ಮಂಗಳವಾರ, ಮಾರ್ಚ್ 27, 2018

ಬ್ರಾಡ್‍ಬ್ಯಾಂಡ್ ಇಂಟರ್ನೆಟ್‌ ಸ್ಪೀಡ್: 10 ಸ್ಥಾನ ಏರಿಕೆ ಕಂಡ ಭಾರತ

===============
   ನವದೆಹಲಿ: ಭಾರತದ ಇಂಟರ್ನೆಟ್‌ ಸ್ಪೀಡ್ ಹೆಚ್ಚಾಗಿದೆ. ಸ್ಥಿರ ಬ್ರಾಡ್‍ಬ್ಯಾಂಡ್ ಸ್ಪೀಡ್‍ನಲ್ಲಿ ವಿಶ್ವದಲ್ಲೇ ಭಾರತಕ್ಕೆ 67ನೇ ಸ್ಥಾನ ಸಿಕ್ಕಿದ್ದು, ಮತ್ತು ಮೊಬೈಲ್ ಇಂಟರ್ನೆಟ್‌ ಸ್ಪೀಡ್ ನಲ್ಲಿ 109ನೇ ಸ್ಥಾನ ಸಿಕ್ಕಿದೆ.
==================
ಇಂಟರ್ನೆಟ್‌ ಸ್ಪೀಡ್ ಟೆಸ್ಟಿಂಗ್ ಮತ್ತು ಅನಾಲಿಸಿಸ್ ಕಂಪೆನಿ ಓಕ್ಲಾ ವಿಶ್ವದ ವಿವಿಧ ದೇಶಗಳ ಇಂಟರ್ನೆಟ್‌ ಸ್ಪೀಡ್ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ವರದಿಯ ಪ್ರಕಾರ ಭಾರತದ ಸ್ಥಿರ ಬ್ರಾಡ್‍ಬ್ಯಾಂಡ್ ಸ್ಪೀಡ್ 2017ರ ನವೆಂಬರ್ ನಲ್ಲಿ 18.82 ಮೆಗಾ ಬೈಟ್ಸ್ ಪರ್ ಸೆಕೆಂಡ್(ಎಂಬಿಪಿಎಸ್) ಇದ್ದರೆ, 2018ರ ಫೆಬ್ರವರಿಯಲ್ಲಿ 20.72 ಎಂಬಿಪಿಎಸ್‍ಗೆ ಏರಿಕೆಯಾಗಿದೆ ಎಂದು ಹೇಳಿದೆ.
===============
ಕಳೆದ ವರ್ಷ ಭಾರತದ ಫಿಕ್ಸ್ಡ್ ಬ್ರಾಡ್‍ಬ್ಯಾಂಡ್ ಡೌನ್‍ಲೋಡ್ ಸ್ಪೀಡ್ ರ‍್ಯಾಂಕ್ ಪಟ್ಟಿಯಲ್ಲಿ 76ನೇ ಸ್ಥಾನದಲ್ಲಿದ್ದರೆ ಈ ಬಾರಿ 67ನೇ ಸ್ಥಾನಕ್ಕೆ ಏರಿಕೆಯಾಗಿದೆ. ಆದರೆ ಮೊಬೈಲ್ ಇಂಟರ್ನೆಟ್‌ ಡೌನ್‍ಲೋಡ್ ಸ್ಪೀಡ್ ಮಾತ್ರ ಸರಾಸರಿ 8.80 ಎಂಬಿಪಿಎಸ್ ನಿಂದ 9.01 ಎಂಬಿಪಿಎಸ್ ಗೆ ಏರಿಕೆಯಾಗಿದೆ.
===============
ಅತಿವೇಗವಾದ ಮೊಬೈಲ್ ಇಂಟರ್ನೆಟ್‌ ಪಟ್ಟಿಯಲ್ಲಿ ನಾರ್ವೆಗೆ ಮೊದಲ ಸ್ಥಾನ ಸಿಕ್ಕಿದ್ದು, ಅಲ್ಲಿ 62.07 ಎಂಬಿಪಿಎಸ್ ವೇಗದ ಬ್ರಾಡ್‍ಬ್ಯಾಂಡ್ ಸಂಪರ್ಕ ಇದೆ. 161.53 ಎಂಬಿಪಿಎಸ್ ಸರಾಸರಿ ವೇಗವನ್ನು ಹೊಂದುವ ಮೂಲಕ ಬ್ರಾಡ್‍ಬ್ಯಾಂಡ್ ಇಂಟರ್ನೆಟ್‌ ನಲ್ಲಿ ಸಿಂಗಾಪುರಕ್ಕೆ ಮೊದಲ ಸ್ಥಾನ ಸಿಕ್ಕಿದೆ.
=================
ಯಾವ ದೇಶದಲ್ಲಿ ಇಂಟರ್ನೆಟ್‌ ಸ್ಪೀಡ್ ಎಷ್ಟಿದೆ ಎನ್ನುವುದನ್ನು ‘ಸ್ಪೀಡ್ ಟೆಸ್ಟ್ ಗ್ಲೋಬಲ್ ಇಂಡೆಕ್ಸ್ ಪಟ್ಟಿ’ಯನ್ನು ಓಕ್ಲಾ ಪ್ರತಿ ತಿಂಗಳು ಬಿಡುಗಡೆಗೊಳಿಸುತ್ತಿರುತ್ತದೆ. ಈ ಮಾಹಿತಿಯನ್ನು ಕಲೆಹಾಕಲು ವಿಶ್ವದಲ್ಲಿ 7,021 ಸರ್ವರ್ ಗಳನ್ನು ಹೊಂದಿದ್ದು, ಇದರಲ್ಲಿ 439 ಅತಿವೇಗವಾದ ಸರ್ವರ್ ಗಳು ಭಾರತದಲ್ಲಿದೆ.
=============

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ