==================
ಭಾರತೀಯ ಪ್ರತಿಭಾವಂತ ಶೂಟರ್ ಮನು ಭಾಕೆರ್ ಪದಕ ಬೇಟೆ ಮುಂದುವರಿದಿದೆ. ಆಸ್ಟ್ರೇಲಿಯದ ಸಿಡ್ನಿಯಲ್ಲಿ ನಡೆಯುತ್ತಿರುವ ಐಎಸ್‍ಎಸ್‍ಎಫ್ ಜ್ಯೂನಿಯರ್ ವಿಶ್ವ ಕಪ್‍ನ ಮಹಿಳೆಯರ 100 ಮೀಟರ್ ಏರ್ ಪಿಸ್ತೂಲ್ ಅಂತಿಮ ಸ್ಫರ್ಧೆಯಲ್ಲಿ ರೋಚಕ ಗೆಲುವು ಸಾಧಿಸಿದ ಭಾಕೆರ್ ಬಂಗಾರ ಪದಕ ಕೊರಳಿಗೇರಿಸಿಕೊಂಡರು. ತೀವ್ರ ಪೈಪೋಟಿಯ ಫೈನಲ್‍ನಲ್ಲಿ ಥೈಲೆಂಡ್‍ನ ಪ್ರಬಲ ಶೂಟರ್ ಕನ್ಯಾಕೊರ್ನ್ ಹಿರುನ್ ಫೋಯಿಮ್ ಅವರನ್ನು ಮಣಿಸುವಲ್ಲಿ ಮನು ಭಾಕೆರ್ ಯಶಸ್ವಿಯಾದರು. 235.9 ಸ್ಕೋರ್‍ಗಳೊಂದಿಗೆ ಅವರು ಈ ವಿಕ್ರಮ ಸಾಧಿಸಿದರು. ಮೆಕ್ಸಿಕೋದಲ್ಲಿ ಇತ್ತೀಚೆಗೆ ನಡೆದ ಸೀನಿಯರ್ ವಿಶ್ವ ಕಪ್‍ನಲ್ಲಿ ಚಿನ್ನ ಗೆದ್ದಿದ್ದ 16 ವರ್ಷದ ಮನು ಮೊತ್ತಂದು ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಮತ್ತೊಂದು ಬಂಗಾರದ ಪದಕ ಗಳಿಸಿ ಭಾರತ ಹೆಮ್ಮೆಪಡುವಂತೆ ಮಾಡಿದ್ದಾರೆ.
==================
ಶನಿವಾರ, ಮಾರ್ಚ್ 24, 2018
ಜ್ಯೂನಿಯರ್ ವಿಶ್ವ ಕಪ್ ನಲ್ಲಿ ಶೂಟರ್ ಮನು ಭಾಕೆರ್’ಗೆ ಚಿನ್
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ