ಗುರುವಾರ, ಮಾರ್ಚ್ 8, 2018

ಭಾರತೀಯ ವಾಸ್ತುಶಿಲ್ಪಿ ಬಿ.ವಿ ದೋಷಿಗೆ 'ವಾಸ್ತುಶಿಲ್ಪದ ನೊಬೆಲ್‌'*

*##ಮಾಹಿತಿ ವೇದಿಕೆ##*

*ಭಾರತೀಯ ವಾಸ್ತುಶಿಲ್ಪಿ ಬಿ.ವಿ ದೋಷಿಗೆ 'ವಾಸ್ತುಶಿಲ್ಪದ ನೊಬೆಲ್‌'*
#############
*ವಾಷಿಂಗ್ಟನ್‌: ಹೆಸರಾಂತ ಭಾರತೀಯ ವಾಸ್ತುಶಿಲ್ಪಿ ಬಾಲಕೃಷ್ಣ ದೋಷಿ ಅವರು ನೊಬೆಲ್‌ಗೆ ಸಮಾನವಾದ ಪ್ರಿಟ್ಝ್‌ಕರ್‌ ಆರ್ಕಿಟೆಕ್ಚರ್‌ ಪ್ರಶಸ್ತಿಗೆ ಭಾಜನರಾಗಿದ್ದಾರೆ.*
##############
*ಪುಣೆ ಮೂಲದ ದೋಷಿ (90), ಈ ಪ್ರಶಸ್ತಿಗೆ ಭಾಜನರಾದ ಮೊದಲ ಭಾರತೀಯರಾಗಿದ್ದಾರೆ. ಈ ಮೊದಲು ಝಹಾ ಹಡಿಡ್‌, ಫ್ರಾಂಕ್‌ ಗೆಹ್ರಿ, ಐಎಂ ಪೆಯ್‌ ಮತ್ತು ಶಿಗೇರು ಬಾನ್‌ ಈ ಪ್ರತಿಷ್ಠಿತ ಪ್ರಶಸ್ತಿಗೆ ಪಾತ್ರರಾಗಿದ್ದರು.*
#############
*'ಬಾಲಕೃಷ್ಣ ದೋಷಿ ಅವರು ಯಾವುದೇ ಥಳುಕು ಬಳುಕಿನ ಅಥವಾ ಟ್ರಂಡ್‌ ಅನುಸರಿಸದೆ, ಗಂಭೀರವಾದ ವಾಸ್ತುಶಿಲ್ಪವನ್ನು ಸೃಷ್ಟಿಸುತ್ತ ಬಂದಿದ್ದಾರೆ. ಅತ್ಯುತ್ತಮ ಗುಣಮಟ್ಟ, ದೃಢವಾದ ಹೊಣೆಗಾರಿಕೆ ಮತ್ತು ತಮ್ಮ ದೇಶಕ್ಕೆ ಏನಾದರೂ ಕೊಡುಗೆ ನೀಡಲೇಬೇಕೆಂಬ ತುಡಿತ ಅವರದ್ದಾಗಿತ್ತು. ಅವರು ಬರೇ ಕಟ್ಟಡಗಳ ವಿನ್ಯಾಸ ಮಾಡುತ್ತಿರಲಿಲ್ಲ, ಸಂಸ್ಥೆಗಳ ವಿನ್ಯಾಸ ಮಾಡುತ್ತಿದ್ದರು. ಹಲವಾರು ಸರಕಾರಿ ಮತ್ತು ಸಾರ್ವಜನಿಕ ಸೌಲಭ್ಯಗಳ ಕಟ್ಟಡಗಳು, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆಗಳ ವಿನ್ಯಾಸಗಳನ್ನು ರಚಿಸಿದ್ದರು' ಎಂದು ಪ್ರಿಟ್ಝ್‌ಕರ್‌ ಆಯ್ಕೆದಾರರ ಮಂಡಳಿ ಹೇಳಿಕೆ ತಿಳಿಸಿದೆ.*
#############

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ