ಶನಿವಾರ, ಮಾರ್ಚ್ 17, 2018

ನಿಮಗಿದು ಗೊತ್ತೆ#

*##ಮಾಹಿತಿ ವೇದಿಕೆ##*

    *##ನಿಮಗಿದು ಗೊತ್ತೆ##*
        •••••••••••••••••••
   *ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗ ( National Commission for Protection of Child Rights - NCPCR)*
###############
*Commission for Protection of Child Rights Act - 2005 ರ ಅಡಿಯಲ್ಲಿ ಸ್ಥಾಪಿತವಾದ ಒಂದು ಶಾಸನಬದ್ಧವಾದ ಸಂಸ್ಥೆಯಾಗಿದೆ(NCPCR ವನ್ನು ಕಾನೂನುಬದ್ಧ ಅಂಗವಾಗಿ ಮಾರ್ಚ್ 2007ರಲ್ಲಿ ಸ್ಥಾಪಿಸಲಾಯಿತು.). ಕೇಂದ್ರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಈ ಆಯೋಗವು ಕಾರ್ಯನಿರ್ವಹಿಸುತ್ತದೆ. ಈ ಅಯೋಗವು 18 ವರ್ಷ ವಯಸ್ಸಿನೊಳಗಿನವರನ್ನು ಮಕ್ಕಳು ಎಂದು ಪರಿಗಣಿಸುತ್ತದೆ. ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ( ಎನ್.ಸಿ.ಪಿ.ಸಿ.ಆರ್)ವು ಮಕ್ಕಳ ಹಕ್ಕುಗಳ ಸಾರ್ವತ್ರೀಕರಣ ಮತ್ತು ಅಭಗ್ನತೆಯ ತತ್ವಗಳಿಗೆ ಒಟ್ಟು ನೀಡುತ್ತದೆ. ಅಲ್ಲದೆ ಮಕ್ಕಳಿಗೆ ಸಂಬಂಧಿಸಿದ ದೇಶದ ಎಲ್ಲಾ ನೀತಿಗಳಲ್ಲಿ ತ್ವರಿತ ಗತಿಯನ್ನು ಗುರುತಿಸುತ್ತದೆ. ೦-18 ವರ್ಷ ವಯಸ್ಸಿನ ಎಲ್ಲಾ ಮಕ್ಕಳ ಹಕ್ಕುಗಳ ಸಂರಕ್ಷಣೆಯೇ ಆಯೋಗದ ಪ್ರಾಮುಖ್ಯತೆಯಾಗಿದೆ. ಹಾಗಾಗಿ ಎಲ್ಲಾ ನೀತಿಗಳು ಅತ್ಯಂತ ಭೇದನಿಯ ಮಕ್ಕಳಿಗೆ ಪ್ರಾಶಸ್ತ್ಯ ನೀಡುತ್ತದೆ. ಈ ನಿಟ್ಟಿನಲ್ಲಿ ಅತ್ಯಂತ ಹಿಂದುಳಿದ ಪ್ರದೇಶದ ಅಥವಾ ಕೆಲವು ಸನ್ನಿವೇಶಗಳಲ್ಲಿ ಮಕ್ಕಳು ಇತ್ಯಾದಿಗಳಿಗೆ ಆಯೋಗ ಕೇಂದ್ರೀಕರಿಸುತ್ತದೆ. ದೇಶದಲ್ಲಿ ಮಕ್ಕಳ ಹಕ್ಕುಗಳನ್ನು ಸಂರಕ್ಷಿಸಿ, ಪ್ರೋತ್ಸಾಹಿಸಿ ಅವುಗಳನ್ನು ಕಾಪಾಡುವ ಉದ್ದೇಶದಿಂದ ಆಯೋಗವನ್ನು ಸ್ಥಾಪಿಸಲಾಗಿದೆ.*
############
*ಆಯೋಗದ ಜವಾಬ್ದಾರಿಗಳು*
=============
> *ಮಕ್ಕಳ ಹಕ್ಕುಗಳನ್ನು ರಕ್ಷಿಸಲು ಕಾಯ್ದೆ ಅಥವಾ ಇತರೆ ಕಾನೂನಿನ ಪ್ರಕಾರ ಜಾರಿಯಲ್ಲಿರುವ ಭದ್ರತೆಗಳನ್ನು ಪರಿಶೀಲಿಸಿ, ಪರೀಕ್ಷಿಸಿ, ಅವುಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಸಲಹೆ ಮತ್ತು ಕ್ರಮಗಳನ್ನು ಶಿಫಾರಸ್ಸು ಮಾಡುವುದು.*
> *ಈ ಭದ್ರತೆಗಳ ಅನುಷ್ಠಾನ ಕುರಿತು ವಾರ್ಷಿಕ ಅಥವಾ ಆಯೋಗ ಸೂಕ್ತವೆನ್ನುವ ಕಾಲಕಾಲಕ್ಕೆ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಪ್ರಸ್ತುತ ಪಡಿಸುವುದು.*
> *ಮಕ್ಕಳ ಹಕ್ಕುಗಳ ಉಲ್ಲಂಘನೆಯ ಪ್ರಕರಣಗಳನ್ನು ತನಿಖೆ ಮಾಡಿ ಅಂತಹ ಪ್ರಕರಣಗಳಲ್ಲಿ ಸೂಕ್ತ ಕ್ರಮಗಳನ್ನು ಜರುಗಿಸಲು ಶಿಫಾರಸ್ಸು ಮಾಡುವುದು.*
> *ಭಯೋತ್ಪಾದನೆ, ಕೋಮು ಗಲಬೆ, ದೊಂಬಿ, ನೈಸರ್ಗಿಕ ವಿಕೋಪ, ಕೌಟುಂಬಿಕ ದೌರ್ಜನ್ಯ, ಹೆಚ್ ಐ ವಿ/ಏಡ್ಸ್ ಮಾನವ ಸಾಗಾಣಿಕೆಗೆ, ಕ್ರೂರತನ, ಪೀಡೆ ಮತ್ತು ದುರುಪಯೋಗ, ಅಶ್ಲೀಲ ಚಿತ್ರೀಕರಣ ಹಾಗೂ ವೇಶ್ಯವಾಟಿಕೆ ಪೀಡಿತ ಮಕ್ಕಳಿಗೆ ತಮ್ಮ ಹಕ್ಕುಗಳನ್ನು ಚಲಾಯಿಸುವಲ್ಲಿ ಉಂಟಾಗುವ ಬಾದೆಗಳನ್ನು ಗುರುತಿಸಿ ಸೂಕ್ತ ಕ್ರಮಗಳನ್ನು ಶಿಫಾರಸ್ಸು ಮಾಡುವುದು.*
> *ಸಂಕಷ್ಟದಲ್ಲಿರುವ ಮಕ್ಕಳು, ಬಾಲಾಪರಾಧಿಗಳು ಅಪಾಯದ ಅಂಚಿನಲ್ಲಿರುವ ಮಕ್ಕಳು, ಕುಟುಂಬ ವಂಚಿತ ಮಕ್ಕಳು ಮತ್ತು ಖೈದಿಗಳ ಮಕ್ಕಳು ಸೇರಿದಂತೆ ವಿಶೇಷ ಆರೈಕೆ ಮತ್ತು ರಕ್ಷಣೆಯ ಅವಶ್ಯಕತೆಯಿರುವ ಮಕ್ಕಳಿಗೆ ಸಂಬಂಧಿಸಿದ ವಿಷಯಗಳನ್ನು ಪರಿಗಣಿಸಿ ಸೂಕ್ತ ಕ್ರಮಗಳನ್ನು ಸೂಚಿಸುವುದು.*
> *ಮಕ್ಕಳ ಹಕ್ಕುಗಳಿಗೆ ಸಂಬಂಧಿಸಿದ ನೀತಿಗಳನ್ನು, ಕಾರ್ಯಕ್ರಮಗಳನ್ನು ಮತ್ತು ಇತರೆ ಚಟುವಟಿಕೆಗಳನ್ನು ಕಾಲಕಾಲಕ್ಕೆ ಪರಿಶೀಲಿಸಿ ಮಕ್ಕಳ ಒಳಿತಿಗಾಗಿ ಅವುಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಸೂಚನೆಗಳನ್ನು ನೀಡುವುದು.ಮಕ್ಕಳ ಹಕ್ಕುಗಳ ಕ್ಷೇತ್ರದಲ್ಲಿ ಸಂಶೋಧನೆಗಳನ್ನು ಕೈಗೊಳ್ಳುವುದು ಮತ್ತು ಅವುಗಳನ್ನು ಪ್ರೋತ್ಸಾಹಿಸುವುದು.*
==============

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ