ಮಂಗಳವಾರ, ಮಾರ್ಚ್ 27, 2018

ದುಬೈಯಲ್ಲಿ ತೆರೆದಿದೆ ಪ್ರಪ್ರಥಮ ಸಿಬ್ಬಂದಿ ರಹಿತ ಪುಸ್ತಕ ಮಳಿಗೆ

================
ದುಬೈ,ಮಾ.27 : ನೀವು ಪುಸ್ತಕ ಪ್ರಿಯರೆಂದಾದರೆ, ದುಬೈಗೆ ಭೇಟಿ ನೀಡಿದಾಗ ಅಲ್ಲಿನ ವಿನೂತನ ಪುಸ್ತಕ ಮಳಿಗೆ 'ಬುಕ್ ಹೀರೋ'ಗೆ ಭೇಟಿ ನೀಡಲೇ ಬೇಕು. ದಿನದ 24 ಗಂಟೆಯೂ ಕಾರ್ಯಾಚರಿಸುವ ಈ ಪುಸ್ತಕ ಮಳಿಗೆ ಗ್ರಾಹಕರ ಮೇಲಿನ ಪ್ರೀತಿ, ವಿಶ್ವಾಸ ಹಾಗೂ ನಂಬಿಕೆಯ ಆಧಾರದಲ್ಲಿಯೇ ಕಾರ್ಯಾಚರಿಸುತ್ತಿದೆ.
==============
ದುಬೈ ಮರೀನಾದಲ್ಲಿರುವ ಮರೀನಾ ವಾಕ್ ಪಕ್ಕದಲ್ಲಿರುವ ಈ ಪುಸ್ತಕ ಮಳಿಗೆಯಲ್ಲಿ ಯಾರೂ ಸಿಬ್ಬಂದಿಗಳಿಲ್ಲ. ಗ್ರಾಹಕರು ನೇರವಾಗಿ ಅಂಗಡಿ ಹೊಕ್ಕು, ತಮಗೆ ಬೇಕಿದ್ದಂತಹ ಪುಸ್ತಕಗಳನ್ನು ಖರೀದಿಸಿ ಅಲ್ಲಿರುವ ಡ್ರಾಪ್ ಬಾಕ್ಸ್ ಅಥವಾ ಪೆಟ್ಟಿಗೆಯೊಳಗೆ ಹಣ ಹಾಕಿ ನಂತರ ಪುಸ್ತಕದೊಂದಿಗೆ ಹೊರನಡೆದರಷ್ಟೇ ಸಾಕು. ಈ ಹಣ ಪಾವತಿ ಪೆಟ್ಟಿಗೆಯನ್ನು 'ಟ್ರಸ್ಟ್ ಬಾಕ್ಸ್' ಅಥವಾ ನಂಬಿಕೆಯ ಬಾಕ್ಸ್ ಎಂದು ಹೆಸರಿಸಲಾಗಿದೆ.
==============
ಈ ಪುಸ್ತಕ ಮಳಿಗೆಯ ಮಾಲಕ ಮೊಂಟಸೆರ್ರಟ್ ಮಾರ್ಟಿನ್ ಎಂಬವರಾಗಿದ್ದು ಅವರು ಎಮಿರೇಟ್ಸ್ ಉದ್ಯಮಿ ಮುಹಮ್ಮದ್ ಅಬ್ದುಲ್ಲಾ ಅಲ್ ಖುಬೈಸಿ ಅವರ ಜತೆ ಸೇರಿ ಇದನ್ನು ಮುನ್ನಡೆಸುತ್ತಿದ್ದಾರೆ.
============
ಗ್ರಾಹಕರು ಒಂದು ವೇಳೆ ಪುಸ್ತಕಗಳನ್ನು ಖರೀದಿಸಿ ಹಣ ನೀಡದೇ ಮರಳಿದರೆ ? ಪುಸ್ತಕ ಮಳಿಗೆ ಮಾಲಕರಿಗೆ ಈ ಬಗ್ಗೆ ಚಿಂತೆಯಿಲ್ಲ. ಹಾಗೇನಾದರೂ ಆದರೂ ನಾನು ಕೇವಲ 300 ದಿರ್ಹಂ ಕಳೆದುಕೊಳ್ಳಬಹುದು. ಸಿಬ್ಬಂದಿಗಳನ್ನು ನೇಮಿಸಿದಲ್ಲಿ ಅವರ ವೇತನ, ವಿಮೆ ಮತ್ತಿತರ ಖರ್ಚು ಇದಕ್ಕಿಂತಲೂ ಅಧಿಕವಾಗುವುದು ಎಂದು ಅವರು ಹೇಳುತ್ತಾರೆ.
============
ಮಳಿಗೆಯಲ್ಲಿನ ಪುಸ್ತಕಗಳ ಬೆಲೆ 10ರಿಂದ 20 ದಿರ್ಹಂ ತನಕ ಇದೆ. ಮಳಿಗೆಯಲ್ಲಿ 20,000ಕ್ಕೂ ಅಧಿಕ ಕಾದಂಬರಿಗಳಿವೆ. ಇಂಗ್ಲಿಷ್ ಹಾಗೂ ಅರಬಿಕ್ ಭಾಷೆಯ ಪುಸ್ತಕಗಳ ಹೊರತಾಗಿ ಇಲ್ಲಿ ಫ್ರೆಂಚ್, ಸ್ಪಾನಿಷ್, ರಷ್ಯನ್ ಹಾಗೂ ಸ್ಪೇನ್ ಭಾಷೆಗಳ ಕೃತಿಗಳೂ ಇವೆ.
===============

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ