*## ಮಾಹಿತಿ ವೇದಿಕೆ##*
*##ನಿಮಗಿದು ಗೊತ್ತಿರಲಿ##*
•••••••••••••••••••
*ಸೌರಶಕ್ತಿ ವೃದ್ಧಿಗೆ ದಶಸೂತ್ರ*
===============
*ಸೌರಶಕ್ತಿ ಬಳಕೆ ಹೆಚ್ಚಿಸಲು ಪೂರಕವಾದ 10 ಅಂಶಗಳ ಕ್ರಿಯಾ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿದ್ದಾರೆ. ನವದೆಹಲಿಯಲ್ಲಿ ನಡೆದ ಇಂಟರ್ನ್ಯಾಷನಲ್ ಸೋಲಾರ್ ಅಲಯನ್ಸ್ (ಐಎಸ್ಎ)ನ ಸಂಸ್ಥಾಪನಾ ಶೃಂಗದಲ್ಲಿ ಭಾಗಿಯಾಗಿ ಅವರು ಮಾತನಾಡಿದರು. ಒಂದು ಅಂದಾಜಿನ ಪ್ರಕಾರ 2030ರ ವೇಳೆಗೆ ಐಎಸ್ಎ ಸದಸ್ಯ ರಾಷ್ಟ್ರಗಳು ಒಟ್ಟಾಗಿ 1,000 ಗಿಗಾವಾಟ್ಗೂ ಅಧಿಕ ಸೌರ ವಿದ್ಯುತ್ ಉತ್ಪಾದಿಸಬೇಕಾಗಿದ್ದು, ಇದಕ್ಕಾಗಿ 1 ಲಕ್ಷ ಕೋಟಿ ಡಾಲರ್ ಹೂಡಿಕೆ ಅಗತ್ಯವಿದೆ. ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಜತೆಗೂಡಿ ವಾರಾಣಸಿಗೆ ಭೇಟಿ ನೀಡಲಿದ್ದಾರೆ. ಇದೇ ವೇಳೆ, ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಸೌರ ಘಟಕವನ್ನು ಇಬ್ಬರೂ ಉದ್ಘಾಟಿಸಲಿದ್ದಾರೆ. ಸೌರಶಕ್ತಿ ಯೋಜನೆಗಳ ಅನುಷ್ಠಾನಕ್ಕೆ 2022ರ ಒಳಗಾಗಿ 86.15 ಕೋಟಿ ಡಾಲರ್ ಹೆಚ್ಚುವರಿಯಾಗಿ ಸಾಲ, ದೇಣಿಗೆ ರೂಪದಲ್ಲಿ ಫ್ರಾನ್ಸ್ ಸರ್ಕಾರ ಒದಗಿಸಲಿದೆ. ಭಾರತ ಮತ್ತು ಫ್ರಾನ್ಸ್ ಸೌರ ಶಕ್ತಿ ಬಳಕೆ ವಿಚಾರದಲ್ಲಿ ಫಲಿತಾಂಶ ಆಧಾರಿತ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡುತ್ತಿವೆ. ಫ್ರಾನ್ಸ್ ಈ ಹಿಂದೆಯೇ 30 ಕೋಟಿ ಡಾಲರ್ ಒದಗಿಸುವುದಾಗಿ ಘೋಷಿಸಿತ್ತು.*
##############
*ಕ್ರಿಯಾಯೋಜನೆಯ ಪ್ರಮುಖ ಅಂಶಗಳು*
=============
> *ಎಲ್ಲ ದೇಶಗಳಿಗೂ ಕಡಿಮೆ ವೆಚ್ಚದಲ್ಲಿ ಸೌರ ತಂತ್ರಜ್ಞಾನ. *
> *ಸೌರ ವಿದ್ಯುತ್ತನ್ನು ಪರಸ್ಪರ ಹಂಚಿಕೊಳ್ಳುವುದು.*
> *ಸೌರ ವಿದ್ಯುತ್ ಯೋಜನೆಗಳಿಗೆ ಹಣಕಾಸು ನೆರವು ನೀಡಲು ನಿಯಮ ರೂಪಿಸುವುದು. *
> *ನಿಯಮ, ನಿಬಂಧನೆ ಮತ್ತು ಗುಣಮಟ್ಟಕ್ಕೆ ಚೌಕಟ್ಟು ರೂಪಿಸುವುದು. *
> *ಬ್ಯಾಂಕ್ ನೆರವಿನ ಯೋಜನೆಗಳಿಗೆ ಸಮಾಲೋಚನಾ ಸಹಕಾರ ಒದಗಿಸುವುದು. *
> *ಗುಣಮಟ್ಟ ಕಾಪಾಡಲು ಕೇಂದ್ರಗಳ ಜಾಲ ರೂಪಿಸುವುದು. *
> *ಸೌರ ತಂತ್ರಜ್ಞಾನ ಯೋಜನೆ ಜಾರಿಗೊಳಿಸುವುದು.*
> * ಸೌರ ಶಕ್ತಿ ಕ್ಷೇತ್ರದ ಸಂಶೋಧನೆ ಮತ್ತು ಅಭಿವೃದ್ಧಿ ಕೆಲಸ ಆರಂಭಿಸುವುದು. *
> *ಸದಸ್ಯ ರಾಷ್ಟ್ರಗಳಿಗೆ 500 ಹಂತದ ತರಬೇತಿ ಒದಗಿಸುವುದು. *
> *ಐಎಸ್ಎಯ ಸಚಿವಾಲಯವನ್ನು ಬಲಪಡಿಸುವುದು ಮತ್ತು ವೃತ್ತಿಪರತೆಯನ್ನು ರೂಢಿಸುವುದು. *
=============
*ಭಾರತದ ಪಾತ್ರವೇನು?*
================
*ಐಎಸ್ಎಯ ಸಂಚಿತ ನಿಧಿ ರೂಪಿಸುವುದಕ್ಕಾಗಿ ಭಾರತ ಸರ್ಕಾರ 2.7 ಕೋಟಿ ಡಾಲರ್ ನೀಡಿದೆ. ಇದರ ಕೇಂದ್ರ ಕಚೇರಿಯನ್ನು ಹರಿಯಾಣದ ಗುರುಗ್ರಾಮದಲ್ಲಿ ಸ್ಥಾಪಿಸಿದೆ. 2016-17ರಿಂದ 2020-21ರ ಅವಧಿಯ ನಡುವೆ ಇಲ್ಲಿ ಮೂಲಸೌಕರ್ಯ ಒದಗಿಸುವುದಕ್ಕೆ ಮತ್ತು ಆವರ್ತನ ವೆಚ್ಚಕ್ಕೆ ಅದನ್ನು ಬಳಸಿಕೊಳ್ಳಲಿದೆ. ಅದೇ ರೀತಿ, ಭಾರತೀಯ ಸೌರಶಕ್ತಿ ನಿಗಮ(ಎಸ್ಇಸಿಐ), ಭಾರತೀಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಸಂಸ್ಥೆ(ಐಆರ್ಇಡಿಎ) ಕೂಡ ಐಎಸ್ಎ ಸಂಚಿತ ನಿಧಿಗೆ ತಲಾ 10 ಲಕ್ಷ ಡಾಲರ್ ಪಾವತಿಸಿವೆ. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತನ್ನ ಅಭಿವೃದ್ಧಿ ಪಾಲುದಾರಿಕೆ ಆಡಳಿತ ಕಾರ್ಯಕ್ರಮದ ಮೂಲಕ 1.5-2 ಶತಕೋಟಿ ಡಾಲರ್ ಸಾಲದ ರೂಪದಲ್ಲಿ ಆಫ್ರಿಕನ್ ರಾಷ್ಟ್ರಗಳಿಗೆ ಒದಗಿಸಲು ಮುಂದಾಗಿದೆ.*
###############
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ