ಶುಕ್ರವಾರ, ಮಾರ್ಚ್ 16, 2018

ನಿಮಗಿದು ಗೊತ್ತಿರಲ

*##ಮಾಹಿತಿ ವೇದಿಕೆ##*
  
    *##ನಿಮಗಿದು ಗೊತ್ತಿರಲಿ##*
============
*ಏನಿದು ರಾಮಸೇತು?: *
••••••••••••••••••••••••
*ತಮಿಳುನಾಡಿನ ಪಂಬನ್ ದ್ವೀಪದಿಂದ ಶ್ರೀಲಂಕಾದ ಮನ್ನಾರ್ ದ್ವೀಪಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಮಾದರಿಯ ರಚನೆಯೇ ರಾಮಸೇತು. ಇದು ಸಂಪೂರ್ಣವಾಗಿ ಕಲ್ಲಿನಿಂದ ರಚಿಸಲ್ಪಟ್ಟಿದೆ. ರಾವಣನು ಸೀತೆಯನ್ನು ಅಪಹರಿಸಿದ್ದಾಗ, ಆಕೆಯನ್ನು ಬಿಡಿಸಿಕೊಂಡು ಬರಲು ಶ್ರೀರಾಮ ವಾನರ ಸೇನೆಯೊಂದಿಗೆ ಶ್ರೀಲಂಕಾ (ಅಂದಿನ ಲಂಕೆ)ಗೆ ತೆರಳುವ ಸಂದರ್ಭ ಸಮುದ್ರ ದಾಟಲು ಈ ಸೇತುವೆ ನಿರ್ವಿುಸಲಾಯಿತು ಎಂದು ರಾಮಾಯಣದಲ್ಲಿ ಉಲ್ಲೇಖವಿದೆ. ಸುಮಾರು 50 ಕಿ.ಮೀ. ಉದ್ದವಾಗಿರುವ ಈ ಸೇತುವೆ ಮನ್ನಾರ್ ಹಾಗೂ ಪಾಕ್ ಜಲಸಂಧಿಯನ್ನು ಪ್ರತ್ಯೇಕಿಸುತ್ತದೆ.*
###########
*ಈ ಪ್ರದೇಶದಲ್ಲಿ ಸಮುದ್ರದ ಆಳ ಕೇವಲ 1-10 ಮೀಟರ್​ಗಳಷ್ಟಿದೆ. 15ನೇ ಶತಮಾನದ ವರೆಗೆ ಈ ಸೇತುವೆ ಸಮುದ್ರಮಟ್ಟಕ್ಕಿಂತ ಮೇಲಿತ್ತು. ಜನರು ಇದರ ಮೇಲೆ ಓಡಾಡಬಹುದಾಗಿತ್ತು. 1480ರಲ್ಲಿ ಉಂಟಾದ ಭಾರಿ ಚಂಡಮಾರುತ ಹಾಗೂ ನೈಸರ್ಗಿಕ ವಿಕೋಪದ ಕಾರಣ ಸೇತುವೆಯ ಕೆಲ ಭಾಗ ನೀರಲ್ಲಿ ಮುಳುಗಿದೆ ಎನ್ನಲಾಗುತ್ತಿದೆ. ಪಾಶ್ಚಿಮಾತ್ಯ ದೇಶಗಳು ರಾಮಸೇತುವನ್ನು ಆಡಮ್್ಸ ಬ್ರಿಜ್ ಎಂದು ಕರೆಯುತ್ತವೆ.*
##############
*ಏನಿದು ಯೋಜನೆ*
##############
*ಅರಬ್ಬಿ ಸಮುದ್ರದ ಕಡೆಯಿಂದ ಬರುವ ಹಡಗುಗಳು ಹಿಂದು ಮಹಾಸಾಗರದ ಮೂಲಕ ಬಂಗಾಳ ಕೊಲ್ಲಿ ಅಥವಾ ಪೂರ್ವಭಾಗದ ರಾಷ್ಟ್ರಗಳ ಕಡೆಗೆ ಶ್ರೀಲಂಕಾ ಬಳಸಿಕೊಂಡು ಸಾಗಬೇಕು. ಇದು ತಪ್ಪಿದರೆ, 650 ಕಿ.ಮೀ. ಕ್ರಮಿಸಲು ಹಿಡಿಯುವ 10 ರಿಂದ 30 ತಾಸು ಸಮಯ ಮತ್ತು ಕೋಟ್ಯಂತರ ರೂಪಾಯಿ ಮೌಲ್ಯದ ಇಂಧನ ಉಳಿತಾಯವಾಗುತ್ತದೆ. ಈ ಉದ್ದೇಶದಿಂದ ಭಾರತ ಮತ್ತು ಶ್ರೀಲಂಕಾ ಮಧ್ಯೆ ಮನ್ನಾರ್ ಕೊಲ್ಲಿಯ ಪಾಕ್ ಜಲಸಂಧಿಯಲ್ಲಿ ಆಳ ಹೆಚ್ಚಿಸಬೇಕು. ಆಗ ದೊಡ್ಡ ಹಡಗುಗಳು ಈ ಮಾರ್ಗದಲ್ಲಿ ಚಲಿಸಬಹುದು. ಹಾಗಾಗಿ 1997ರಲ್ಲಿ ಸೇತುಸಮುದ್ರಂ (ಜಲಮಾರ್ಗ) ಯೋಜನೆಯನ್ನು ರೂಪಿಸಲಾಯಿತು. 30 ಮೀಟರ್ ಅಗಲ, 12 ಮೀಟರ್ ಆಳ ಹಾಗೂ 167 ಕಿ.ಮೀ. ಉದ್ದದ ಮಾರ್ಗ ನಿರ್ವಣದ ಯೋಜನೆಗೆ 2005ರಲ್ಲಿ ಯುಪಿಎ ಸರ್ಕಾರ ಆಡಳಿತದಲ್ಲಿದ್ದಾಗ ಅಂಗೀಕಾರ ದೊರೆಯಿತು. ಬಿಜೆಪಿ, ಹಿಂದು ಸಂಘಟನೆಗಳು ಇದಕ್ಕೆ ಭಾರಿ ವಿರೋಧ ವ್ಯಕ್ತಪಡಿಸಿದ್ದವು. ಈ ಜಲಮಾರ್ಗದಿಂದ 650 ಕಿ.ಮೀ. ಪಯಣ ಕಡಿತವಾಗುತ್ತದೆ. ಹಡಗುಗಳು ಬಳಸುವ ಇಂಧನದಲ್ಲಿ 22 ಸಾವಿರ ಕೋಟಿ ರೂಪಾಯಿ ಉಳಿತಾಯವಾಗಿ, ವಾರ್ಷಿಕ 5 ಸಾವಿರ ಕೋಟಿ ರೂಪಾಯಿಗಳ ವ್ಯಾಪಾರವಹಿವಾಟು ನಡೆಯಲಿದೆ ಎಂದು ಹಿಂದಿನ ಯುಪಿಎ ಸರ್ಕಾರ ನ್ಯಾಯಾಲಯದಲ್ಲಿ ವಾದ ಮಂಡಿಸಿತ್ತು. 2010ರಲ್ಲಿ ಸುಪ್ರೀಂಕೋರ್ಟ್ ಈ ಯೋಜನೆಗೆ ತಡೆ ನೀಡಿತ್ತು.*
###############

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ