ಸೋಮವಾರ, ಮಾರ್ಚ್ 26, 2018

ವಿಶ್ವ ಕ್ಷಯರೋಗ ದಿನ 2018

=============
THEME  2018 – “Wanted: Leaders for a TB-free world”. (ವಾಂಟೆಡ್‌: ಲೀಡರ್ಸ್‌ ಫಾರ್‌ ಎ ಟಿಬಿ ಫ್ರೀ ವರ್ಲ್ಡ್‌.) 
=============
    ಮಾರಕ ಕಾಯಿಲೆಗಳಲ್ಲೊಂದಾದ ಕ್ಷಯ ರೋಗದ ಬಗ್ಗೆ ಜನತೆಯಲ್ಲಿ ಅರಿವು ಮೂಡಿಸುವ ಸಲುವಾಗಿ ಪ್ರತಿವರ್ಷವೂ ಮಾರ್ಚ್ 24ರಂದು ವಿಶ್ವಕ್ಷಯ ರೋಗ ನಿವಾರಣಾ ದಿನವನ್ನು ಆಚರಿಸಲಾಗುತ್ತಿದೆ. 1882ರ ಮಾರ್ಚ್‌ 24ರಂದು ಡಾ. ರಾಬರ್ಟ್‌ ಕೊಚ್‌ ಎಂಬುವವರು ಕ್ಷಯ ರೋಗಕ್ಕೆ ಟ್ಯೂಬರ್‌ ಕ್ಯೂಲೊಸಿಸ್‌ ಎಂಬ ರೋಗಾಣು ಕಾರಣ ಎಂದು ಕಂಡುಹಿಡಿದರು. ಹಾಗಾಗಿ ಈ ದಿನವನ್ನು ವಿಶ್ವ ಕ್ಷಯರೋಗ ದಿನವನ್ನಾಗಿ ಆಚರಿಸಲಾಗುತ್ತಿದೆ. 
================
       ಪೋಲಿಯೋ ಮುಕ್ತ ಭಾರತ ನಿರ್ಮಾಣದ ಮಾದರಿಯಲ್ಲೇ 2025ರ ವೇಳೆಗೆ ಕ್ಷಯರೋಗ(ಟಿಬಿ)ದಿಂದಲೂ ದೇಶವನ್ನು ಮುಕ್ತಗೊಳಿಸಲು ಸರ್ಕಾರ ಮುಂದಾಗಿದೆ. ಕಳೆದ ದಶಕದಲ್ಲಿ ಕ್ಷಯರೋಗ ನಿಯಂತ್ರಿಸುವಲ್ಲಿ ಗಣನೀಯ ಪ್ರಗತಿ ಸಾಧಿಸಿದರೂ, ವಿಶ್ವದ ಸಾಂಕ್ರಾಮಿಕ ರೋಗಗಳಲ್ಲಿ ಟಿಬಿ ಟಾಪ್‌ ಸ್ಥಾನಪಡೆದಿದೆ. ಕ್ಷಯರೋಗವು ಶ್ವಾಸಕೋಶಗಳಲ್ಲದೆ, ದೇಹದ ಇತರ ಎಲ್ಲಾ ಅಂಗಾಂಗಗಳಿಗೂ ವ್ಯಾಪಿಸುತ್ತದೆ. ಶ್ವಾಸಕೋಶದ ಕ್ಷಯವು 70-80ರಷ್ಟು ಕ್ಷಯ ರೋಗದ ಹರಡುವಿಕೆಯಲ್ಲಿ ಮುಖ್ಯಪಾತ್ರ ವಹಿಸುತ್ತದೆ. ಕ್ಷಯರೋಗಿ ಕೆಮ್ಮಿದ ಕಫದ ತುಂತುರನ್ನು ಇತರರು ಉಸಿರಾಡಿದಾಗ ಅಂತಹವರಿಗೂ ಕ್ಷಯ ಬರುತ್ತದೆ. ಮಕ್ಕಳಿಗೆ ಈ ಕಾಯಿಲೆ ಬೇಗ ಅಂಟುತ್ತದೆ. 2017ರಲ್ಲಿ ವರ್ಷ, 10.4 ಮಿಲಿಯನ್‌ ಜನರಿಗೆ ಟಿಬಿ ಸೋಂಕು ಉಂಟಾಗಿದೆಯೆಂದು WHO ವರದಿ ಮಾಡಿದೆ ಮತ್ತು 2016 ರಲ್ಲಿ 1.8 ಮಿಲಿಯನ್‌ ಟಿಬಿ ಸಾವುಗಳು ಸಂಭವಿಸಿವೆ. ವಲಸಿಗರು, ನಿರಾಶ್ರಿತರು, ಕೊಳಚೆ ಪ್ರದೇಶಗಳಲ್ಲಿ ವಾಸಿಸುವರಲ್ಲಿ ಈ ರೋಗ ಹೆಚ್ಚಾಗಿ ಕಂಡು ಬರುತ್ತದೆ. ಅನಕ್ಷರತೆ, ಅಜ್ಞಾನ, ಮೂಢನಂಬಿಕೆ, ಮೂಲಭೂತ ಸೌಕರ್ಯದ ಕೊರತೆಯಿಂದ ರೋಗಕ್ಕೆ ಪರಿಣಾಮಕಾರಿ ಚಿಕಿತ್ಸೆ ದೊರೆಯದೆ ಹಲವಾರು ಮಂದಿ ಸಾವನ್ನಪ್ಪುತ್ತಿದ್ದಾರೆ. 
==============
ಹೇಗೆ ಹರಡುತ್ತದೆ? 
============
      ಕ್ಷಯ ರೋಗ ಸಾಂಕ್ರಾಮಿಕವಾಗಿ ಹರಡುವ ಅಂಟುರೋಗವಾಗಿದ್ದು ರೋಗಾಣುಗಳು ಗಾಳಿಯಿಂದ ಹರಡುತ್ತದೆ. ಎಲ್ಲೆಂದರಲ್ಲಿ ಉಗುಳುವುದು. ಪರಿಸರ ಮಾಲಿನ್ಯ, ಔದ್ಯೋಗಿಕರಣ, ಬಡತನ, ಅನಕ್ಷರತೆ, ಜನದಟ್ಟಣೆ, ಕೊಳಗೇರಿ ಪ್ರದೇಶ, ಪ್ರಾಥಾಮಿಕ ಸೌಲಭ್ಯಗಳ ಕೊರತೆ, ರೊಗದ ಬಗೆಗಿನ ಮಾಹಿತಿಯ ಕೊರತೆ ಇತ್ಯಾದಿಗಳು ರೋಗವನ್ನು ಹರಡುವಂತೆ ಮಾಡುತ್ತದೆ. ಜೋರಾಗಿ ಕೆಮ್ಮುವುದು, ಸೀನುವುದು, ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು ಮುಂತಾದವುಗಳಿಂದ ರೋಗಾಣು ಗಾಳಿಯಲ್ಲಿ ಹರಡಿ ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತದೆ. 
=============
ರೋಗದ ಲಕ್ಷಣಗಳು 
============
     ನಿರಂತರವಾದ ಕೆಮ್ಮು ಮತ್ತು ಕಫ, ಮೂರು ನಾಲ್ಕು ವಾರಗಳಿಗೂ ಅಧಿಕವಾದ ನಿರಂತರ ಕೆಮ್ಮು, ಎದೆನೋವು, ಉಸಿರಾದಲ್ಲಿ ಏರುಪೇರು, ಕಫದೊಡನೆ ರಕ್ತ ಮಿಶ್ರಿತವಾಗುವುದು, ಸಣ್ಣ ಜ್ವರ, ಸಾಯಂಕಾಲದಲ್ಲಿ ಸಮಯದಲ್ಲಿ ಜ್ವರ ಮತ್ತು ಮೈ ಬೆವರುವುದು, ಅನಾಸಕ್ತಿ, ಹಸಿವಿಲ್ಲದಿರುವುದು, ರುಚಿ ಇಲ್ಲದಿರುವುದು, ವಾಂತಿ, ಸುಸ್ತು, ದೇಹದ ತೂಕ ಕಡಿಮೆಯಾಗುವುದು ಇತ್ಯಾದಿ. 
=================

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ