ಶನಿವಾರ, ಮಾರ್ಚ್ 24, 2018

ಕೇವಲ 20 ಎಸೆತಗಳಲ್ಲಿ ಶತಕ ಸಿಡಿಸಿ ದಾಖಲೆ ಬರೆದ ವೃದ್ಧಿಮಾನ್‌ ಸಾಹಾ

================
ಕೋಲ್ಕತಾ: ಭಾರತೀಯ ಕ್ರಿಕೆಟಿಗ ವೃದ್ಧಿಮಾನ್ ಸಾಹಾ ಜೆ.ಸಿ.ಮುಖರ್ಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ 20 ಎಸೆತಗಳಿಗೆ 102 ರನ್‌ ಸಿಡಿಸಿ ಹೊಸ ದಾಖಲೆ ಬರೆದಿದ್ದಾರೆ.
===========
ಕೋಲ್ಕತಾದ ಕಾಳಿಘಾಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೋಹನ್ ಬಗಾನ್ ಮತ್ತು ಬೆಂಗಾಲ್ ನಾಗ್ಪುರ ರೈಲ್ವೇಸ್ ನಡುವೆ ನಡೆದ ಟಿ20 ಪಂದ್ಯದಲ್ಲಿ ಮೋಹನ್ ಬಗಾನ್ ತಂಡದ ಪರ ಕಣಕ್ಕೆ ಇಳಿದಿದ್ದ ವೃದ್ಧಿಮಾನ್, ಕೇವಲ 20 ಬಾಲ್‌ಗಳಿಗೆ ಶತಕ ಸಿಡಿಸಿದ್ದಾರೆ. ಅವರ ಈ ಇನ್ನಿಂಗ್ಸ್‌ನಲ್ಲಿ 14 ಸಿಕ್ಸರ್​ ಸೇರಿದಂತೆ 4 ಬೌಂಡರಿಗಳು ಸೇರಿದ್ದವು.
===========
ಬಿಎನ್​​​ಆರ್​ ರಿಕ್ರಿಯೇಷನ್​​ ಕ್ಲಬ್​ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಮೋಹನ್​ ಬಗಾನ್​ ತಂಡದ ಜಯ ದಾಖಲಿಸಿತು.
========
ಬಲಗೈ ಬ್ಯಾಟ್ಸ್‌ಮನ್‌ ಸಾಹಾ, ತಾವು ಎದುರಿಸಿದ 12ನೇ ಎಸೆತದಲ್ಲೇ ಅರ್ಧಶತಕ ಸಿಡಿಸಿದರು. ನಂತರದ 8 ಎಸೆತಗಳಲ್ಲಿ ಮತ್ತೊಂದು ಅರ್ಧಶತಕ ಸಿಡಿಸಿದರು. ಸಿಕ್ಸರ್ ಸಿಡಿಸುವ ಮೂಲಕವೇ ಶತಕ ಗಳಿಸಿ ತಮ್ಮ ಇನ್ನಿಂಗ್ಸ್ ಮತ್ತೊಂದು ದಾಖಲೆಗೆ ಪಾತ್ರರಾಗಿದ್ದಾರೆ.
===========
ಸಾಹಾ ಮಾತನಾಡಿ, ಮೊದಲ ಬಾಲ್‌ ಎಸೆದಾಗಲೇ ಆ ಬಾಲ್‌ನ್ನು ಅನುಭವಿಸಿ ಆಡಲು ಮುಂದಾಗುತ್ತೇನೆ. ಅದರಂತೆ ಎಲ್ಲ ಎಸೆತಗಳನ್ನು ಎದುರಿಸಿದೆ. ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಬ್ಯಾಟಿಂಗ್‌ ಮಾಡಲು ಇಷ್ಟಪಡುವ ಸಾಹಾ, ಇಂದಿನ ನನ್ನ ಆಟ ದಾಖಲೆಯಾಗಿದೆಯೋ ಅಥವಾ ಇಲ್ಲವೋ ತಿಳಿಯದು. ಆದರೆ ನಾನು ಐಪಿಎಲ್‌ ನಲ್ಲಿ ಇದಕ್ಕಿಂತ ವಿಭಿನ್ನವಾಗಿ ಆಡಲು ಪ್ರಯತ್ನಿಸುತ್ತೇನೆ ಎಂದು ಹೇಳಿದ್ದಾರೆ.
===========
ಟಿ20 ಮಾದರಿಯ ಕ್ರಿಕೆಟ್ ನಲ್ಲಿ ಐಪಿಎಲ್ ಟೂರ್ನಿಯಲ್ಲಿ ಆರ್ ಸಿಬಿ ಪರ ಕ್ರಿಸ್ ಗೇಯ್ಲ್ 30 ಎಸೆತಗಳಲ್ಲಿ ಶತಕ ಸಿಡಿಸಿ ದಾಖಲೆ ಮಾಡಿದ್ದರು.
========

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ