*##ಮಾಹಿತಿ ವೇದಿಕೆ##*
##########
*ಮಂಗಳೂರು, ಮಾ.7: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ 2016 ಮತ್ತು 17ನೇ ಸಾಲಿನ ಗೌರವ ಪ್ರಶಸ್ತಿ ಪ್ರಕಟವಾಗಿದೆ.*
###########
*ಇಂದಿಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅಕಾಡಮಿಯ ಅಧ್ಯಕ್ಷ ಕರಂಬಾರ್ ಮುಹಮ್ಮದ್, 2016ನೇ ಸಾಲಿನ ಪ್ರಶಸ್ತಿಗೆ ಫಕೀರ್ ಮುಹಮ್ಮದ್ ಕಟ್ಪಾಡಿ(ಸಾಹಿತ್ಯ-ಸಂಶೋಧನೆ), ಅಬೂಬಕರ್ ಮಣ್ಣಗುಂಡಿ(ಜಾನಪದ) ಹಾಗೂ ಅಬೂಬಕರ್ ಬಡ್ಡೂರ್(ಕಲೆ) ಆಯ್ಕೆಯಾಗಿದ್ದಾರೆ ಎಂದರು.*
##############
*2017ನೆ ಸಾಲಿನ ಪ್ರಶಸ್ತಿಗೆ ಉಮರ್ ಯು.ಎಚ್.(ಸಾಹಿತ್ಯ ಸಂಶೋಧನೆ), ಅಝೀಝ್ ಬೈಕಂಪಾಡಿ(ಕಲೆ) ಹಾಗೂ ಬಿ.ಎಂ.ಹಸೈನಾರ್(ಜಾನಪದ) ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ತಲಾ 50 ಸಾವಿರ ರೂ. ನಗದು, ಸ್ಮರಣಿಕೆ ಹಾಗೂ ಸನ್ಮಾನ ಪತ್ರವನ್ನು ಒಳಗೊಂಡಿರಲಿವೆ. ಪ್ರಶಸ್ತಿ ಪ್ರದಾನ ಸಮಾರಂಭವು ಮಾ.13ರಂದು ಬೆಳಗ್ಗೆ 10 ಗಂಟೆಗೆ ಮೂಡಿಗೆರೆಯ ರೈತಭವನದಲ್ಲಿ ನಡೆಯಲಿದೆ ಎಂದು ಕರಂಬಾರ್ ಮುಹಮ್ಮದ್ ತಿಳಿಸಿದರು.*
#########
*ಸುದ್ದಿಗೋಷ್ಠಿಯಲ್ಲಿ ಅಕಾಡಮಿಯ ರಿಜಿಸ್ಟ್ರಾರ್ ಚಂದ್ರಹಾಸ ರೈ, ಸದಸ್ಯರಾದ ಬಶೀರ್ ಬೈಕಂಪಾಡಿ, ಹುಸೈನ್ ಕಾಟಿಪಳ್ಳ, ಆರಿಫ್ ಪಡುಬಿದ್ರೆ, ಅನ್ಸಾರ್ ಬೆಳ್ಳಾರೆ, ಹಸನಬ್ಬ ಮೂಡುಬಿದಿರೆ, ಮುಹಮ್ಮದ್ ತನ್ಸೀಫ್ ಕಿಲ್ಲೂರು ಉಪಸ್ಥಿತರಿದ್ದರು.*
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ