*##ಮಾಹಿತಿ ವೇದಿಕೆ##*
🙏🙏🙏🙏🙏🙏🙏
*ರಾಷ್ಟ್ರಗೀತೆ ಎದ್ದು ನಿಲ್ಲಬೇಕೆ ಅಥವಾ ಬೇಡವೇ ಎಂಬ ಅಸಂಬದ್ಧ ಚರ್ಚೆಯೊಂದು ನಮ್ಮ ದೇಶದಲ್ಲಿ ನಡೆಯುತ್ತಿದೆ. ಹೀಗಿರುವಾಗ ಪಶ್ಚಿಮಬಂಗಾಳದ "ನಾಡಿಯಾ" ಜಿಲ್ಲೆಯ ಗ್ರಾಮವೊಂದರ ಜನರು ತಮ್ಮೆಲ್ಲಾ ಕಾರ್ಯಗಳನ್ನು ಬದಿಗೊತ್ತಿ ದಿನದ 52 ಸೆಕೆಂಡುಗಳ ಕಾಲ ರಾಷ್ಟ್ರಗೀತೆಗಾಗಿ ಎದ್ದು ನಿಲ್ಲುತ್ತಾರೆ. ಅಭಯ್ ನಗರ ಎಂಬ ಪ್ರಾಥಮಿಕ ಶಾಲೆಯಲ್ಲಿ ಹಾಡಲಾಗುವ ರಾಷ್ಟ್ರಗೀತೆ ಲೌಡ್ ಸ್ಪೀಕರ್ ಮೂಲಕ ಇಡೀ ಗ್ರಾಮಕ್ಕೆ ಪಸರಿಸುತ್ತದೆ.ಈ ವೇಳೆ ಅಲ್ಲಿನ ಜನ ಎದ್ದು ನಿಂತು ಗೌರವ ಸೂಚಿಸುತ್ತಾರೆ. ಇದು ಹಲವು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಪದ್ಧತಿ. ಬೆಳಿಗ್ಗೆ10:50 ಸುಮಾರಿಗೆ ರಾಷ್ಟ್ರಗೀತೆಯನ್ನು ಹಾಡಲಾಗುತ್ತದೆ. ಮಕ್ಕಳು, ಯುವಕರು, ವಯಸ್ಕರು ಹೀಗೆ ಎಲ್ಲಾರೂ ತಾವು ಮಾಡುವ ಕೆಲಸವನ್ನು ಬಿಟ್ಟು 52 ಸೆಕೆಂಡುಗಳ ಕಾಲ ಎದ್ದು ನಿಲ್ಲುತ್ತಾರೆ.ಈ ಮೂಲಕ ಇಡೀ ದೇಶಕ್ಕೆ ಮಾದರಿ ಎನ್ನಿಸಿದ್ದಾರೆ.*
===============
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ