ಸೋಮವಾರ, ಮಾರ್ಚ್ 26, 2018

ಉಪಯುಕ್ತ ಮಾಹಿತಿ

2.ಸಂಕಲ್ಪ್ ಯೋಜನೆ (SANKALP Project)
==============
ಪ್ರಮುಖ ಸುದ್ದಿ
========
ಜೀವನಾಧಾರಕ್ಕೆ ಬೆಂಬಲ ನೀಡುವ ಮಹತ್ವಾಕಾಂಕ್ಷಿ “ಸ್ಕಿಲ್ ಅಕ್ವಿಸಿಷನ್ ಅಂಡ್ ನಾಲೆಡ್ಜ್ ಅವೇರ್‍ನೆಸ್ ಫಾರ್ ಲೈವ್ಲಿಹುಡ್ ಪ್ರೊಮೋಷನ್” (ಸಂಕಲ್ಪ್) ಯೋಜನೆಗಾಗಿ ಕೇಂದ್ರ ಸರ್ಕಾರ ವಿಶ್ವಬ್ಯಾಂಕ್‍ನಿಂದ 250 ದಶಲಕ್ಷ ಡಾಲರ್ ಸಾಲ ಪಡೆಯಲು ಒಪ್ಪಂದ ಮಾಡಿಕೊಂಡಿದೆ.
===========
ವಿಶ್ವಬ್ಯಾಂಕಿನ ನೆರವು ನೀಡುವ ಶಾಖೆಯಾದ ಇಂಟರ್‍ನ್ಯಾಷನಲ್ ಬ್ಯಾಂಕ್ ಫಾರ್ ರಿ ಕನ್‍ಸ್ಟ್ರಕ್ಷನ್ ಅಂಡ್ ಡೆವಲಪ್‍ಮೆಮಟ್ (ಐಬಿಆರ್‍ಡಿ) ಈ ಸಾಲವನ್ನು ನೀಡಲಿದ್ದು, ಈ ಯೋಜನೆ ಪೂರ್ಣಗೊಳ್ಳುವ ದಿನಾಂಕ 2023ರ ಮಾರ್ಚ್ 31 ಆಗಿರುತ್ತದೆ.
=============
ಸಂಕಲ್ಪ್ ಯೋಜನೆ ಬಗ್ಗೆ
==============
ಇದರ ಯೋಜನೆಯ ಉದ್ದೇಶವೇನು  ? (Objective)
==============
ಕೌಶಲ ಅಭಿವೃದ್ಧಿಗೆ ಸಾಂಸ್ಥಿಕ ವ್ಯವಸ್ಥೆಯನ್ನು ವಿಸ್ತøತಗೊಳಿಸುವುದು ಮತ್ತು ಗುಣಮಟ್ಟ ಮತ್ತು ಮಾರುಕಟ್ಟೆಗೆ ಪ್ರಸ್ತುತ ಎನಿಸುವ ರೀತಿಯಲ್ಲಿ ಕೆಲಸಗಾರರ ಲಭ್ಯತೆಯನ್ನು ಹೆಚ್ಚಿಸುವುದು ಇದರ ಮುಖ್ಯ ಉದ್ದೇಶ.
ಇದರಲ್ಲಿ ಪ್ರಮುಖವಾಗಿ ಸಾಂಸ್ಥಿಕ ಸುಧಾರಣೆಗಳು ಮತ್ತು ಗುಣಮಟ್ಟ ಅಭಿವೃದ್ಧಿ & ಮಾರುಕಟ್ಟೆ ಪ್ರಸ್ತುತತೆಯನ್ನು ಕೌಶಲ ಅಭಿವೃದ್ಧಿ ತರಬೇತಿ ಯೋಜನೆಗಳಲ್ಲಿ ಧೀರ್ಘಾವಧಿ ಹಾಗೂ ಅಲ್ಪಾವಧಿ ವೃತ್ತಿಪರ ಶಿಕ್ಷಣ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ತರುವುದು ಇದರ ಉದೇಶ.
ಸಮರ್ಪಕ ಶಿಕ್ಷಣ, ಕೌಶಲ ಮತ್ತು ಉದ್ಯೋಗವನ್ನು ಒದಗಿಸುವ ಮೂಲಕ ಯುವಕರಿಗೆ ಶಕ್ತಿ ತುಂಬುವುದು ಯೋಜನೆಯ ಗುರಿಯಾಗಿದೆ. ಈ ಯೋಜನೆಯಡಿ ಯುವಕರಿಗೆ ಮಾರುಕಟ್ಟೆಗೆ ಪ್ರಸ್ತುತ ಎನಿಸುವ ತರಬೇತಿಯನ್ನು ನೀಡುವ ಮೂಲಕ ಅವರ ಉದ್ಯೋಗಾರ್ಹತೆ ಅಧಿಕವಾಗುವಂತೆ ಹಾಗೂ ಗರಿಷ್ಠ ಉದ್ಯೋಗ ಗಳಿಕೆ ಸಾಧ್ಯತೆಗೆ ಅವರನ್ನು ಸಜ್ಜುಗೊಳಿಸಲಾಗುವುದು.
===============
ಯೋಜನೆ ಪ್ರಮುಖ ಫಲಿತಾಂಶ ಕ್ಷೇತ್ರಗಳಾವುವು ? (The Key result areas)
===============
ಸಾಂಸ್ಥಿಕ ಸಬಲೀಕರಣವನ್ನು ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ಮಾಡಲಾಗುವುದು. ಇದಕ್ಕಾಗಿ ಕೌಶಲ ಅಭಿವೃದ್ಧಿ ಯೋಜನೆಗಳಿಲ್ಲಿ ಸೂಕ್ತ ಯೋಜನೆ, ಸುಧಾರಿತ ಗುಣಮಟ್ಟ ಮತ್ತು ಮಾರುಕಟ್ಟೆ ಪ್ರಸ್ತುತತೆಯನ್ನು ತರಲಾಗುವುದು. ಉತ್ತಮ ಗುಣಮಟ್ಟದ, ಮಾರುಕಟ್ಟೆಗೆ ಪ್ರಸ್ತುತ ಎನಿಸುವ ತರಬೇತಿಯನ್ನು ನೀಡಲಾಗುವುದು.
============
ಮಹಿಳಾ ಅಭ್ಯರ್ಥಿಗಳಿಗೆ ಹಾಗೂ ಇತರ ದುರ್ಬಲ ವರ್ಗದವರಿಗೆ ಕೂಡಾ ಕೌಶಲ ಅಭಿವೃದ್ಧಿಯನ್ನು ಲಭ್ಯವಾಗುವಂತೆ ಮಾಡುವುದು ಹಾಗೂ ಇದನ್ನು ಪೂರ್ಣಗೊಳಿಸಲು ಅನುಕೂಲಕರ ವಾತಾವರಣ ಸೃಷ್ಟಿಸುವುದು ಇದರ ಉದ್ದೇಶ. ಇವೆಲ್ಲದರ ಜತೆಗೆ ಖಾಸಗಿ-ಸರ್ಕಾರಿ ಸಹಭಾಗಿತ್ವ ಯೋಜನೆಯ ಮೂಲಕ ಕೌಶಲ ಅಭಿವೃದ್ಧಿಯನ್ನು ವಿಸ್ತರಿಸಲಾಗುವುದು.
==========
ಇದರ ಮಹತ್ವವೇನು ? (What it does ? )
===============
ಈ ಯೋಜನೆಯು ರಾಷ್ಟ್ರೀಯ ಕೌಶಲ ಅಭಿವೃದ್ಧಿ ಮಿಷನ್- 2015ಕ್ಕೆ ಅಗತ್ಯ ಉತ್ತೇಜನ ನೀಡುವಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಇದರ ಜತೆಗೆ ಇತರ ಹಲವು ಉಪ ಮಿಷನ್‍ಗಳಿಗೆ ಕೂಡಾ ಇದು ನೆರವಾಗಲಿದೆ.
ಈ ಯೋಜನೆಯನ್ನು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಮೇಕ್ ಇನ್ ಇಂಡಿಯಾ, ಸ್ವಚ್ಛತಾ ಅಭಿಯಾನಗಳ ಜತೆಯೂ ಜೋಡಿಸಲಾಗಿದ್ದು, ಜಾಗತಿಕಮಟ್ಟದಲ್ಲಿ ಸ್ಪರ್ಧಾತ್ಮಕ ಕಾರ್ಯಪಡೆಯನ್ನು ದೇಶೀಯ ಹಾಗೂ ಸಾಗರೋತ್ತರ ಅಗತ್ಯತೆಗಳಿಗೆ ಅನುಗುಣವಾಗಿ ಅಭಿವೃದ್ಧಿಪಡಿಸುವಲ್ಲಿ ಈ ಪ್ರಯತ್ನ ಅತ್ಯಂತ ಮಹತ್ವದ್ದೆನಿಸಲಿದೆ.
=================
ಎಲ್ಲಕ್ಕಿಂತ ಹಹೆಚ್ಚಾಗಿ, ಇದು ವಿವಿಧ ಕೇಂದ್ರೀಯ, ರಾಜ್ಯ ಮತ್ತು ಖಾಸಗಿ ವಲಯದ ಸಂಸ್ಥೆಗಳ ಸಮನ್ವಯದಲ್ಲಿ ಕೌಶಲ ಅಭಿವೃದ್ಧಿ ತರಬೇತಿಯನ್ನು ಒದಗಿಸಲಿದೆ. ಇದು ಚಟುವಟಿಕೆಗಳು ಪುನರಾವರ್ತನೆಯಾಗುವುದನ್ನು ತಡೆಯುವ ಜತೆಗೆ, ವೃತ್ತಿಪರ ತರಬೇತಿಯಲ್ಲಿ ಏಕರೂಪತೆಯಲ್ಲಿ ತರುವ ಮೂಲಕ ಒಳ್ಳೆಯ ಫಲಿತಾಂಶವನ್ನು ನೀಡುವ ಗುರಿ ಹೊಂದಿದೆ.
==============
ರೈಲ್ವೆ ಸಚಿವಾಲಯವು ಪ್ರಾರಂಭಿಸಿರುವ ಮುಖ್ಯ ಉಪಕ್ರಮಗಳು (Initiatives)
=================
ಸ್ರೇಸ್ತ (SRESTHA) –
ಎದು ರೈಲ್ವೆಯಲ್ಲಿ ಭವಿಷ್ಯದ ತಂತ್ರಜ್ಞಾನದ ಅಗತ್ಯಗಳನ್ನು ಪೂರೈಸಲು ಹೊಸ ಆರ್ & ಡಿ ಸಂಸ್ಥೆ.
=====÷÷÷÷÷×
ಸುತ್ರ (SUTRA) –
ಸಾರಿಗೆ ಸಂಶೋಧನೆ ಮತ್ತು ವಿಶ್ಲೇಷಣೆಗಾಗಿ ವಿಶೇಷ ಘಟಕ. ಇದರಲ್ಲಿನ ತಂಡವು ವಿಶ್ವ ದರ್ಜೆಯ ಡಾಟಾ ಅನಾಲಿಟಿಕ್ಸ್, ಸಿಮ್ಯುಲೇಶನ್ ಸಾಫ್ಟ್ ವೇರ್ ಗಳು , ನೆಟ್ವರ್ಕ್ ಆಪ್ಟಿಮೈಸೇಶನ್ ವ್ಯವಸ್ಥೆಗಳಲ್ಲಿ ತೊಡಗಿಸಿಕೊಳ್ಳುತ್ತದೆ.
===============
ನಿವಾರಾನ್ (NIVARAN) –
ಎದು ಸೇವೆ ಸಲ್ಲಿಸುತ್ತಿರುವ ಮತ್ತು ಮಾಜಿ ರೈಲ್ವೆಯ ನೌಕರರ ಬಗೆಗಿನ ಅಸಮಾಧಾನವನ್ನು ಬಗೆಹರಿಸಲು ಹಾಗು ಪರಿಹಾರ ದೂರುಗಳ ಪೋರ್ಟಲ್ ಮತ್ತು  ರೈಲ್ವೆ ಇಲಾಖೆಯ  ಮೊದಲ ಐಟಿ ಅಪ್ಲಿಕೇಶನ್.
===============
ಕಿಸಾನ್ ಉದಯ್ ಯೋಜನೆ
==============
ಉತ್ತರಪ್ರದೇಶ ಸರ್ಕಾರವು ಇದರ ಜತೆಗೆ ಕಿಸಾನ್ ಉದಯ್ ಎಂಬ ವಿಶಿಷ್ಟ ಯೋಜನೆಗೆ ಕೂಡಾ ಚಾಲನೆ ನೀಡಿದೆ. ಇದರ ಅನ್ವಯ ಹಾಲಿ 5 ಅಶ್ವಶಕ್ತಿಯ ಮೋಟರ್ ವಿದ್ಯುತ್ ಸಂಪರ್ಕ ಹೊಂದಿರುವ ರೈತರಿಗೆ 7,5 ಅಶ್ವಶಕ್ತಿಯ ಸಬ್‍ಮರ್ಸಿಬಲ್ ಪಂಪ್‍ಗಳನ್ನು ಉಚಿತವಾಗಿ ಬದಲಿಸಿಕೊಡಲಾಗುವುದು.
ಈ ಯೋಜನೆಯಡಿ 10 ಲಕ್ಷ ರೈತರಿಗೆ 2022ರೊಳಗೆ ಸೌಲಭ್ಯ ಕಲ್ಪಿಸಲಾಗುವುದು. ಇದು ಶೇಕಡ 35ರಷ್ಟು ವಿದ್ಯುತ್ ಉಳಿತಾಯಕ್ಕೆ ಕಾರಣವಾಗಲಿದೆ.
=============

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ