===========
> ಇಂಗಾಲ ಮತ್ತು ಜಲಜನಕದ ಸಂಯುಕ್ತಗಳು-ಹೈಡ್ರೋಕಾರ್ಬನ್‍ಗಳು.
> ಇಂಗಾಲದ ಸಂಯುಕ್ತಗಳು – ಸಾವಯವ ಸಂಯುಕ್ತಗಳು.
> ಆಹಾರ ವಸ್ತುಗಳೆಲ್ಲವೂ ಈ ವಿಧದ ಸಂಯುಕ್ತಗಳು-ಸಾವಯವ ಸಂಯುಕ್ತಗಳು.
> ಇಂಗಾಲವಿಲ್ಲದ ಸಂಯುಕ್ತಗಳು-ನರವಯದ ಸಂಯುಕ್ತಗಳು.
> ಸಸ್ಯ ಮತ್ತು ಪ್ರಾಣಿಗಳೆಲ್ಲವೂ ಈ ವಿಧದ ಸಂಯುಕ್ತಗಳಿಂದಾಗಿವೆ-ಸಾವಯವ ಸಂಯುಕ್ತಗಳು.
> ಕಾರ್ಬನ್ ಸಂಯುಕ್ತಗಳನ್ನು ಅಭ್ಯಾಸ ಮಾಡುವ ರಸಾಯನಶಾಸ್ತ್ರದ ಭಾಗ-ಸಾವಯವ ರಸಾಯನಶಾಸ್ತ್ರ.
> ಕಾರ್ಬನ್‍ನ ವೇಲೆನ್ಸಿ-4 (ಟೆಟ್ರಾವೆಲೆನ್ಸಿ)
> ಸಾವಯವ ಸಂಯುಕ್ತಗಳಲ್ಲಿ ಉಂಟಾಗಿರುವ ಬಂಧಗಳು-ಕೊವಲೆಂಟ್ ಬಂಧಗಳು.
> ಕಾರ್ಬನ್ ತನ್ನ ಪರಮಾಣುಗಳೊಂದಿಗೆ ಬಂದಗಳನ್ನೇರ್ಪಡಿಸಿಕೊಂಡು ಸರಪಣಿ ರಚಿಸಿಕೊಳ್ಳುವ ಸಂಗತಿ-ಕೆಟನೀಕರಣ.
> ಕಾರ್ಬನ್‍ನ ವಿವಿಧ ಸರಪಳಿಗಳು : 1) ನೇರ ಸರಪಳಿ 2) ಕವಲು ಸರಪಣಿ 3) ಮುಚ್ಚಿದ ಸರಪಣಿ
> ಪ್ಲಾಸ್ಟಿಕ್‍ಗಳು, ಡಿಟರ್ಜಂಟ್‍ಗಳು, ಬಣ್ಣಗಳ ಉತ್ಪಾದನೆಯಲ್ಲಿ ಬಳಸುವ ಕಚ್ಚಾವಸ್ತುಗಳು-ಹೈಡ್ರೋಕಾರ್ಬನ್‍ಗಳು
> ಅತ್ಯಂತ ಸರಳ ಹೈಡ್ರೋಕಾರ್ಬನ್-ಮಿಥೇನ್
> ಎರಡು ಪರಮಾಣುಗಳ ನಡುವೆ ಹಂಚಿಕೆಯಾಗಿರುವ ಒಂದು ಜೊತೆ ಎಲೆಕ್ಟ್ರಾನ್‍ಗಳನ್ನು ಸೂಚಿಸುವುದು-ಬಂಧ (-).
> ಇಂಗಾಲ ಮತ್ತು ಜಲಜನಕದ ಪರಮಾಣುಗಳ ಜೊತೆ ಈ ರೀತಿಯ ಬಂಧ ಉಂಟಾಗುತ್ತದೆ- ಏಕಬಂಧ (-).
> ಎರಡು ಅನುಕ್ರಮ ಪರಮಾಣುಗಳ ನಡುವೆ, ಎರಡು ಜೊತೆ ಎಲೆಕ್ಟ್ರಾನ್‍ಗಳ ಹಂಚಿಕೆಯಿಂದ ಉಂಟಾದ ಬಂಧ-ದ್ವಿಬಂಧ. (=)
> ಎರಡು ಅನುಕ್ರಮ ಪರಮಾಣುಗಳ ನಡುವೆ, ಮೂರು ಜೊತೆ ಎಲೆಕ್ಟ್ರಾನ್‍ಗಳ ಹಂಚಿಕೆಯಿಂದ ಉಂಟಾದ ಬಂಧ-ತ್ರಿಬಂಧ (=)
> ಕೊಬ್ಬಿನಿಂದ ಪಡೆಯಬಹುದಾದ ಹೈಡ್ರೋಕಾರ್ಬನ್‍ಗಳು-ಆಲಿಫ್ಯಾಟಿಕ್.
> ಸುವಾಸನೆಯಿಂದ ಕೂಡಿರುವ ಹೈಡ್ರೋಕಾರ್ಬನ್‍ಗಳು-ಆರೋಮ್ಯಾಟಿಕ್
> ಅಸೈಕ್ಲಿಕ್ ಮತ್ತ ಸೈಕ್ಲಿಕ್ ಹೈಡ್ರೋಕಾರ್ಬನ್‍ಗಳು ಯಾವ ಹೈಡ್ರೋಕಾರ್ಬನ್‍ಗಳ 2 ವಿಧಗಳು- ಆಲಿಫ್ಯಾಟಿಕ್.
> ಸಾಮಾನ್ಯ ಸೂತ್ರಗಳು- ಅ) ಅಲ್ಕೇನ್ ––CnH2n+2ಆ) ಆಲ್ಕೀನ್-CnH2n ಇ) ಆಲ್ಕೈನ್- CnH2n-2 ಈ) ಕಾಬೋಸೈಕ್ಲಿಕ್
> ಹೈಡ್ರೋಕಾರ್ಬನ್‍ಗಳು-CnH2n
> ಕಾರ್ಬನ್ ಪರಮಾಣುಗಳ ನಡುವೆ ಏಕ ಬಂಧಗಳನ್ನು ಹೊಂದಿರುವ ಸಂಯುಕ್ತಗಳು- ಅಲ್ಕೇನ್
> ಫ್ಯಾರಾಫಿನ್‍ಗಳೆಂದರೆ-ಆಲ್ಕೇನ್‍ಗಳು
> ಪರ್ಯಾಪ್ತ ಹೈಡ್ರೋಕಾರ್ಬನ್‍ಗಳೆಂದರೆ-ಅಲ್ಕೇನ್‍ಗಳು
> ಎರಡು ಅನುಕ್ರಮ ಕಾರ್ಬನ್ ಪರಮಾಣುಗಳ ನಡುವೆ ದ್ವಿಬಂದ ಹೊಂದಿರುವ ಸಂಯುಕ್ತಗಳು- ಆಲ್ಕೀನ್‍ಗಳು.
> ಆಲ್ಕೈನ್‍ಗಳ ಎರಡು ಅನುಕ್ರಮ ಕಾರ್ಬನ್ ಪರಮಾಣುಗಳ ನಡುವೆ ಈ ವಿಧದ ಬಂಧವಿದೆ– ತ್ರಿಬಂಧ.
> ಅಪರ್ಯಾಪ್ತ ರೈಡ್ರೋಕಾರ್ಬನಗಳೆಂದರೆ-ಅಲ್ಕೇನ್ ಮತ್ತು ಆಲ್ಕೈನ್‍ಗಳು
> ಹೈಡ್ರೋಕಾರ್ಬನ್‍ಗಳ ಅತಿ ದೊಡ್ಡ ವರ್ಗ-ಅರೋಮ್ಯಾಟಿಕ್ ಹೈಡ್ರೋಕಾರ್ಬನ್‍ಗಳ ಮೊದಲ ಸದಸ್ಯ-ಬೆಂಜೀನ್.
> ಬೆಂಜಿನ್‍ನಲ್ಲಿ ಕಾರ್ಬನ್ ಪರಮಾಣುಗಳ ನಡುವೆ ಅನುಕ್ರಮವಾಗಿ ಈ ರೀತಿಯ ಬಂಧಗಳಿವೆ- ಏಕಬಂಧ ಮತ್ತು ದ್ವಿಬಂಧ.
> ಬೆಂಜೀನನ್ನು ಮೊಟ್ಟಮೊದಲ ಬಾರಿಗೆ ಯಾವುದರಿಂದ ಬೇರ್ಪಡಿಸಲಾಯಿತು-ತಿಮಿಂಗಲದ ಕೊಬ್ಬಿನ ಎಣ್ಣೆಯಿಂದ ದೊರೆತ ಅನಿಲದಿಂದ.
> ಬೆಂಜೀನ್ ಕಂಡು ಹಿಡಿದವರು-ಮೈಕೆಲ್ ಫ್ಯಾರಡೆ.
> ಬೆಂಜೀನ್‍ನ ರಚನೆಯನ್ನು ಸೂಚಿಸಿದವರು-ಕೆಕುಲೆ 1865 ರಲ್ಲಿ.
> ಬೆಂಜೀನ್ ಉಂಗುರಕ್ಕೆ ಒಂದು ಗುಂಪು ಸೇರಿಸಿದಾಗ ಉಂಟಾಗುವ ಸಂಯುಕ್ತ –ಟ್ಯಾಲೀನ್
> ಸಾವಯವ ದ್ರಾವಕಗಳಾಗಿ ಸಾಮಾನ್ಯವಾಗಿ ಇದನ್ನು ಬಳಸುತ್ತಾರೆ-ಬೆಂಜೀನ್ ಮತ್ತು ಟಾಲೀನ್.
> ಟಿ.ಎನ್.ಟಿ.ಸ್ಫೋಟಕಗಳ ಉತ್ಪಾದನೆಯಲ್ಲಿ ಬಳಸಲಾಗುವ ಆರೋಮ್ಯಾಟಿಕ್ ಹೈಡ್ರೋಕಾರ್ಬನ್ –ಟಾಲೀನ್.
> ಸಂಯುಕ್ತದಲ್ಲಿನ ಅಣುಗಳ ಜೋಡಣೆಯನ್ನು ವಿವರಿಸುವುದು-ರಚನಾಶಕ್ತಿ.
==============
ಬುಧವಾರ, ಮಾರ್ಚ್ 28, 2018
ರಸಾಯನ ಶಾಸ್ತ್ರ : ಹೈಡ್ರೋಕಾರ್ಬನ್‍ಗಳ ಅಧ್ಯಯನ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ