸಿಕೊಂಡಿವೆ. ಸ್ವತ್ಛತೆ ಕಾಪಾಡುವಲ್ಲಿ ವಿಫ‌ಲರಾದವರಿಗೆ ದಂಡ ವಿಧಿಸುವ ಮೂಲಕ ಸಾಮಾಜಿಕ ಜವಾಬ್ದಾರಿಯನ್ನು ನೆನಪಿಸಬೇಕಾಗಿದೆ.*
###########
*ತ್ಯಾಜ್ಯ ವಿಲೇವಾರಿ ಹೀಗಲ್ಲ*
##########₹₹
*ನಮ್ಮ ನಗರಗಳಲ್ಲಿ ಇನ್ನಷ್ಟು ತ್ಯಾಜ್ಯ ವಸ್ತುಗಳ ಸಂಸ್ಕರಣಾ ಘಟಕಗಳ ಅಗತ್ಯವಿದೆ. ಅವು ಸ್ವಲ್ಪ ದುಬಾರಿಯಾಗಬಹುದು, ಆದರೆ ಅನಿವಾರ್ಯ. ಮೋದಿ ಕಸ ಗುಡಿಸಿದ ದಿನ ತಾವೂ ಕಸ ಗುಡಿಸಿ ಸಂಭ್ರಮಿಸಿದ ಜನರ ಸೇವೆ ನಿರಂತರವಾಗಿ ಸಾಗಬೇಕಾಗಿದೆ. ಇಲ್ಲವಾದಲ್ಲಿ "ಮೇಕ್‌ ಇನ್‌ ಇಂಡಿಯಾ' ಮತ್ತು "ಶುಭ್ರ ಭಾರತದ ಸಂಕಲ್ಪ' ಈ ಎರಡೂ ಯೋಜನೆಗಳು ಪರಸ್ಪರ ವಿರುದ್ಧವಾಗಿ ಚಲಿಸುತ್ತವೆ. ಅಭಿವೃದ್ಧಿಗಾಗಿ ಹೂಡಿಕೆದಾರರಿಗೆ ಮಣೆ ಹಾಕುವಾಗ ಸ್ವತ್ಛ ಭಾರತದ ಸಂಕಲ್ಪಕ್ಕೆ ಅಡ್ಡಿಯಾಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಸರ್ಕಾರದ್ದು. ನಾವು ಸ್ವಾವಲಂಬಿಗಳಾಗಬೇಕು. ಆದರೆ ನಮ್ಮ ಪರಿಸರವನ್ನು ನಾಶಗೊಳಿಸಿ ಅಲ್ಲ.*
############
*ಈ ಆಂದೋಲನ ನಿರಂತರ*
##########
*ಪರಿಸರ ಸಂರಕ್ಷಣೆ ಅಭಿವೃದ್ಧಿಯ ಆಧಾರ ಸ್ತಂಭ. ಸರ್ಕಾರ, ಸಾರ್ವಜನಿಕರು, ಜನಪ್ರತಿನಿಧಿಗಳು, ಸ್ವಯಂ ಸೇವಾ ಸಂಸ್ಥೆಗಳು, ಸಾಮಾಜಿಕ ಕಾರ್ಯಕರ್ತರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಪ್ರಮುಖವಾಗಿ ಕಾರ್ಪೊರೇಟ್‌ ವಲಯದ ಸಹಭಾಗಿತ್ವದಿಂದ ಈ ಯೋಜನೆ ಸಾಕಾರಗೊಳ್ಳುವುದು ಸುಲಭ ಸಾಧ್ಯ. ಜತೆಗೆ ಬೇರೆ ದೇಶಗಳಲ್ಲಿ ಇರುವಂತೆ ಪರಿಸರ ನೈರ್ಮಲ್ಯಕ್ಕೆ ಉತ್ತೇಜನ, ಮಾಲಿನ್ಯಕ್ಕೆ ನಿರುತ್ತೇಜನ (ಉದಾ: ಮಾಲಿನ್ಯ ತೆರಿಗೆ, ಉತ್ಪನ್ನ ತೆರಿಗೆ ಇತ್ಯಾದಿ) ತೋರುವ ಬಿಗು ಕ್ರಮಗಳೂ ಅಗತ್ಯ. ಕೈಯಲ್ಲಿ ಒಂದು ಚಿಕ್ಕ ಕಸವಿದ್ದರೂ ಕಸದ ಬುಟ್ಟಿ ಸಿಗುವವರೆಗೆ ಅದನ್ನು ರಸ್ತೆಗೆಸೆಯದಿರುವ ಸಂಕಲ್ಪ ನಮ್ಮ ಅಭ್ಯಾಸವಾಗಬೇಕು.*
#############
*ಅಸ್ವತ್ಛತೆಯನ್ನು ರಾಷ್ಟ್ರೀಯ ವಿಪತ್ತು ಎಂದು ಪರಿಗಣಿಸಬೇಕಾದ ಸಮಯ ಬಂದಿದೆ. ಆಕ್ಟೋಬರ್‌ 2, 2014ರಂದು ಸ್ವತ್ಛ ಭಾರತದ ಮಂತ್ರ ಪಠಿಸಿದ ನಾವು ಅಕ್ಟೋಬರ್‌ 2, 2015ರಂದು ಮತ್ತೂಮ್ಮೆ ಅದನ್ನು ನೆನಪಿಸಿಕೊಳ್ಳುವುದಲ್ಲ. ಪ್ರತಿದಿನವೂ ಅದು ನೆನಪಿನಲ್ಲಿರಬೇಕು. ಜಾಗತಿಕ ತಾಪಮಾನ ಏರಿಕೆ, ಜೀವ ವೈವಿಧ್ಯನಾಶದಂತಹ ಸಮಸ್ಯೆಗಳಿಗೆ ಶೃಂಗ ಸಮ್ಮೇಳನಗಳನ್ನು ಏರ್ಪಡಿಸುವ, ಅವುಗಳಲ್ಲಿ ಭಾಗವಹಿಸುವ ನಾವು ಸ್ಥಳೀಯ ಸಮಸ್ಯೆಗಳಿಗೂ ಗಮನ ಕೊಡುವುದು ಅಗತ್ಯ. ಎಡ್ನಾ ಅವರ ಮಾತಿನಂತೆ ಪ್ರಕೃತಿಯೊಂದಿಗೆ ಏನು ಮಾಡಬೇಕು, ಏನು ಮಾಡಬಾರದು ಎಂಬುದು ನಮಗೆ ಗೊತ್ತಿರಬೇಕು.*
############
*"ಮೇಕ್‌ ಇನ್‌ ಇಂಡಿಯಾ; ಇನ್‌ ಮೈ ಕ್ಲೀನ್‌ ಇಂಡಿಯಾ' ಅಲ್ಲದೇ ಪ್ರತಿ ಕೆಲಸದ ಬಳಿಕವೂ "ಕೀಪ್‌ ಇಟ್‌ ಆಲ್ವೇಸ್‌ ಕ್ಲೀನ್‌' ಎಂಬುದು ಕಂಡುಬರಬೇಕು. ಈಗಾಗಲೇ ಇದಕ್ಕೆ ವಿವಿಧ ರಂಗಗಳ "ಹೀರೋ'ಗಳು ಓಗೊಡುತ್ತಿ¨ªಾರೆ. ಆದರೆ ಸ್ಟಾರ್‌ ಪ್ರಚಾರಕ್ಕೆ ಹೊರತಾದ ಅಭಿಯಾನ ಇದಾಗಬೇಕು. ಪರಿಸರ ಸ್ನೇಹಿ ಚಟುವಟಿಕೆಗಳು, ಸಲಕರಣೆಗಳು, ಉತ್ಪನ್ನಗಳು ನಮ್ಮ ಜೀವನ ಸಾಧನಗಳಾಗಬೇಕು. ಅವೈಜ್ಞಾನಿಕ, ಪರಿಸರ ಹಾನಿಕಾರಕ, ಅಪಾಯಕಾರಿ ವಿಧಾನಗಳಿಂದ ಕಸವನ್ನು ನಿರ್ವಹಿಸುವುದೂ ತಪ್ಪು. ದೇಹ-ಮನಸ್ಸು-ಆತ್ಮ ಆಹಾರ ಶುಚಿಯಾಗಲೆಂದು ಬಯಸಿ, ಹಬ್ಬಗಳನ್ನು ಆಚರಿಸಿ, ದೇವರನ್ನು ಆರಾಧಿಸಿ, ಪ್ರಸಾದ ಸ್ವೀಕರಿಸಿ, ಸುತ್ತಮುತ್ತಲಿನ ಪರಿಸರವನ್ನು ಮತ್ತೆ ಇದ್ದ ಶುದ್ಧ ಸ್ಥಿತಿಗೆ ಮರಳಿ ತರುವುದನ್ನು ಮರೆತುಬಿಡುವ ಸ್ವಭಾವವನ್ನು ಜಾಡಿಸಿ ಬೀಸಿ ಒಗೆಯುವುದು ಯಾವತ್ತು ನಮ್ಮಿಂದ ಸಾಧ್ಯವೋ ಆವತ್ತು ಸ್ವತ್ಛ ಭಾರತ ನಿರ್ಮಾಣವಾಗುತ್ತದೆ.*
================

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ