ಶುಕ್ರವಾರ, ಮಾರ್ಚ್ 16, 2018

ನಿಮಗಿದು ಗೊತ್ತಿರಲಿ##

1. ಪ್ರೋಟೀನ್‍ಗಳಲ್ಲಿ ಇರಬಹುದಾದ ಸಾರಜನಕದ ಪ್ರಮಾಣ- 16%
2. ಪ್ರೋಟೀನ್ ಎಂಬ ಪದವನ್ನು ಮೊದಲು ಪರಿಚಯಿಸಿದವರು-ಜೆರಾರ್ಡ್ ಜೋಹಾನಿಸ್ ಮಲ್ಡರ್
3. ಪ್ರೋಟೀನ್ ಅಣುಗಳನ್ನು ಬೃಹತ್ ಅಣುಗಳು ಎಂದು ಕರೆಯಲು ಕಾರಣ-ಇವು ಗಾತ್ರದಲ್ಲಿ ದೊಡ್ಡದಾಗಿದ್ದು, ಕೋಶ ಪೊರೆಯ ಮೂಲಕ ಹಾದುಹೋಗುವುದಿಲ್ಲ
4. ಪ್ರೋಟೀನ್‍ಗಳ ಮಾನೋಮರ್‍ಗಳು- ಅಮೈನೋ ಆಮ್ಲಗಳು
5. ಅಮೈನೋ ಆಮ್ಲಗಳ ಬಗ್ಗೆ ವಿಶೇಷವಾಗಿ ಅಧ್ಯಯನ ಮಾಡಿ ನೊಬೆಲ್ ಪ್ರಶಸ್ತಿ ಪಡೆದ ವಿಜ್ಞಾನಿ- ಎಮಿಲ್ ಫಿಷರ್
6. ಸ್ವಾಭಾವಿಕವಾಗಿ ದೊರೆಯುವ ಅಮೈನೋ ಆಮ್ಲಗಳು ಎಷ್ಟು?- 26
7. ನಮ್ಮ ದೇಹವು ಸ್ವತಃ ತಯಾರಿಸಿಕೊಳ್ಳುವ ಅಮೈನೋ ಆಮ್ಲಗಳ ಸಂಖ್ಯೆ-12
8. ನಮ್ಮ ದೇಹವು ಸ್ವತಃ ತಯರಿಸಿಕೊಳ್ಳುವ ಅಮೈನೋ ಆಮ್ಲಗಳು- ಅನಾವಶ್ಯಕ ಅಮೈನೋ ಆಮ್ಲಗಳು
9. ನಮ್ಮ ದೇಹವು ತಯಾರಿಸಿಕೊಳ್ಳದ ನಮ್ಮ ಆಹಾರದಲ್ಲಿ ಸೇವಿಸಲೇಬೇಕಾದ ಅಮೈನೋ ಆಮ್ಲಗಳು-ಅವಶ್ಯಕ ಅಮೈನೋ ಆಮ್ಲಗಳು
10. ಅನಾವಶ್ಯಕ ಅಮೈನೋ ಆಮ್ಲಗಳು  :  ಎ) ಅಲನೈನ್   ಬಿ) ಅಸ್ಪಾರ್ಟಿಕ್ ಆಮ್ಲ ಸಿ) ಅರ್ಜಿನೈನ್  ಡಿ) ಗ್ಲುಟಾಮಿಕ್ ಆಮ್ಲ  ಇ) ಗ್ಕ್ಲೆಸಿನ್  ಎಫ್) ಸಿರೀನ್
ಜಿ) ಥೈರೋಸಿನ್
ಅವಶ್ಯಕ ಅಮೈನೋ ಆಮ್ಲಗಳು :  ಎ)ವ್ಯಾಲಿನ್   ಬಿ) ಲೈಸಿನ್ ಸಿ) ಐಸೋಲೂಸಿಸ್ ಡಿ) ಲುಸಿನ್ ಇ) ಮೆಥಿಯೋನೈನ್ ಎಫ್) ಫೀನೈಲ್ ಅಲನೈನ್ ಜಿ) ಟ್ರಿಪ್ಟೋಪ್ಯಾನ
11. ಪ್ರತಿ ಅಮೈನೋ ಆಮ್ಲದಲಲಿ ಇರಬಹುದಾದ 2 ಗುಂಪುಗಳು  – ಆಮ್ಲ ಮತ್ತು ಅಮೈನೋ
12. ಅಮೈನೋ ಆಮ್ಲಗಳ ಅಣುಗಳಿಂದ ಮಾತ್ರ ಮಾಡಲ್ಪಟ್ಟಿರುವ ಪ್ರೋಟೀನ್‍ಗಳು-ಸರಳ ಪ್ರೋಟೀನ್‍ಗಳು
13. ಅಮೈನೋ ಆಮ್ಲಗಳ ಜೊತೆಗೆ ಪ್ರೋಟೀನ್ ಅಲ್ಲದ ವಸ್ತುಗಳು ಸೇರಿ ಆಗಿರುವ ಪ್ರೋಟೀನ್- ಸಂಕೀರ್ಣ ಪ್ರೋಟೀನ್‍ಗಳು
14. ಸರಳ ಪ್ರೋಟೀನ್‍ಗಳಿಗೆ ಉದಾಹರಣೆ : ಎ) ಅಲ್ಬುಮಿನ್ ಬಿ) ಗ್ಲಾಬುಲಿನ್ ಸಿ) ಹಿಸ್ಟೋನ್ಸ ಡಿ)ಸ್ಕ್ಲೀರೋ ಪ್ರೋಟೀನ್‍ಗಳು
15. ಉಗುರು ಮತ್ತು ಕೂದಲಿನಲ್ಲಿರುವ ಸರಳ ಪ್ರೋಟೀನ್‍ಗಳು-ಕೆರಾಟಿನ್
16. ಮಾಂಸ ಖಂಡಗಳಲ್ಲಿ(ಸ್ನಾಯುಗಳಲ್ಲಿ) ಕಂಡುಬರುವ ಪ್ರೋಟೀನ್-ಮಯೋಸಿನ್
17. ಸಂಕೀರ್ಣ ಪ್ರೋಟೀನ್‍ಗಳಲ್ಲಿ ಇರುವ ಪ್ರೋಟೀನ್ ಅಲ್ಲದ ವಸ್ತುಗಳನ್ನು ಏನೆನ್ನುವರು-ಪ್ರಾಸ್‍ಥೆಟಿಕ್ ಗುಂಪು
18. ನ್ಯೂಕ್ಲಿಕ್ ಆಮ್ಲಗಳ ಜೊತೆ ಇರುವ ಪ್ರೋಟೀನ್‍ಗಳು- ನ್ಯೂಕ್ಲಿಕ್ ಪ್ರೋಟೀನ್‍ಗಳು
19. ಪ್ರೋಟೀನ್‍ಗಳ ಜೊತೆ ಶರ್ಕರ ಪಿಷ್ಟಗಳ ಅಣುಗಳು ಇದ್ದರೆ, ಅದನ್ನು ಏನೆನ್ನುವರು-ಗ್ಲೈಕೋಪ್ರೋಟೀನ್‍ಗಳು
20. ಇಮ್ಯುನೋಗ್ಲೋಬಿನ್‍ನಲ್ಲಿರುವ ಪ್ರಾಸ್‍ಥೆಟಿಕ್ ಗುಂಪು- ಕಾರ್ಬೋಹೈಡ್ರೇಟ್
21. ಕೂದಲು, ಉಗುರುಗಳನ್ನು ಸುಟ್ಟಾಗ ಘಾಟುವಸನೆ ಬರಲು ಕಾರಣ- ಗಂಧಕದ ಅಂಶ ಇರುತ್ತದೆ
22. ಸ್ನಾಯುಗಳ ಸಂಕುಚನೆ ಚಲನೆಯನ್ನು ನಿಯಂತ್ರಿಸುವ ಪ್ರೋಟೀನ್‍ಗಳು-ಆಕ್ಟೀನ್ ಮತ್ತು ಮಯೋಸಿನ್
23. ನಮ್ಮ ದೇಹದಲ್ಲಿರುವ ಜೀರ್ಣರಸದಲ್ಲಿರುವ ಕಿಣ್ವಗಳು ಯಾವುದರಿಂದ ಮಾಡಲ್ಪಟ್ಟಿವೆ – ಪ್ರೋಟೀನ್‍ಗಳು
24. ಇನ್ಸುಲಿನ್ ಹಾರ್ಮೋನ್‍ಗಳು ಇದರಿಂದ ಮಾಡಲ್ಪಟ್ಟಿದೆ-ಪ್ರೋಟೀನ್‍ಗಳು
25. ಪ್ರಮುಖ ದೇಹ ನಿರ್ಮಾಣಕಾರಕಗಳು-ಪ್ರೋಟೀನ್‍ಗಳು
26. ಹಾವಿನ ವಿಷದಲ್ಲಿರುವ ಅಂಶ- ಪ್ರೋಟೀನ್‍ಗಳು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ