ಭಾನುವಾರ, ಮಾರ್ಚ್ 25, 2018

ರಾಜ್ಯಸಭಾ ಚುನಾವಣೆ (Rajya Sabha elections)

================
         ರಾಜ್ಯಸಭೆ ಭಾರತದ ಶಾಸಕಾಂಗ ವ್ಯವಸ್ಥೆಯ ಮೇಲ್ಮನೆ. ಈ ಸದನದ ಒಟ್ಟು ಸದಸ್ಯರ ಸಂಖ್ಯೆ 250, ಅದರಲ್ಲಿ 12 ಜನರನ್ನು ಭಾರತದ ಅಧ್ಯಕ್ಷರು ನಾಮಕರಣ ಮಾಡುತ್ತಾರೆ. ಈ 12 ಜನರನ್ನು ವಿವಿಧ ಕ್ಷೇತ್ರಗಳಲ್ಲಿ (ಕಲೆ, ಸಾಹಿತ್ಯ, ಕ್ರೀಡೆ, ಪತ್ರಿಕೋದ್ಯಮ, ಸಮಾಜ ಸೇವೆ,etc ) ಸಲ್ಲಿಸಿರುವ ಸೇವೆಯನ್ನು ಗುರುತಿಸಿ, ಅವರನ್ನು ರಾಜ್ಯಸಭೆಯ ಸದಸ್ಯರನ್ನಾಗಿ ನಾಮಕರಣ ಮಾಡಲಾಗುತ್ತದೆ. ಇವರನ್ನು ನಾಮಕರಣ ಸದಸ್ಯರೆಂದು ಕರೆಯಲಾಗುತ್ತದೆ. ಇನ್ನುಳಿದ ಸದಸ್ಯರನ್ನು ರಾಜ್ಯ ವಿಧಾನಸಭೆ ಮತ್ತು ವಿಧಾನಪರಿಷತ್ತುಗಳಿಂದ ಆಯ್ಕೆ ಮಾಡಲಾಗುತ್ತದೆ. ರಾಜ್ಯ್ಸಸಭೆಯ ಸದಸ್ಯರ ಅವಧಿ 6 ವರ್ಷ. ಇದರಲ್ಲಿ ರಾಜ್ಯಸಭೆಯ 1/3 ರಷ್ಟು ಸದಸ್ಯರು 2 ವರ್ಷಗಳಿಗೊಮ್ಮೆ ನಿವೃತ್ತಿ ಹೊಂದುತ್ತಾರೆ. ರಾಜ್ಯಸಭೆಯು ಸತತವಾಗಿ ಸೇರುವ ಸದನವಾಗಿದ್ದು, ಲೋಕಸಭೆಯ ಹಾಗೇ ಇದರ ಸೇವಾವಧಿಯು ಅನೂರ್ಜಿತವಾಗುವದಿಲ್ಲ. ರಾಜ್ಯಸಭೆಯು ಲೋಕಸಭೆಯ ಹಾಗೆಯೇ ಸಮನಾದ ಅಧಿಕಾರವನ್ನು ಹೊಂದಿರುತ್ತದೆ, ಕೆಲವು ವಿಷಯಗಳಲ್ಲಿ ಲೋಕಸಭೆ ರಾಜ್ಯಸಭೆಯ ನಿರ್ಣಯವನ್ನು ತಿರಸ್ಕರಿಸಬಹುದು. 
===============
ರಾಜ್ಯಸಭೆ ಸದಸ್ಯರಾಗಲು ಬೇಕಾಗುವ ಅರ್ಹತೆ 
==============
 > ಭಾರತದ ಪ್ರಜೆಯಾಗಿರಬೇಕು  
> 30 ವರ್ಷ ವಯೋಮಿತಿ ಹೊಂದಿರಬೇಕು 
>  ನ್ಯಾಯಾಂಗದ ಶಿಕ್ಷೆಗೆ ಒಳಗಾಗಿರಬಾರದು  
>ಮತಿಭ್ರಮಣೆಯುಳ್ಳವರಾಗಿರಬಾರದು  
> ಸಂಸತ್ತು ಆಗಿಂದಾಗ್ಗೆ ನಿಗದಿಪಡಿಸಿದ ಅರ್ಹತೆ ಪಡೆದಿರಬೇಕು. 
===========
ರಾಜ್ಯಸಭಾ ಚುನಾವಣಾ ಪ್ರಕ್ರಿಯೆ 
============
     238 ಸದಸ್ಯರು ರಾಜ್ಯಗಳ ಪ್ರತಿನಿಧಿಗಳಾಗಿದ್ದು, ರಾಜ್ಯದ ಶಾಸನಸಭೆಯ ಚುನಾಯಿಸಲ್ಪಟ್ಟ ಸದಸ್ಯರಿಂದ ಅವರು ಚುನಾಯಿಸಲ್ಪಡುತ್ತಾರೆ; ವರ್ಗಾಯಿಸಬಹುದಾದ ಏಕೈಕ ಮತದ ಮೂಲಕ (proportional representation with a single transferable vote), ದಾಮಾಷಾ ಪ್ರಾತಿನಿಧ್ಯ ಪದ್ಧತಿಯ ಪ್ರಾತಿನಿಧ್ಯದ ವ್ಯವಸ್ಥೆಗೆ ಅನುಸಾರವಾಗಿ ಈ ಚುನಾಯಿಸುವಿಕೆ ನಡೆಯುತ್ತದೆ. ಪ್ರತಿ ಎರಡು ವರ್ಷಗಳಿಗೊಮ್ಮೆ, ಸರಿಸುಮಾರಾಗಿ ಪರಿಷತ್ತಿನ ಮೂರನೇ ಒಂದು ಭಾಗವು ಒಮ್ಮೆಗೆ ಚುನಾಯಿಸಲ್ಪಡುತ್ತದೆ. ಪ್ರತಿ ಮತದಾರರಿಗೆ ಅವರ ಆದ್ಯತೆ ಇರುತ್ತದೆ, ಮತ್ತು ಪಟ್ಟಿಯಲ್ಲಿರುವ ಮೊದಲ ಅಭ್ಯರ್ಥಿಯು ಸಾಕಷ್ಟು ಮತಗಳನ್ನು ಪಡೆದು ಗೆಲ್ಲುವಲ್ಲಿ ಅಥವಾ ಗೆಲ್ಲುವ ಸಾಧ್ಯತೆ ಇಲ್ಲದಿದ್ದರೆ, ಮತವನ್ನು ಮುಂದಿನ ಆಯ್ಕೆಗೆ ವರ್ಗಾಯಿಸಲಾಗುತ್ತದೆ. 
=============

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ