ಭಾನುವಾರ, ಮಾರ್ಚ್ 4, 2018

90ನೇ ಆಸ್ಕರ್ ಪ್ರಶಸ್ತಿ ಪ್ರದಾನ : ವಿಜೇತರ ಪಟ್ಟಿ* ==============≠=

*##ಮಾಹಿತಿ ವೇದಿಕೆ##*

*90ನೇ ಆಸ್ಕರ್ ಪ್ರಶಸ್ತಿ ಪ್ರದಾನ : ವಿಜೇತರ ಪಟ್ಟಿ*
==============≠=
*ಅಮೆರಿಕದ ಲಾಸ್ ಏಂಜೆಲಿಸ್ ನಲ್ಲಿ 05-03-2018 ರಂದು ನಡೆದ ಸಿನಿಮಾರಂಗದ ಅತ್ಯುನ್ನತ ಪ್ರಶಸ್ತಿ  2018 ನೇ ಸಾಲಿನ 90ನೇ ಆಸ್ಕರ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ದಿ ಶೇಪ್ ಆಫ್ ವಾಟರ್ ಅತ್ಯುತ್ತಮ ನಿರ್ದೇಶನ ಸೇರಿದಂತೆ ಒಟ್ಟು ನಾಲ್ಕು ಪ್ರಶಸ್ತಿಗಳನ್ನು ಗಳಿಸಿದೆ. ಗ್ಯುಲ್ಲೆರ್ಮೋ ಡೆಲ್ ಟೊರೊ ನಿರ್ದೇಶನದ ದಿ ಶೇಪ್ ಆಫ್ ವಾಟರ್ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಗಳಿಸಿದೆ. ಇದೇ ಸಿನಿಮಾ ಗ್ಯುಲ್ಲೆರ್ಮೋಗೆ ಸರ್ವಶ್ರೇಷ್ಠ ನಿರ್ದೇಶಕ ಪ್ರಶಸ್ತಿ ದಕ್ಕಿಸಿಕೊಟ್ಟಿದೆ. ಅಲ್ಲದೆ ಉತ್ತಮ ಸಂಗೀತ ಹಾಗೂ ಶ್ರೇಷ್ಠ ಪ್ರೊಡಕ್ಷನ್ ಡಿಸೈನ್ ಈ ವಿಭಾಗಗಳಲ್ಲೂ ಎರಡು ಪ್ರಶಸ್ತಿಗಳನ್ನು ಗಳಿಸಿದೆ.*
===============
*ಪ್ರಶಸ್ತಿ ವಿಜೇತರ ಪಟ್ಟಿ :*
*ಶ್ರೇಷ್ಠ ನಟ : ಗ್ಯಾರಿ ಓಲ್ಡ್‍ಮ್ಯಾನ್ (ಚಿತ್ರ : ಡಾರ್ಕೆಸ್ಟ್ ಅವರ್ )*
* *ಶ್ರೇಷ್ಠ ನಟಿ : ಫ್ರಾನ್ಸೆಸ್ ಮ್ಯಾಕ್‍ಡೊರ್ಮಾಂಡ್ (ಚಿತ್ರ : ಮಿಸ್ಸೂರಿ)*
* *ಅತ್ಯುತ್ತಮ ಪೋಷಕ ನಟಿ :  ಅಲಿಸನ್ ಜಾನ್ನೇ (ಐ, ಟೊನ್ಯಾ )*
* *ಉತ್ತಮ ಪೋಷಕ ನಟ : ಸ್ಯಾಮ್ ರಾಕ್‍ವೆಲ್ (ಥ್ರೀ ಬಿಲ್‍ಬೋಡ್ರ್ಸ್ ಔಟ್‍ಸೈಡ್ ಎಬ್ಬಂಗ್, ಮಿಸ್ಸೂರಿ )*
* *ಉತ್ತಮ ಮೂಲ ಕಥೆ-ಗೆಟೌಟ್*
* *ಉತ್ತಮ ಚಿತ್ರಕಥೆ-ಕಾಲ್ ಮಿ ಬೈ ಯುವರ್ ನೇಮ್*
* *ಉತ್ತಮ ಅನಿಮೇಷನ್ ಸಿನಿಮಾ-ಕೋಕೋ*
* *ಉತ್ತಮ ವಿದೇಶಿ ಭಾಷೆ ಚಿತ್ರ-ಎ ಫ್ಯಾಂಟಾಸ್ಟಿಕ್ ವುಮೆನ್(ಚಿಲಿ)*
* *ಉತ್ತಮ ಮೂಲ ಗಾಯನ-ರಿಮೆಂಬರ್ ಮೀ, ಕೋಕೋ*
* *ಉತ್ತಮ ಸಾಕ್ಷ್ಯಚಿತ್ರ-ಇಕಾರಸ್*
* *ಉತ್ತಮ ಕಿರು ಸಾಕ್ಷ್ಯಾಚಿತ್ರ-ಹೆವನ್ ಇಸ್ ಎ ಟ್ರಾಫಿಕ್ ಜಾಮ್ ಆನ್ ದಿ 405*
* *ಉತ್ತಮ ಲೈವ್ ಆ್ಯಕ್ಷನ್ ಶಾರ್ಟ್-ದಿ ಸೈಲೆಂಟ್ ಚೈಲ್ಡ್*
* *ಉತ್ತಮ ಅನಿಮೇಷನ್ ಕಿರುಚಿತ್ರ-ಡಿಯರ್ ಬ್ಯಾಸ್ಕೆಟ್ ಬಾಲ್*
================
* *ಉತ್ತಮ ಚಿತ್ರ ಸಂಕಲನ, ಉತ್ತಮ ಶಬ್ಧ ಸಂಕಲನ ಮತ್ತು ಉತ್ತಮ ಶಬ್ಧ ಸಂಯೋಜನೆ-ಡನ್‍ಕ್ರಿಕ್(3 ಪ್ರಶಸ್ತಿಗಳು)*
============
* *ಉತ್ತಮ ಛಾಯಾಗ್ರಹಣ ಮತ್ತು ಉತ್ತಮ ದೃಶ್ಯ ಪರಿಣಾಮ-ಬ್ಲೇಡ್ ರನ್ನರ್.*
===============
*ಭಾರತದ ಪ್ರತಿಭಾವಂತ ನಟ ಅಲಿ ಫಜಲ್ ಹಾಗೂ ಬ್ರಿಟಿಷ್ ತಾರೆ ಜುಡಿ ಡೆಂಚ್ ಅಭಿನಯದ ವಿಕ್ಟೋರಿಯಾ ಅಂಡ್ ಅಬ್ದುಲ್ ಸಿನಿಮಾ ಅತ್ಯುತ್ತಮ ಮೇಕಪ್, ಹೇರ್‍ಸ್ಟೈಲ್ ಮತ್ತು ಕಾಸ್ಟ್ಯೂಮ್ ಡಿಸೈಸ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿತ್ತಾದರೂ, ಆ ಪ್ರಶಸ್ತಿಗಳು ಡಾರ್ಕೆಸ್ಟ್ ಹವರ್ ಮತ್ತು ಫ್ಯಾಂಟಮ್ ಥ್ರೆಡ್ ಸಿನಿಮಾಗಳ ಪಾಲಾದವು.*
==============
*‘ದ ಶೇಪ್ ಆಫ್ ವಾಟರ್’ ಅತ್ಯುತ್ತಮ ಚಿತ್ರ*
##############
*‘ದ ಶೇಪ್ ಆಫ್ ವಾಟರ್’ 2018ನೇ ಸಾಲಿನ 90ನೇ ಆಸ್ಕರ್ ಪ್ರಶಸ್ತಿಯ ಅತ್ಯುತ್ತಮ ಚಿತ್ರವಾಗಿ ಹೊರಹೊಮ್ಮಿದೆ. ಇದರ ನಿರ್ದೇಶಕರು ಗಿಲ್ಲೆರ್ಮೊ ಡೆಲ್ ಟೊರೊ ಈ ಸಾಲಿನ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಗಳಿಸಿದ್ದಾರೆ. ಈ ಚಿತ್ರದ ನಿರ್ಮಾಪಕರು ಜೆ. ಮಿಲ್ಸ್ ಡೇಲ್ ಆಗಿದ್ದಾರೆ. ಅತ್ಯುತ್ತಮ ಚಿತ್ರ ಸೇರಿದಂತೆ ನಾಲ್ಕು ವಿಭಾಗಗಳಲ್ಲಿ ಶೇಪ್ ಆಫ್ ವಾಟರ್ ಪ್ರಶಸ್ತಿ ಗಳಿಸಿಕೊಂಡಿದೆ. ಶೀತಲ ಯುದ್ಧದ ಫ್ಯಾಂಟಸಿ ಚಿತ್ರವಾಗಿರುವ ದ ಶೇಪ್ ಆಫ್ ವಾಟರ್ ನಲ್ಲಿ ಸ್ಯಾಲ್ಲಿ ಹಾಕಿನ್ಸ್ ಮೂಕ ದ್ವಾರಪಾಲಕಳಾಗಿ ನಟಿಸಿದ್ದು ಈಕೆ ಸರ್ಕಾರಿ ಪ್ರಯೋಗಾಲಯದಿಂದ ವಶಪಡಿಸಿಕೊಂಡ ಜನಚರ ಪ್ರಾಣಿ ಜೊತೆ ಪ್ರೀತಿಯಲ್ಲಿ ಬೀಳುತ್ತಾಳೆ ಇದೆ ಈ ಚಿತ್ರದ ಕಥೆ.*
===============

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ