*ಫಿನ್ಲೆಂಡ್ ವಿಶ್ವದ ಅತೀ ಸಂತುಷ್ಟ ದೇಶ*
#############
*ಹೆಲ್ಸಿಂಕಿ (ಫಿನ್ಲ್ಯಾಂಡ್): ವಿಶ್ವದ ಅತ್ಯಂತ ಸಂತುಷ್ಟದೇಶಗಳ ಪಟ್ಟಿಯೊಂದು ಬಿಡುಗಡೆಯಾಗಿದ್ದು, ಪಟ್ಟಿಯಲ್ಲಿ ಫಿನ್ಲೆಂಡ್ ಮೊದಲ ಸ್ಥಾನ ಪಡೆದುಕೊಂಡಿದೆ. ಪಟ್ಟಿಯಲ್ಲಿ ಭಾರತ 133ನೇ ಸ್ಥಾನ ಪಡೆದಿದೆ. ಜೀವನ ನಿರೀಕ್ಷೆ, ಸಾಮಾಜಿಕ ಬೆಂಬಲ ಮತ್ತು ಭ್ರಷ್ಟಾಚಾರವನ್ನು ಆಧರಿಸಿ ಸಂತೋಷದ ಮಟ್ಟವನ್ನು ಅಳೆಯಲಾಗಿದ್ದು, 156 ದೇಶಗಳನ್ನು ಒಳಗೊಂಡ ವಿಶ್ವ ಸಂತೋಷ ಸೂಚ್ಯಂಕವನ್ನು ವಿಶ್ವ ಸಂಸ್ಥೆ ಪ್ರಕಟಿಸಿದೆ.*
#############
*ಕಳೆದ ವರ್ಷ ಮೊದಲ ಸ್ಥಾನದಲ್ಲಿದ್ದ ನಾರ್ವೆ ಈ ವರ್ಷ ಎರಡನೇ ಸ್ಥಾನ ಪಡೆದಿದೆ. ಉಳಿದಂತೆ ಡೆನ್ಮಾರ್ಕ್, ಐಸ್ಲ್ಯಾಂಡ್, ಸ್ವಿಜರ್ಲೆಂಡ್, ನೆದರ್ಲೆಂಡ್, ಕೆನಡಾ, ನ್ಯೂಜಿಲೆಂಡ್, ಸ್ವೀಡನ್ ಮತ್ತು ಆಸ್ಪ್ರೇಲಿಯಾ ದೇಶಗಳು ಅಗ್ರ 10ರ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಅಮೆರಿಕ ಕಳೆದ ವರ್ಷದ 14ನೇ ರಾರಯಂಕ್ನಿಂದ 18ನೇ ಸ್ಥಾನಕ್ಕೆ ಕುಸಿದಿದೆ.*
#############
*ಫಿನ್ಲೆಂಡ್ 55 ಲಕ್ಷ ಜನಸಂಖ್ಯೆಯನ್ನು ಹೊಂದಿದ್ದು, 3 ಲಕ್ಷ ವಿದೇಶಿಗರು ಮತ್ತು ವಿದೇಶಿ ಮೂಲದವರನ್ನು ಹೊಂದಿದೆ. ಕಳೆದ ವರ್ಷ ಸಂತುಷ್ಟದೇಶಗಳ ಪಟ್ಟಿಯಲ್ಲಿ ಫಿನ್ಲೆಂಡ್ 5ನೇ ಸ್ಥಾನ ಪಡೆದುಕೊಂಡಿತ್ತು. ಇನ್ನು ಅತ್ಯಂತ ಅಸಂತುಷ್ಟದೇಶ ಎಂಬ ಕುಖ್ಯಾತಿಗೆ ಬುರುಂಡಿ ಪಾತ್ರವಾಗಿದೆ.*
ಗುರುವಾರ, ಮಾರ್ಚ್ 15, 2018
ಫಿನ್ಲೆಂಡ್ ವಿಶ್ವದ ಅತೀ ಸಂತುಷ್ಟ ದೇಶ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ