ಸೋಮವಾರ, ಮಾರ್ಚ್ 26, 2018

Kas,ias important points

=============
ಭಾರತದ ಇತಿಹಾಸದಲ್ಲಿ ಪ್ರಮಖ ಸ್ಥಾನ ಪಡೆದ ಮೊದಲ ಬಜೆಟ್ 1957ರದ್ದು. ಟಿಟಿಕೆ ಎಂದು ಹೆಸರಾಗಿದ್ದ ಟಿ.ಟಿ. ಕೃಷ್ಣಮಾಚಾರಿ ಅವರು ಮಂಡಿಸಿದ ಈ ಬಜೆಟ್‌ನ ಹಿಂದೆ ಮನಮೋಹನ್ ಸಿಂಗ್ ಅವರ ಗುರು ನಿಕೋಲಸ್ ಕಾಲ್ಡರ್ ಅವರ ನೆರಳಿತ್ತು.
============
ಸಾಮಾನ್ಯವಾಗಿ ಬಜೆಟ್‌ಗಳನ್ನು ಅಧಿಕಾರಿಗಳು ಬರೆಯುತ್ತಾರೆ. ಅದನ್ನು ತಿದ್ದಿತೀಡುವ ಕೆಲಸವನ್ನಷ್ಟೇ ಹಣಕಾಸು ಸಚಿವರು ಮಾಡುತ್ತಾರೆ.
=============
ಭಾರತದಲ್ಲಿನ ಒಟ್ಟು ಸಾಕ್ಷರತಾ ಪ್ರಮಾಣ ಶೇ 74.04. ಆದರೆ ಬುಡಕಟ್ಟು ಜನರ ಸಾಕ್ಷರತೆ ಶೇ 59.2ರಷ್ಟಿದೆ. ಬುಡಕಟ್ಟು ಪುರುಷರು - ಮಹಿಳೆಯರ ಸಾಕ್ಷರತೆ ಪ್ರಮಾಣದ ನಡುವೆ ಅಜಗಜಾಂತರ ಇರುವುದನ್ನು ವರದಿಗಳು ಸ್ಪಷ್ಟಪಡಿಸಿವೆ.
=============
2011ರ ಜನಗಣತಿ ಪ್ರಕಾರ ಕರ್ನಾಟಕದಲ್ಲಿ ವಿವಿಧ ರೀತಿಯ ಸುಮಾರು 43 ಲಕ್ಷ ಬುಡಕಟ್ಟು ಜನರಿದ್ದಾರೆ. ಸೋಲಿಗ, ಜೇನುಕುರುಬ, ಕಾಡುಕುರುಬ, ಬೆಟ್ಟಕುರುಬ, ಮೇದ, ಇರುಳಿಗ, ಗೊಂಡ, ನಾಯಕ, ಮಲೆಕುಡಿಯ  ಮುಂತಾದ  50  ಪ್ರಮುಖ ಆದಿವಾಸಿ ಸಮುದಾಯಗಳನ್ನು ನಮ್ಮ ರಾಜ್ಯದಲ್ಲಿ ಗುರುತಿಸಲಾಗಿದ್ದು ಇವರು ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ 6.55ರಷ್ಟಿದ್ದಾರೆ.
===========
•• ಮಾನವ ಅಭಿವೃದ್ಧಿ ಸೂಚ್ಯಂಕವನ್ನು ಹತ್ತು ಪ್ರಮುಖ ಅಂಶಗಳಿಂದ ಅಳೆಯಲಾಗುತ್ತದೆ. ಸಾಕ್ಷರತೆ, ಜೀವಿತಾವಧಿ, ಶಿಶುಮರಣ ಪ್ರಮಾಣ, ಲಿಂಗಾನುಪಾತ, ಮಕ್ಕಳ ಆರೋಗ್ಯ, ರೋಗನಿರೋಧಕ ಲಸಿಕೆ ನೀಡಿಕೆ, ಬಡತನ ಪ್ರಮಾಣ, ಪ್ರೌಢಶಿಕ್ಷಣದಲ್ಲಿ ಮಕ್ಕಳ ನೋಂದಣಿ, ಸಾಮಾಜಿಕ ವಲಯದಲ್ಲಿ ಸರ್ಕಾರ ಮಾಡಿದ ವೆಚ್ಚ ಮತ್ತು ಸಾಮಾಜಿಕ ವಲಯದಲ್ಲಿ ಸರ್ಕಾರ ಮಾಡಿದ ತಲಾವೆಚ್ಚ ಇವು ಪ್ರಮುಖ ಅಂಶಗಳಾಗಿರುತ್ತದೆ.
================
ಮೂಲಧನ ಜಮಾ (ಕ್ಯಾಪಿಟಲ್ ರಿಸಿಪ್ಟ್​):
==============
— ಇದು ಸರ್ಕಾರವು ಸಾರ್ವಜನಿಕರಿಂದ ತೆಗೆದುಕೊಂಡ ಸಾಲ (ಮಾರುಕಟ್ಟೆ ಸಾಲ); ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ಹಾಗೂ ಇತರ ಸಂಸ್ಥೆಗಳಿಗೆ ಟ್ರೆಷರಿ ಬಿಲ್(ಖಜಾನೆ ಬಿಲ್) ಮಾರುವ ಮೂಲಕ ಪಡೆದ ಹಣ; ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದ ಸರ್ಕಾರಗಳು ಹಾಗೂ ಇತರರಿಗೆ ನೀಡಿದ ಸಾಲ ಮರುಪಾವತಿ ಇತ್ಯಾದಿಯನ್ನು ಒಳಗೊಂಡಿರುತ್ತದೆ.
===========
•• ಸಂಚಿತ ನಿಧಿ (ಕನ್ಸಾಲಿಡೇಟ್ ಫಂಡ್):

— ಸರ್ಕಾರದ ಎಲ್ಲ ವರಮಾನಗಳು, ಪಡೆದ ಸಾಲಗಳು ಹಾಗೂ ನೀಡಿದ ಸಾಲಗಳ ಮರುಪಾವತಿಯನ್ನು ಇದು ಒಳಗೊಂಡಿದೆ.
ಸರ್ಕಾರದ ಎಲ್ಲ ವೆಚ್ಚಗಳನ್ನು ಸಂಚಿತ ನಿಧಿಯಿಂದಲೇ ಭರಿಸಲಾಗುತ್ತದೆ.
==============
•• ಆದಾಯ ತೆರಿಗೆ:
ಇದು ವ್ಯಕ್ತಿಯ ಆದಾಯದ ಮೇಲೆ ವಿಧಿಸುವ ತೆರಿಗೆ. ಇದು ವ್ಯಕ್ತಿಯ ವೇತನ, ಹೂಡಿಕೆ, ಬಡ್ಡಿದರ ಇತ್ಯಾದಿ ಆದಾಯ ಮೂಲಗಳ ಆಧಾರದಲ್ಲಿ ವಿಧಿಸಲಾಗುತ್ತದೆ. 
=============
•• ಪರೋಕ್ಷ ತೆರಿಗೆಗಳು:
ಇದು ಗ್ರಾಹಕರು ಸರಕುಗಳು ಹಾಗೂ ಸೇವೆಗಳನ್ನು ಖರೀದಿಸುವಾಗ ಪಾವತಿಸುವ ತೆರಿಗೆಗಳು. ಮಾರಾಟ ತೆರಿಗೆ, ಅಬಕಾರಿ ಹಾಗೂ ಸೀಮಾ ಸುಂಕಗಳು ಇದರಲ್ಲಿ ಸೇರುತ್ತವೆ. 
============
ಹಣದುಬ್ಬರ:
ಇದು ಒಂದು
••••••••
ಅರ್ಥವ್ಯವಸ್ಥೆಯಲ್ಲಿನ ವಸ್ತುಗಳ ಬೆಲೆಯಲ್ಲಿನ ಏರಿಕೆಯನ್ನು ಸೂಚಿಸುತ್ತದೆ. ಬೆಲೆಗಳ ಮಟ್ಟದಲ್ಲಿನ ಬದಲಾವಣೆಯ ಶೇಕಡಾವಾರು ದರವೇ ಹಣದುಬ್ಬರ.
=============
•• ದೇಶದ ಪ್ರಮುಖ ನಾಲ್ಕು ಮಹಾನಗರಗಳಲ್ಲಿ 30 ಚ.ಮೀ. ಹಾಗೂ ಇತರ ಪಟ್ಟಣಗಳಲ್ಲಿ 60 ಚ.ಮೀ. ವಿಸ್ತೀರ್ಣ ಹೊಂದಿರುವ ವಸತಿ ಸಮುಚ್ಚಯ (ಅಪಾರ್ಟ್​ವೆುಂಟ್​ಗಳು, ಫ್ಲ್ಯಾಟ್​ಗಳು) ನಿರ್ಮಾಣ ಯೋಜನೆಯ ಲಾಭದ ಮೇಲೆ ಶೇ.100 ತೆರಿಗೆ ರಿಯಾಯಿತಿ ನೀಡಲಾಗಿದೆ.
==============
- 2016 ಜೂನ್ ಹಾಗೂ 2019 ಮಾರ್ಚ್ ನಡುವೆ ನೋಂದಣಿಯಾಗಿರುವ ಯೋಜನೆಗಳಿಗೆ ಈ ಸೌಲಭ್ಯ ಅನ್ವಯವಾಗಲಿದೆ. ಕಾಮಗಾರಿ ಆರಂಭಗೊಂಡ ಮೂರು ವರ್ಷಗಳಲ್ಲಿ ವಸತಿ ಯೋಜನೆ ಪೂರ್ಣಗೊಳ್ಳಬೇಕು ಎಂಬ ಷರತ್ತು ವಿಧಿಸಲಾಗಿದೆ.
===========

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ