============
ಲಾಭದಾಯಕ ಹುದ್ದೆ ಹೊಂದಿದ ಪ್ರಕರಣದಲ್ಲಿ ದೆಹಲಿ ವಿಧಾಸನಸಭೆಯ ಆಮ್ ಆದ್ಮಿ ಪಕ್ಷದ (ಆಪ್) 20 ಶಾಸಕರನ್ನು ಅನರ್ಹಗೊಳಿಸಿದ ರಾಷ್ಟ್ರಪತಿಗಳ ಅಧಿಸೂಚನೆಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದ್ದು, ಈ ಪ್ರಕರಣದಲ್ಲಿ ಹೊಸದಾಗಿ ವಿಚಾರಣೆ ನಡೆಸುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಿದೆ.
==========
ಏನಿದು ಪ್ರಕರಣ?
==============
ಸಚಿವರಿಗೆ ಸಹಾಯಕರಾಗಿ ಸಂಸದೀಯ ಕಾರ್ಯದರ್ಶಿ ಹುದ್ದೆಗಳನ್ನು ಸೃಷ್ಟಿಸುವ ಮೂಲಕ ಶಾಸಕರಿಗೆ ಅನುಕೂಲ ಮಾಡಿಕೊಡಲಾಗಿದ್ದು, ಇದು ಲಾಭದಾಯಕ ಹುದ್ದೆಯಾಗಿದೆ. ಸಂವಿಧಾನದ ಅನುಸಾರ ಸಂಸದರು ಅಥವಾ ಶಾಸಕರು ಇಂತಹ ಲಾಭದಾಯಕ ಹುದ್ದೆ ಹೊಂದುವಂತಿಲ್ಲ. ಹಾಗಾಗಿ 2015ರ ಮಾರ್ಚ್ 13ರಂದು ಸಂಸದೀಯ ಕಾರ್ಯದರ್ಶಿಗಳಾಗಿ ನೇಮಕಗೊಂಡಿರುವ ಆಪ್ನ 21 ಶಾಸಕರನ್ನು ಅನರ್ಹಗೊಳಿಸಬೇಕು ಎಂದು ಉತ್ತರಪ್ರದೇಶ ಮೂಲದ ಯುವ ವಕೀಲ ಪ್ರಶಾಂತ್ ಪಟೇಲ್ 2015ರ ಜೂನ್ 19ರಂದು ರಾಷ್ಟ್ರಪತಿಗಳಿಗೆ ದೂರು ನೀಡಿದ್ದರು. ಈ ದೂರನ್ನು ರಾಷ್ಟ್ರಪತಿ ಕಾರ್ಯಾಲಯ ಚುನಾವಣಾ ಆಯೋಗಕ್ಕೆ ಕಳುಹಿಸಿತ್ತು. ಆಯೋಗ 20 (ತಿಲಕ್ ನಗರ ಕ್ಷೇತ್ರದ ಶಾಸಕ ಜರ್ನೆಲ್ ಸಿಂಗ್ ಪಂಜಾಬ್ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ ಕಾರಣ ರಾಜೀನಾಮೆ ನೀಡಿದ್ದರು) ಶಾಸಕರನ್ನು ಅನರ್ಹಗೊಳಿಸಬಹುದು ಎಂದು ರಾಷ್ಟ್ರಪತಿಗಳಿಗೆ ಕಳೆದ ಜನವರಿ 19ರಂದು ಶಿಫಾರಸು ಮಾಡಿತ್ತು. ಶಾಸಕರನ್ನು ಅನರ್ಹಗೊಳಿಸುವ ಕಡತಕ್ಕೆ ರಾಷ್ಟ್ರಪತಿ ಜ.21ರಂದು ಸಹಿ ಹಾಕಿದರು. ಇದನ್ನು ಪ್ರಶ್ನಿಸಿ ಆಪ್ನ 20 ಶಾಸಕರು ದೆಹಲಿ ಹೈಕೋರ್ಟ್ಗೆ ಜ.23ರಂದು ಅರ್ಜಿ ಸಲ್ಲಿಸಿದ್ದರು.
===========
'"ಲಾಭದಾಯಕ ಹುದ್ದೆ" ಎಂದರೇನು?
==========
ಒಬ್ಬ ಶಾಸಕ ಅಥವಾ ಸಂಸತ್ ಸದಸ್ಯರು ಸರ್ಕಾರಿ ಕಚೇರಿಯ ಸದಸ್ಯತ್ವ ಹೊಂದಿದ್ದರೆ ಮತ್ತು ಅದರಿಂದ ಪ್ರಯೋಜನ ಪಡೆದರೆ ಇದನ್ನು ಲಾಭದಾಯಕ ಹುದ್ದೆ ಎನ್ನುವರು. ಸಂಸತ್ತು ಅಥವಾ ರಾಜ್ಯ ಶಾಸಕಾಂಗವು ಲಾಭದಾಯಕ ಹುದ್ದೆ ಅಲ್ಲ ಎಂದು ಅಂಗೀಕರಿಸಿದ ಕಾನೂನಿನ ಹೊರತುಪಡಿಸಿ, ಕೇಂದ್ರ ಅಥವಾ ರಾಜ್ಯ ಸರ್ಕಾರದ ಅಡಿಯಲ್ಲಿ ಒಬ್ಬ ಶಾಸಕ ಅಥವಾ ಸಂಸತ್ ಸದಸ್ಯ ಲಾಭದಾಯಕ ಹುದ್ದೆಯನ್ನು ಹೊಂದಿದ್ದರೆ ಆ ವ್ಯಕ್ತಿಯನ್ನು ಅನರ್ಹಗೊಳಿಸಲಾಗುತ್ತದೆ.
=============
ಶಾಸಕ ಅಥವಾ ಸಂಸತ್ ಸದಸ್ಯರ ಅನರ್ಹಗೊಳಿಸುವಿಕೆ (ಭಾರತೀಯ ಸಂವಿಧಾನ).
=============
ಸಂವಿಧಾನದ ಆರ್ಟಿಕಲ್ 102 ರಲ್ಲಿ ಸಂಸತ್ ಸದಸ್ಯರಿಗೆ ಅನರ್ಹತೆ ಮಾನದಂಡಗಳನ್ನು ನೀಡಲಾಗಿದೆ ಮತ್ತು ಆರ್ಟಿಕಲ್ 191 ರಲ್ಲಿ ಶಾಸಕರಿಗೆ ಅನರ್ಹತೆ ಮಾನದಂಡಗಳನ್ನು ನೀಡಲಾಗಿದೆ.
==========
ಈ ವಿಷಯಗಳಲ್ಲಿ ಅನರ್ಹಗೊಳಿಸಲಾಗುತ್ತದೆ : ಲಾಭದಾಯಕ ಹುದ್ದೆಯನ್ನು ಹೊಂದಿದಾಗ , ಸೇವೆ ಸಲ್ಲಿಸಲು ಮನಸ್ಸಿಲ್ಲದಿರುವಾಗ, ದಿವಾಳಿಯಾದಾಗ, ಇನ್ನೊಂದು ದೇಶದ ಪೌರತ್ವವನ್ನು ಪಡೆದಾಗ.
=============
ಭಾನುವಾರ, ಮಾರ್ಚ್ 25, 2018
ಲಾಭದಾಯಕ ಹುದ್ದೆ : ದೆಹಲಿ ಹೈಕೋರ್ಟ್ ಎಎಪಿ ಶಾಸಕರ ಲಾಭದಾಯಕ ಹುದ್ದೆಯ ಪ್ರಕರಣವನ್ನು ರದ್ದುಪಡಿಸಿದೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ