*##ಮಾಹಿತಿ ವೇದಿಕೆ ##*
*ಭೂಮಿ ಹುಟ್ಟಿದ್ದು ಹೇಗೆ…?*
#################
*ಇತ್ತೀಚೆಗೆ ಭೂಮಿಯ ಸಾವಿನ ಸುದ್ದಿ ಪ್ರಪಂಚದಾದ್ಯಂತ ಹರಿದಾಡತೊಡಗಿದೆ. ಭೂಮಿಗೂ ಸಾವಿದೆಯಾ? ಙes! ಖಂಡಿತ ಇದೆ. ಎನ್ನುತಾರೆ ವಿಜ್ಞಾನಿಗಳು. ಅದರೆ ಪ್ರಕ್ಞರತಿ ತನ್ನ ರಹಸ್ಯವನ್ನು ಯಾರಿಗು ಯಾವ ವಿಜ್ಞಾನಿಗೂ ಬಿಟ್ಟುಕೊಟ್ಟಿಲ್ಲ. ಎಷ್ಟೋ ಧರ್ಮಗುರುಗಳು, ಧರ್ಮಗ್ರಂಥಗಳು ಭೂಮಿಯ ಅಂತ್ಯವನ್ನು ಸರಿ ಹೆಳುತ್ತಿವೆಯೆಂಬ ಚರ್ಚೆಗಳು ನಡೆಯುತ್ತಿವೆ. ಇನ್ನೂ ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ಭೂಮಿಯ ಅಂತ್ಯದ ನಿಖರವಆದ ದಿನವನ್ನು ಸಹ ಹೇಳುತ್ತಿದ್ದಾರೆ. ಇದು ಕೆಲ ಧರ್ಮ ಗ್ರಂಥಗಳಲ್ಲೂ ಉಲ್ಲೆಖವಾಗಿದೆಯೆಂತೆ. ಪ್ರಸ್ತುತದಲ್ಲಿ ಈ ಭೂಮಿಯ ಮೇನ ಚೆರ್ಚೆಯ ವಿಷಯಗಳೆಂದರೆ ಮೊದಲನೆಯದು ಭೂಮಿಯ ಅಂತ್ಯ, ಎರಡನೆಯದು ಅನ್ಯಗ್ರಹಜೀವಿಗಳು. ನೆನಪಿರಲಿ ಈ ಎರಡು ಬರಿ ಚರ್ಚೆಯ ವಿಷಯಗಳಷ್ಟೇ, ನಿಜವೆಂದು ಸಾಬೀತಾಗಿಲ್ಲ. ಈ ಅಂಕಣದಲ್ಲಿ ಭೂಮಿಯ ಹುಟ್ಟಿನ ಬಗ್ಗೆ ಮತ್ತು ಅಂತ್ಯದ ಬಗ್ಗೆ ಚರ್ಚಿಸಲಾಗಿದೆ.*
#################
*ಭೂಮಿ ಹುಟ್ಟಿದ್ದು ಹೇಗೆ…?*
###############
*ನಮ್ಮ ಭೂಮಿ. ಅದು ವಿಶ್ವದಲ್ಲೇ ಒಂದು ಅತಿ ವಿಶಿಷ್ಟಕಾಯ-ಈವರೆಗೆ ತಿಳಿದಿರುವ ಏಕೈಕ ಜೀವಗೋಳ. ಸುಮಾರು 460 ಕೋಟಿ ವರ್ಷ ವಯಸ್ಸಿನ ಈ ಕಾಯ ಹನ್ನೆರಡೂವರೆ ಸಾವಿರ ಕಿ.ಮೀ ವ್ಯಾಸದ ಶಿಲಾಪಾಕ (ಮ್ಯಾಗ್ಮಾ) ಭರಿತ ಕವಚ. ಅಲ್ಲಿಂದ ಕೆಳಗೆ ಸುಮಾರು 3250 ಕಿ.ಮೀ ತ್ರಿಜ್ಯದ ಗರ್ಭ-ಹೀಗೆ ಪೃಥ್ವಿಯದು ಪದರ ರೂಪದ ಆಂತರ್ಯ ಹೊರಗೆ ಇದೆಲ್ಲವನ್ನೂ ಆವರಿಸಿದ ವಾಯುಮಂಡಲ ಬೇರೆ. ಶಿಲೆಗಳಿಂದಾದ ಗಟ್ಟಿ ತೊಗಟೆಯದು ಎಂದರೆ ಭೂ ಮೇಲ್ಮೈನದು ದ್ವಿವಿಧ ಅಸ್ತಿತ್ವ: ‘ಭುಖಂಡಗಳು ಮತ್ತು ಕಡಲ ತಳದ ನೆಲ.’ ಕಡಲ ತಳದ ನೆಲದ ದಪ್ಪ 7.5 ಕಿ.ಮೀ.ನಿಂದ 12 ಕಿ.ಮೀ. ಆದರೆ ಭೂಖಂಡಗಳ ದಪ್ಪ 35 ಕಿ.ಮೀ.ನಿಂದ 60 ಕಿ.ಮೀ. ಈ ಎರಡೂ ಬಗೆಯ ನೆಲಗಳ ಶಿಲೆಗಳ ಸಾಂದ್ರತೆ ಕವಚದಲ್ಲಿನ ಶಿಲಾಪಾಕದ ಸಾಂದ್ರತೆಗಿಂತ ಕಡಿಮೆ. ಹಾಗಾಗಿ ಅವು ಕವಚದ ದ್ರವ್ಯದ ಮೇಲೆ ತೇಲುತ್ತಿವೆ. ಭೂಮಿಯ ಒಟ್ಟೂ ಮೇಲ್ಮೈ ವಿಸ್ತೀರ್ಣದ ಶೇ. 71 ಭಾಗ ಸಾಗರ, ಉಳಿದ ಶೇ. 29ರಷ್ಟು ಪ್ರದೇಶ ಸಾಗರಮಟ್ಟದಿಂದ ಎತ್ತರದಲ್ಲಿ ಭೂಖಂಡಗಳಾಗಿ ಹರಡಿವೆ.*
################
*ಭೂ ಬಗೆಗಿನ ಈ ಅಂಶಗಳನ್ನು ಗಮನಿಸುವ ಯಾರಿಗೇ ಆದರೂ ಬಹು ಕುತೂಹಲ. ಭೂಖಂಡಗಳು ಅವತರಣಗೊಂಡ ವಿಧಾನ-ಅದೊಂದು ಸುದೀರ್ಘ, ಸೋಜಿಗಮಯ ವಿದ್ಯಮಾನ. ನಮ್ಮ ಭೂಮಿ ಮೈದಳೆದದ್ದು 460 ಕೋಟಿ ವರ್ಷ ಹಿಂದೆ. ಕುದಿವ ಸ್ಥಿತಿಯಲ್ಲಿ, ಬರೀ ಮ್ಯಾಗ್ಮಾ ಮತ್ತು ನಾನಾ ಅನಿಲ ಮಿಶ್ರಿತ ದ್ರವ್ಯ ದಾಸ್ತಾನಿನೊಡನೆ ಹುಟ್ಟಿದ ಭೂಮಿ ಈಗಿನಂತೆಯೇ ಗಿರಿಗಿರಿಸುತ್ತುತ್ತ ಸೂರ್ಯನನ್ನು ಪರಿಭ್ರಮಿಸುತ್ತಿತ್ತು. ಸಹಜವಾಗಿಯೇ ನಿಧಾನವಾಗಿ ಸ್ವಲ್ಪವಾಗಿ ತಣ್ಣಗಾಗುತ್ತ ಸಾಗಿದ್ದು ಭೂಮಿಯ ಮೇಲ್ಮೈನ ದ್ರವ್ಯ ತೆಳ್ಳಗೆ ಕೆನೆಗಟ್ಟುತ್ತ ಅಲ್ಲಲ್ಲಿ ಗಟ್ಟಿರೂಪವನ್ನೂ ಗಳಿಸತೊಡಗಿತ್ತು.*
##################
*ಇಡೀ ಸೌರವ್ಯೂಹವೇ ರೂಪುಗೊಳ್ಳುತ್ತಿದ್ದ ಆ ಕಾಲದಲ್ಲಿ ಭೂಮಿಯತ್ತ ಎರಗುತ್ತಿದ್ದ ಕ್ಷುದ್ರಗ್ರಹಗಳು ಅಸಂಖ್ಯ. ವಾತಾವರಣದ ರಕ್ಷಣೆ ಇರದಿದ್ದ ಆ ಕಾಲದಲ್ಲಿ ಕ್ಷುದ್ರಗ್ರಹ ದಾಳಿ ಅವಿರತ ನಡೆದಿತ್ತು. ಹಿಡಿಗಾತ್ರದಿಂದ ಹತ್ತಾರು ಕಿ.ಮೀ. ವ್ಯಾಸದವರೆಗಿನ ಗಾತ್ರದ ಆ ಕ್ಷುದ್ರಗ್ರಹಗಳು ಭೂಮಿಗೆ ಅಪ್ಪಳಿಸಿದಾಗಲೆಲ್ಲ ಅಲ್ಲಲ್ಲಿನ ತೆಳ್ಳನೆ ನೆಲ ಕರಗುತ್ತಿತ್ತು ಅಥವಾ ನೆಲದ ತುಣುಕುಗಳು ಅರೆಬರೆ ಕರಗಿ ಒಟ್ಟಾಗಿ ದೊಡ್ಡದಾಗುತ್ತಿದ್ದುವು. ಈಗ್ಗೆ 380 ರಿಂದ 250 ಕೋಟಿ ವರ್ಷ ಹಿಂದೆ ಬೃಹತ್ ಕ್ಷುದ್ರಗ್ರಹಗಳ ದಾಳಿ ವಿಪರೀತ ನಡೆದಿತ್ತು. ಆ ವೇಳೆಗೆ ಭೂಮಿಯನ್ನು ನೂರಾರು ಶಿಲಾಫಲಕಗಳು ಆವರಿಸಿದ್ದು ಆ ಪೈಕಿ ಹತ್ತಾರು ಬೃಹತ್ ಫಲಕಗಳು ಅಗ್ನಿಪರ್ವತಗಳನ್ನೂ ಧರಿಸಿದ್ದುವು. ಅಗ್ನಿಪರ್ವತಗಳಿಂದ ಉಕ್ಕುತ್ತಿದ್ದ ಶಿಲಾದ್ರವ್ಯದಿಂದ ದಪ್ಪನಾಗುತ್ತ, ಕ್ಷುದ್ರಗ್ರಹಗಳ ಭೀಕರ ಬಡಿತದಿಂದ ತುಂಬ ಬಿಸಿಯಾಗಿ ಆಸುಪಾಸಿನ ಫಲಕಗಳೊಡನೆ ಬೆರೆತು ವಿಸ್ತಾರವಾಗುತ್ತ ಹೋದ ಇಂಥ ಬೃಹತ್ ಬಂಡೆ ಹಾಳೆಗಳು ಕವಚದಲ್ಲಿ ಮುಳುಗುತ್ತ ಏಳುತ್ತ ಅವುಗಳಲ್ಲಿ ಬೆರೆತಿದ್ದ ಕಬ್ಬಿಣ, ಕ್ರೋಮಿಯಂಗಳಂತಹ ‘ಭಾರಧಾತು’ ಗಳನ್ನು ಕಳೆದುಕೊಂಡು ಅಲ್ಯೂಮಿನಿಯಂ ಸಿಲಿಕಾನ್‍ಗಳಂತಹ ‘ಹಗುರಧಾತು’ಗಳನ್ನು ಉಳಿಸಿಕೊಂಡು ಕವಚದಲ್ಲಿ ತೇಲುವ ಬಂಡೆರಾಶಿಗಳಾದುವು. ಆ ವೇಳೆಗೆ ಜ್ವಾಲಾಮುಖಿಗಳಿಂದ ಹೊಮ್ಮಿ ಭೂಮಿಯನ್ನು ಆವರಿಸಿದ್ದ ವಾತಾವರಣ ಕವಚದಿಂದ ಕ್ಷುದ್ರಗ್ರಹ ಹಾವಳಿಯೂ ಕಡಿಮೆಯಾಗತೊಡಗಿತ್ತು.*
################
*ಈಗ್ಗೆ ಸುಮಾರು 300 ಕೋಟಿ ವರ್ಷ ಹಿಂದೆ ಪೃಥ್ವಿಯ ಪ್ರಪ್ರಥಮ ಭೂಖಂಡ ಮೈದಳೆಯಿತು. ಅದರ ವಿಸ್ತಾರ ಸುಮಾರು ಈಗಿನ ಆಸ್ಟ್ರೇಲಿಯಾ ಖಂಡದಷ್ಟಿತ್ತು ಜ್ವಾಲಾಮುಖಿ ಸಿಡಿತ ಮತ್ತು ಭಾರೀ ಕ್ಷುದ್ರಗ್ರಹಗಳ ಬಡಿತ-ಈ ಕ್ರಿಯೆಗಳೇ ಮುನ್ನಡೆದು ಗ್ರಾನೈಟ್‍ನಂಥ ಹಗುರ ಶಿಲೆಗಳ ನೆಲಫಲಕಗಳು ಮೈದಳೆಯುತ್ತ, ಬೆಸೆಗೊಳ್ಳುತ್ತ, ಅಗ್ನಿಪರ್ವತಗಳ ಮೂಲಕ ಅಧಿಕಾಧಿಕ ದ್ರವ್ಯರಾಶಿ ಪಡೆಯುತ್ತ ಕಡೆಗೆ ಈಗ್ಗೆ ಸುಮಾರು 110 ಕೋಟಿ ವರ್ಷ ಹಿಂದಿನ ವೇಳೆಗೆ ಒಂದೇ ಒಂದು ಮಹಾಭೂಖಂಡ (ಸೂಪರ್ ಕಾಂಟಿನೆಂಟ್) ಅಸ್ತಿತ್ವಕ್ಕೆ ಬಂತು. ಈಗಿನ ಎಲ್ಲ ಭೂಖಂಡಗಳ ಒಟ್ಟು ವಿಸ್ತಾರ ಅದರದಾಗಿತ್ತು. ಮುಂದೆ ಆ ಮಹಾಖಂಡ ಅಲ್ಲಲ್ಲಿ ಸೀಳಿ, ನಿಧಾನವಾಗಿ ಬೇರೆಯಾಗಿ, ವಿವಿಧ ದಿಕ್ಕುಗಳಲ್ಲಿ ಚಲಿಸಿ, ಸಪ್ತ ಭೂಖಂಡಗಳಾಗಿ, ಸದ್ಯದ ವಿನ್ಯಾಸ. ಈಗಲೂ ಈ ಎಲ್ಲ ಭೂಖಂಡಗಳೂ ಚಲನಶೀಲವಾಗಿಯೇ ಇವೆ. ‘ಭೂಖಂಡಗಳ ಅಲೆತ’ ಎಂಬ ಆ ವಿದ್ಯಮಾನ-ಅದೇ ಬೇರೊಂದು ವಿಸ್ಮಯ.*
################
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ