*##ಮಾಹಿತಿ ವೇದಿಕೆ##*
*ತಾಲ್ ಮೆಮೋರಿಯಲ್ ರಾಪಿಡ್ ಚೆಸ್ ಪ್ರಶಸ್ತಿ ಗೆದ್ದ ಆನಂದ್*
=================
*ವರ್ಲ್ಡ್ ರಾಪಿಡ್ ಚಾಂಪಿಯನ್ ವಿಶ್ವನಾಥನ್ ಆನಂದ್ ಅರು ತಾಲ್ ಮೆಮೋರಿಯಲ್ ರಾಪಿಡ್ ಚೆಸ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಇಸ್ರೇಲ್‌ನ ಬೋರಿಸ್ ಗೆಲ್‌ಫಾಂಡ್ ವಿರುದ್ಧದ ಫೈನಲ್ ರೌಂಡ್‌ನಲ್ಲಿ ಆನಂದ್ ಡ್ರಾ ಸಾಧಿಸುವ ಮೂಲಕ ಪ್ರಶಸ್ತಿಗೆ ಭಾಜನರಾದರು. ಗರಿಷ್ಠ ಸಾಧ್ಯತೆಯ 9 ಅಂಕಗಳಲ್ಲಿ ಆನಂದ್ 6 ಅಂಕ ಗಳಿಸಿದರು. ನಾಲ್ಕು ವಿಜಯ, ನಾಲ್ಕು ಡ್ರಾ -ಇದು ಆನಂದ್ ಸಾಧನೆ. ಮೂರನೇ ಸುತ್ತಿನಲ್ಲಿ ಅಜರ್‌ಬೈಜಾನ್‌ನ ಶಕ್ರಿಯಾರ್ ಮ್ಯಾಮೆದ್ಯಾರೋವ್ ಅವರ ಕೈಯಲ್ಲಿ ಆನಂದ್ ಏಕೈಕ ಸೋಲು ಅನುಭವಿಸಿದ್ದರು. ಅನಂತರದಲ್ಲಿ ಆನಂದ್ ಅತ್ಯದ್ಭುತ ನಿರ್ವಹಣೆ ತೋರಿ ತಾಲ್ ಮೆಮೋರಿಯಲ್ ರಾಪಿಡ್ ಚೆಸ್ ವಿಜೇತರಾದರು.*
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ