*##ಮಾಹಿತಿ ವೇದಿಕೆ##*
*##ನಿಮಗಿದು ಗೊತ್ತಿರಲಿ##*
=========
*"HISAR GOURAV" (ಹಿಸರ್ ಗೋರಾವ್)*
=============
*ICAR-Central Institute for Research on Buffaloes (CIRB) ಯಲ್ಲಿ ವಿಜ್ಞಾನಿಗಳು ಅಬೀಜ ಸಂತಾನದ ಮೂಲಕ 'ಹಿಸರ್ ಗೋರಾವ್' ಎಮ್ಮೆ ಕರು ಅನ್ನು ಸೃಷ್ಟಿಸಿದ್ದಾರೆ. ಈ ಸಾಧನೆಯೊಂದಿಗೆ CIRB ಅಬೀಜ ಸಂತಾನದ ಮೂಲಕ ಎಮ್ಮೆ ಸೃಷ್ಟಿಸಿದ ವಿಶ್ವದ ಮೂರನೇ ಮತ್ತು ಭಾರತದ ಎರಡನೆಯ ಸಂಸ್ಥೆಯಾಗಿದೆ. 2010 ರಲ್ಲಿ ಕರ್ನಾಲ್ ನ "ನ್ಯಾಷನಲ್ ಡೈರಿ ರಿಸರ್ಚ್ ಇನ್ಸ್ಟಿಟ್ಯೂಟ್" ವು ಮೊದಲ ಯಶಸ್ವಿ ಕ್ಲೋನಿಂಗ್ ಅನ್ನು ಸಾಧಿಸಿತು. "Samrupa" ಎಂಬ ವಿಶ್ವದ ಮೊದಲ ಮುರ್ರಾ ಎಮ್ಮೆ ಕರುವನ್ನು "Hand guided cloning technique" ಬಳಸಿ ಕ್ಲೋನ್ ಮಾಡಿ ಸೃಷ್ಟಿಸಲಾಯಿತು. ಭಾರತವು 58% ನಷ್ಟು ವಿಶ್ವದ ಎಮ್ಮೆಗಳನ್ನು ಹೊಂದಿದೆ ಮತ್ತು ಭಾರತದ ಜಾನುವಾರುಗಳ ಪೈಕಿ 35% ನಷ್ಟು ಎಮ್ಮೆಗಳು ಇವೆ. ಎಮ್ಮೆ ಹಾಲು ಭಾರತದಲ್ಲಿ ಒಟ್ಟು ಹಾಲಿನ ಉತ್ಪಾದನೆಯಲ್ಲಿ 70% ಆಗಿದೆ. ಎಮ್ಮೆ ಮಾಂಸವು ಭಾರತದ ಒಟ್ಟು ಮಾಂಸದ ರಫ್ತುಗಳಲ್ಲಿ 86% ರಷ್ಟಿದೆ. ಗೋಧಿ ಮತ್ತು ಅಕ್ಕಿಯ ಒಟ್ಟು ಜಿಡಿಪಿಯು ಹಾಲಿನ ಜಿಡಿಪಿಗಿಂತ ಕಡಿಮೆಯಿದೆ ( ಅಂದರೆ ಭಾರತದ ಒಟ್ಟು ಜಿಡಿಪಿಯ ಭಾಗದಲ್ಲಿ ).*
############
*CIRB ಕುರಿತು.*
°°°°°°°°°°°°°
*ಇದು ನೀರಿನ ಎಮ್ಮೆ ಸಂಶೋಧನಾ ಸಂಸ್ಥೆಯಾಗಿದೆ. ಇದು ಹರಿಯಾಣದಲ್ಲಿ "ಹಿಸ್ಸಾರ್" ನಲ್ಲಿದೆ. ಎಲ್ಲಾ ಎಮ್ಮೆ ತಳಿಗಳಲ್ಲಿರುವ ಉನ್ನತ ತಳಿಗಳನ್ನು ಸಂರಕ್ಷಿಸುವ ಜವಾಬ್ದಾರಿಯನ್ನು ಹೊಂದಿದೆ. ಇದು ವಿಶ್ವದ ಅತಿದೊಡ್ಡ ಎಮ್ಮೆ ಸಂಶೋಧನಾ ಸಂಸ್ಥೆಯಾಗಿದೆ. ಇದು ವಿಶ್ವದ ಮೊದಲ ಆನ್ಲೈನ್ ಬಫಲೋಪೀಡಿಯಾವನ್ನು ಹಲವು ಭಾಷೆಗಳಲ್ಲಿ ರಚಿಸಿದೆ.*
================
*ಸ್ಥಾಪನೆ : 1 ಫೆಬ್ರವರಿ 1985. ಪ್ರಸ್ತುತ ನಿರ್ದೇಶಕರು : ಡಾ. ಇಂದರ್ಜೀತ್ ಸಿಂಗ್.*
===============
ಭಾನುವಾರ, ಮಾರ್ಚ್ 18, 2018
ನಿಮಗಿದು ಗೊತ್ತಿರಲ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ