ಮಂಗಳವಾರ, ಮಾರ್ಚ್ 27, 2018

ಸಾಮಾನ್ಯ ಜ್ಞಾನ- 5

1.ಶಾಸ್ತ್ರೀಯ ಸಂಗೀತದ ಹಾಡುಗಾರಿಕೆಯಲ್ಲಿ ಅತಿಪುರಾತನ ಶೈಲಿ ಯಾವುದು?
2. ಆರ್.ಐ.ಟಿ.ಇ.ಎಸ್ (RITES)ನ ವಿಸ್ತೃತ ರೂಪವೇನು?
3. ಗಣಿತದ ಬಗ್ಗೆ ಮೊದಲು ಅಚ್ಚಾದ ಕೃತಿ ಯಾವುದು?
4. ತ್ರಿಪದಿಯ ಲಕ್ಷಣವನ್ನು ಮೊಟ್ಟ ಮೊದಲಿಗೆ ಹೇಳಿದವರು ಯಾರು?
5. ಕನ್ನಡದ ಪ್ರಥಮ ಮಹಿಳಾ ನಿರ್ಮಾಪಕಿ ಯಾರು?
6.  ಗೆಲಿಲಿಯೋನ ಮೊದಲ ವೈಜ್ಞಾನಿಕ ಸಂಶೋಧನೆ ಯಾವುದು?
7.  ಅಡಿಗೆ ಗ್ಯಾಸ್‍ನಲ್ಲಿರುವ ಅನಿಲ ಯಾವುದು?
8.  ಫಾಹಿಯಾನನು ಭಾರತಕ್ಕೆ ಯಾರ ಕಾಲದಲ್ಲಿ ಭೇಟಿ ನೀಡಿದನು?
9.  ರಿಕೆಟ್ಸ್ ಕಾಯಿಲೆ ಯಾವ ವಿಟಮಿನ್ ಕೊರತೆಯಿಂದ ಬರುತ್ತದೆ?
10.  ಹೌರಾ ಸೇತುವೆ ಯಾವ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ?
11. ಅಣು ರಿಯಾಕ್ಟರ್‍ನಲ್ಲಿ ಬಳಸುವ ಇಂಧನ ಯಾವುದು?
12. ಸಣ್ಣ ಕಥೆಗಳ ಜನಕ ಎಂದು ಖ್ಯಾತರಾಗಿದ್ದವರು ಯಾರು?
13. ಮಾನವ ದೇಹದ ಅತಿದೊಡ್ಡ ಜೀರ್ಣಕೋಶ ಯಾವುದು?
14. ಪ್ರಸಿದ್ಧ ಐಹೊಳೆ ಶಾಸನವನ್ನು ರಚಿಸಿದವರು ಯಾರು?
15. ಋಗ್ವೇದದ ಪುರುಷ ಸೂತ್ರವು ಯಾವುದನ್ನು ವಿವರಿಸುತ್ತದೆ?
16. ರಕ್ತ ಗೆಡ್ಡೆ ಕಟ್ಟದಂತೆ ತಡೆಯುವ ವಿಟಮಿನ್ ಯಾವುದು?
17. ಕಪ್ಪೆಯ ಹೃದಯದಲ್ಲಿ ಎಷ್ಟು ಭಾಗಗಳಿವೆ?
18. ಕೇಂದ್ರ ಸರ್ಕಾರಕ್ಕೆ ಯಾವುದರಿಂದ ಹೆಚ್ಚಿನ ತೆರಿಗೆ ಆದಾಯ ಬರುತ್ತದೆ?
19.ಥೈವಾನ್ ದೇಶದ ಮೊದಲ ಹೆಸರೇನು?
20  ವೇದಕಾಲದ ಸೋಮನಾಥ ದೇವಾಲಯ ಎಲ್ಲಿದೆ?
21.ಕರ್ನಾಟಕದ ಶಾಸನ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ?
22. ಗಾಲಾಪಾಗಲ್ ದ್ವೀಪದಲ್ಲಿ ಡಾರ್ವಿನ್ ಅವರನ್ನು  ಆಕರ್ಷಿಸಿದ ಪಕ್ಷಿ ಯಾವುದು?
23. ಹೈಸ್ಕೂಲ್‍ನಲ್ಲಿ ಕನ್ನಡ ಪ್ರಥಮ ಭಾಷೆಯಾಗಬೇಕೆಂದು ಗೋಕಾಕ ಚಳುವಳಿ ಆರಂಭವಾದ ವರ್ಷ ಯಾವುದು?
24.  ಪ್ರಪಂಚದ ಮೊದಲ ಮಹಿಳಾ ಪ್ರಧಾನಿ ಯಾರು?
25.ಭಾರತದಲ್ಲಿ ಮೊದಲ ಅಂಚೆ ಕಛೇರಿ ಪ್ರಾರಂಭವಾದ ವರ್ಷ ಯಾವುದು?
26.ಮಹಾವೀರರು ಜೈನ್ ಧರ್ಮದ ಎಷ್ಟನೇಯ ತೀರ್ಥಂಕರರು?
27 ವಿಮಾನದ ವೇಗವನ್ನು ಅಳೆಯುವ ಸಾಧನ ಯಾವುದು?
28.ಹಿಮಾಲಯದ ಯಾವ ದೇವಸ್ಥಾನದಲ್ಲಿ ಕೇರಳದ ನಂಬೂದರಿಗಳು ಅರ್ಚಕರಾಗಿದ್ದಾರೆ?
29.ಲಕ್ನೋದಲ್ಲಿ 1857ರ ಬಂಡಾಯದ ನೇತೃತ್ವವನ್ನು ವಹಿಸಿದ್ದವರು ಯಾರು?
==============
ಉತ್ತರಗಳು
1.    ದ್ರುಪದ ಶೈಲಿ
2.    ರೈಲ್ ಇಂಡಿಯಾ ಟೆಕ್ನಿಕಲ್ ಆಂಡ್ ಇಕನಾಮಿಕ್ ಸರ್ವೀಸ್
3.    ಟ್ರೇವಿಸೋ ಅರಿಥ್‍ಮೆಟಿಕ್
4.    ನಾಗವರ್ಮ
5.    ಎಮ್.ವಿ.ರಾಜಮ್ಮ
6.    ಪೆಂಡುಲಂ
7.    ಬ್ಯೂಟೇನ್
8.    ಗುಪ್ತರು
9.    ವಿಟಮಿನ್-ಡಿ
10.    ಹೂಗ್ಲಿ
11.    ಯುರೇನಿಯಂ
12.    ಮಾಸ್ತಿ ವೆಂಕಟೆಶ್ ಅಯ್ಯಂಗಾರ್
13.    ಲೀವರ್
14.    ರವಿಕೀರ್ತಿ
15.    ಚತುರ್ವರ್ಣ
16.    ವಿಟಮಿನ್-ಕೆ
17.    ಮೂರು
18.    ಅಬಕಾರಿ ಸುಂಕ
19.    ಫಾರ್ಮೋಸಾ
20.    ರಾಜಕೋಟ್ (ಗುಜರಾತ್)
21.    ಬಿ.ಎಲ್.ರೈಸ್
22.    ಪಿಂಚ್ ಪಕ್ಷ
23.    1982
24.    ಸಿರಿಮಾವೋ ಭಂಡಾರ್ ನಾಯಿಕ
25.    1796
26.    24ನೇ
27.    ಟಿಕೋ ಮೀಟರ್
28.    ಬದರೀನಾಥ
29.    ಬೇಗಂ ಹಜರತ್ ಮಹಲ್
=================

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ