=============°
ಹೊಸದಿಲ್ಲಿ, ಮಾ.24: ಐಸಿಸಿ 2019ರ ವಿಶ್ವಕಪ್‌ಗೆ ಇನ್ನು ಕೇವಲ ಒಂದು ವರ್ಷ ಬಾಕಿಯಿದೆ. ಈಗ ನಡೆಯುತ್ತಿರುವ ವಿಶ್ವಕಪ್ ಅರ್ಹತಾ ಸುತ್ತಿನ ಟೂರ್ನಿಯಲ್ಲಿ ಮುಂಬರುವ ವಿಶ್ವಕಪ್‌ನಲ್ಲಿ ಭಾಗವಹಿಸುವ 10 ತಂಡಗಳು ಯಾವುವು? ಎನ್ನುವುದು ಖಚಿತವಾಗಿದೆ.
=============
ಆತಿಥೇಯ ಇಂಗ್ಲೆಂಡ್, 2017ರ ಸೆಪ್ಟಂಬರ್ 30ರ ವೇಳೆ ಐಸಿಸಿ ಏಕದಿನ ರ್ಯಾಂಕಿಂಗ್‌ನಲ್ಲಿ ಅಗ್ರ-7 ಸ್ಥಾನಗಳನ್ನು ಪಡೆದಿರುವ ತಂಡಗಳು ಈಗಾಗಲೇ ವಿಶ್ವಕಪ್‌ಗೆ ನೇರ ಪ್ರವೇಶ ಗಿಟ್ಟಿಸಿಕೊಂಡಿವೆ. ಉಳಿದೆರಡು ತಂಡಗಳನ್ನು 2018ರ ಕ್ರಿಕೆಟ್ ವಿಶ್ವಕಪ್ ಕ್ವಾಲಿಫೈಯರ್ ಟೂರ್ನಿಯ ಮೂಲಕ ನಿರ್ಧರಿಸಲಾಗಿದೆ.
============
ಇಂಗ್ಲೆಂಡ್ ತಂಡದೊಂದಿಗೆ
> ಭಾರತ
>ಆಸ್ಟ್ರೇಲಿಯ
> ದಕ್ಷಿಣ ಆಫ್ರಿಕ
> ನ್ಯೂಝಿಲೆಂಡ್,
> ಶ್ರೀಲಂಕಾ
> ಪಾಕಿಸ್ತಾನ
ಹಾಗೂ ಬಾಂಗ್ಲಾದೇಶ ನೇರ ಪ್ರವೇಶ ಪಡೆದಿವೆ.
============
ವೆಸ್ಟ್‌ಇಂಡೀಸ್ ಹಾಗೂ ಅಫ್ಘಾನಿಸ್ತಾನ ವಿಶ್ವಕಪ್ ಕ್ವಾಲಿಫೈಯರ್ ಮೂಲಕ ವಿಶ್ವಕಪ್‌ಗೆ ಅರ್ಹತೆ ಪಡೆದುಕೊಂಡಿವೆ.
===========°
ಸೂಪರ್ ಸಿಕ್ಸ್ ಗೇಮ್ಸ್‌ನ ಕೊನೆಯ ಸುತ್ತಿನಲ್ಲಿ ಸ್ಕಾಟ್ಲೆಂಡ್ ತಂಡವನ್ನು ಮಣಿಸುವ ಮೂಲಕ ವೆಸ್ಟ್‌ಇಂಡೀಸ್ ವಿಶ್ವಕಪ್‌ಗೆ ಅರ್ಹತೆ ಪಡೆದಿದೆ. ಅರ್ಹತಾ ಸುತ್ತಿನ ಮೊದಲ ಮೂರು ಪಂದ್ಯಗಳಲ್ಲಿ ಸೋತ ಹೊರತಾಗಿಯೂ ಅಫ್ಘಾನಿಸ್ತಾನ ತಂಡ ವಿಶ್ವಕಪ್‌ಗೆ ಅರ್ಹತೆ ಪಡೆದುಕೊಂಡು ಅಚ್ಚರಿ ಮೂಡಿಸಿದೆ. ವಿಶ್ವದ ಕಿರಿಯ ಕ್ರಿಕೆಟ್ ನಾಯಕ ರಶೀದ್ ಖಾನ್ ನೇತೃತ್ವದ ಅಫ್ಘಾನಿಸ್ತಾನ ತಂಡ ಕೊನೆಯ ಸೂಪರ್ ಸಿಕ್ಸ್ ಪಂದ್ಯದಲ್ಲಿ ಐರ್ಲೆಂಡ್ ತಂಡವನ್ನು ಸೋಲಿಸಿ ವಿಶ್ವಕಪ್‌ಗೆ ಟಿಕೆಟ್ ಗಿಟ್ಟಿಸಿಕೊಂಡಿದೆ.
=============
ಮಾ.30,2019ರಲ್ಲಿ ಆರಂಭವಾಗಲಿರುವ ವಿಶ್ವಕಪ್‌ನಲ್ಲಿ 10 ತಂಡಗಳು ಪರಸ್ಪರ ಮುಖಾಮುಖಿಯಾಗಲಿದ್ದು >ಅಗ್ರ-4 ತಂಡಗಳು ಸೆಮಿ ಫೈನಲ್‌ಗೆ ಅರ್ಹತೆ ಪಡೆಯುತ್ತವೆ.
> 10 ತಂಡಗಳ ಒಂದೇ ಗುಂಪು ಟೂರ್ನಿಯ ಮಾದರಿಯಾಗಿದೆ. ಪ್ರತಿ ತಂಡ ಇತರ 9 ತಂಡಗಳೊಂದಿಗೆ ಆಡಲಿದೆ. >ಅಗ್ರ-4 ತಂಡಗಳು ನಾಕೌಟ್ ಹಂತಗಳಾದ ಸೆಮಿ ಫೈನಲ್ ಹಾಗೂ ಫೈನಲ್‌ಗೆ ತೇರ್ಗಡೆಯಾಗಲಿವೆ.
=============
ಅಸೋಸಿಯೇಟ್ ತಂಡಗಳಿಗೆ ಅವಕಾಶ ನೀಡದೇ ಕೇವಲ 10 ತಂಡಗಳಿಗೆ ಮಾತ್ರ ಅವಕಾಶ ನೀಡಿರುವುದು ಟೀಕೆಗೆ ಗ್ರಾಸವಾಗಿದೆ.
===============
2017ರ ಜೂನ್‌ನಲ್ಲಿ ಐರ್ಲೆಂಡ್ ಹಾಗೂ ಅಫ್ಘಾನಿಸ್ತಾನ ತಂಡಗಳು ಟೆಸ್ಟ್ ತಂಡದ ಸ್ಥಾನಮಾನ ಪಡೆದ ಬಳಿಕ ಟೆಸ್ಟ್ ಆಡುವ ದೇಶಗಳ ಸಂಖ್ಯೆ 10 ರಿಂದ 12ಕ್ಕೇರಿದೆ. 2019ರ ವಿಶ್ವಕಪ್‌ನಲ್ಲಿ ಮೊದಲ ಬಾರಿ ಎಲ್ಲ ಟೆಸ್ಟ್ ಆಡುವ ದೇಶಗಳು ಸ್ಪರ್ಧಿಸುತ್ತಿಲ್ಲ ಹಾಗೂ ಮೊದಲ ಬಾರಿ ಅಸೋಸಿಯೇಟ್ ಸದಸ್ಯ ತಂಡಗಳು ಭಾಗವಹಿಸುತ್ತಿಲ್ಲ.
==============
ಶನಿವಾರ, ಮಾರ್ಚ್ 24, 2018
ಈ ಬಾರಿಯ ಕ್ರಿಕೆಟ್ ವಿಶ್ವಕಪ್‌ನಲ್ಲಿ ಭಾಗವಹಿಸುವ ತಂಡಗಳು ಯಾವುವು?
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ