ಗುರುವಾರ, ಮಾರ್ಚ್ 15, 2018

ನಿಮಗಿದು ಗೊತ್ತಿರಲಿ#

*##ಮಾಹಿತಿ ವೇದಿಕೆ##*

    *##ನಿಮಗಿದು ಗೊತ್ತಿರಲಿ##*
===========
   *HT Cotton*
••••••••••••••••••••••••••
*ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಜೈವಿಕ ತಂತ್ರಜ್ಞಾನದ ಇಲಾಖೆಯು Field Inspection and Scientific Evaluation Committee (FISEC) ಯನ್ನು HT cotton ನ ಅಕ್ರಮ ಸಾಗುವಳಿ ಕುರಿತು ತನಿಖೆ ನಡೆಸಲು ರೂಪಿಸಿದೆ. BG-III ಅಥವಾ HT ಹತ್ತಿಯ ಕೃಷಿಯನ್ನು ಪರಿಸರ ಸಚಿವಾಲಯದ "ಜೆನೆಟಿಕ್ ಎಂಜಿನಿಯರಿಂಗ್ ಅನುಮೋದನಾ ಸಮಿತಿ" ಯು (GEAC - Genetic Engineering Approval Committee) ಅನುಮೋದಿಸಿಲ್ಲ. ಆಂಧ್ರಪ್ರದೇಶ, ತೆಲಂಗಾಣ, ಗುಜರಾತ್ ಮತ್ತು ಮಹಾರಾಷ್ಟ್ರಗಳಲ್ಲಿ ಅಕ್ರಮ ಅಥವಾ ಅನಧಿಕೃತ ಕೃಷಿ HT ಹತ್ತಿಯ ಬಗ್ಗೆ ವರದಿಗಳು ಮತ್ತು ದೂರುಗಳು ದಾಖಲಾಗಿವೆ. ಬಿಜಿ ಕಾಟನ್ - III, ಇದನ್ನು "ಸಸ್ಯನಾಶಕ-ಸಹಿಷ್ಣು ಕಾಟನ್ (ಬಿಜಿ -3)" ಎಂದೂ ಕರೆಯುತ್ತಾರೆ, ಇದು ರೌಂಡ್-ಅಪ್ ರೆಡಿ ಮತ್ತು ರೌಂಡ್-ಅಪ್ ಫ್ಲೆಕ್ಸ್ (RRF) ವಂಶವಾಹಿಗಳನ್ನು ಹೊಂದಿದೆ. ಅನುಮತಿಸದ ಹತ್ತಿಯು ಮಾನವ ಮತ್ತು ಜಾನುವಾರುಗಳಿಗೆ ಆರೋಗ್ಯದ ಅಪಾಯವನ್ನುಂಟುಮಾಡುತ್ತದೆ*
#############
*ಇದನ್ನು ಅಭಿವೃದ್ಧಿಪಡಿಸಿದವರು ಯಾರು?*
##############
*ಯುಎಸ್ ಮೂಲದ ಬಹುರಾಷ್ಟ್ರೀಯ ಬೀಜ ದೈತ್ಯ ಕಂಪನಿ "ಮೊನ್ಸಾಂಟೊ" ವು, "ಸಸ್ಯನಾಶಕ-ಸಹಿಷ್ಣು ಲಕ್ಷಣವನ್ನು ( herbicide-tolerant trait ) (ಬಿಜಿ -3)" ಅಭಿವೃದ್ಧಿಪಡಿಸಿದೆ ಮತ್ತು ಇದನ್ನು ಯುಎಸ್ಎನಲ್ಲಿ 'ರೌಂಡ್-ಅಪ್ ರೆಡಿ ಫ್ಲೆಕ್ಸ್ (RRF)' ಎಂದು ವಾಣಿಜ್ಯೀಕರಿಸಿದೆ.*
############
*HT Cotton ಏಕೆ ಜನಪ್ರಿಯತೆ ಪಡೆಯುತ್ತಿದೆ ?*
#############
*ಸಾಮಾನ್ಯ ಹತ್ತಿಯ ಸಸ್ಯವು ಮಣ್ಣಿನಿಂದ ಹೊರಹೊಮ್ಮಿದ ನಂತರ ಸಸ್ಯನಾಶಕ(herbicide)ವನ್ನು ಸಿಂಪಡಿಸುವುದು ಸಾಧ್ಯವಿಲ್ಲ. ಆದರೆ ಈ ಲಕ್ಷಣವನ್ನು HT Cotton ನಲ್ಲಿ ಬೇರೆ ಜೀನ್ ಮೂಲಕ ಸೇರಿಸಿ ಈ ಕೊರತೆಯನ್ನು ನಿವಾರಿಸಲಾಗಿದೆ.*
################
              *ಶಿಕ್ಷೆ...?*
            ••••••
*"ಸಸ್ಯನಾಶಕ ಸಹಿಷ್ಣು ಹತ್ತಿ" ಭಾರತದಲ್ಲಿ ವಾಣಿಜ್ಯ ಕೃಷಿಗಾಗಿ "ಜೆನೆಟಿಕ್ ಎಂಜಿನಿಯರಿಂಗ್ ಅನುಮೋದನಾ ಸಮಿತಿ"ಯು (GEAC) ಅಂಗೀಕರಿಸಿಲ್ಲ, ಇದನ್ನು ಉಲ್ಲಂಘಿಸುವುದು (ಮಾರಾಟ, ಕೃಷಿ ಮತ್ತು ಬೀಜ ಉತ್ಪಾದನೆಯು) ಸೀಡ್ಸ್ ಆಕ್ಟ್ 1966, ಸೀಡ್ ರೂಲ್ 1968, ಸೀಡ್ಸ್ (ಕಂಟ್ರೋಲ್) ಆರ್ಡರ್ 1983, ಪರಿಸರ ಸಂರಕ್ಷಣೆ ಕಾಯ್ದೆ 1986 ಮತ್ತು ಪರಿಸರ ಸಂರಕ್ಷಣೆ ರೂಲ್ಸ್, 1989 ರ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ.*

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ