•••••••••••••••••
ಭಾರತೀಯರಿಗೆ ‘ನದಿ’ ಬರೀ ಹರಿಯುವ ನೀರು ಮಾತ್ರವಲ್ಲ. ಆಕೆ ‘ನದೀ’ ದೇವತೆ. ಹೀಗಾಗಿ ವೇದ ವ್ಯಾಸರು ನದಿಗಳನ್ನು ವಿಶ್ವ ಮಾತರಃ ಎಂದಿದ್ದಾರೆ. ಋಗ್ವೇದದಲ್ಲಿ ನದಿಗಳನ್ನು ‘ಆಪೋ ದೇವತಾ’ ಎಂದು ಕರೆದು ಗೌರವಿಸಿದ್ದಾರೆ. ಅದು ಪಾವನ ತೀರ್ಥ. ಮೈಮನ ಶುದ್ಧಗೊಳಿಸುವ ಪವಿತ್ರ ಸಾಧನ. ಹಾಗಾಗಿ ನಮ್ಮ ಪ್ರಯಾಣಗಳೆಲ್ಲವು ತೀರ್ಥಯಾತ್ರೆ , ತೀರ್ಥಸ್ನಾನಕ್ಕೆ ಬಹು ಪ್ರಾಮುಖ್ಯತೆ.
ನಮ್ಮ ರಾಷ್ಟ್ರದ ಎಲ್ಲಾ ನದಿಗಳು, ಅಷ್ಟ ಕುಲ ಪರ್ವತಗಳಲ್ಲಿ ಜನ್ಮ ತಾಳುತ್ತವೆ. ಇಲ್ಲಿ ಕೆಲವು ವೇದ-ಪುರಾಣೋಕ್ತ ನದಿಗಳ ಪುರಾತನ ಹಾಗೂ ಇಂದಿನ ಬಳಕೆಯ ಹೆಸರುಗಳನ್ನು ನೀಡಲಾಗಿದೆ.
=========
ಹಿಮಾಲಯ
=========
“ದೇವತಾತ್ಮಾ ಹಿಮಲಯಃ” ಎಂದು ಹಿಮಾಲಯ ಪರ್ವತ ಶ್ರೇಣಿಯನ್ನು ಶಾಸ್ತ್ರಗಳು ಬಣ್ಣಿಸಿವೆ. ಹಿಮಾಲಯದಲ್ಲಿ ಜನ್ಮ ತಳೆವ ನದಿಗಳು, ಪೂರ್ವ ಹಾಗೂ ಪಶ್ಚಿಮಗಳೆರಡೂ ದಿಕ್ಕಿಗೆ ಹರಿಯುವುದು ವಿಶೇಷವಾಗಿದೆ.
============
ಪೂರ್ವಾಭಿಮುಖ ನದಿಗಳು: ಗಂಗಾ, ಯಮುನಾ, ಗೋಮತಿ, ಸರಯೂ (ಗೋಗ್ರ), ರಕ್ಷು (ರಾಮ ಗಂಗಾ) ಗಂಡಕಿ, ಕೌಶಿಕಿ (ಕೇಶಿ), ಲೋಹಿತ್ಯಾ (ಬ್ರಹ್ಮಪುತ್ರಾ)
============
ಪಶ್ಮಿಮಾಭಿಮುಖ ನದಿಗಳು : ಸರಸ್ವತಿ, ಸಿಂಧೂ, ಚಂದ್ರಭಾಗಾ (ಜೀನಬ್), ಶತ್ರುರಿ (ಸಟ್ಲೇಜ್), ವಿತಸ್ತಾ (ಝೇಲಂ) ,ಇರಾವತಿ (ರಾವಿ), ತೂಹು, ಬಹುರಾ (ರಾಸಿ), ವೃಷಧೃತಿ (ಚಿತುಗಾ), ವಿಶಾಸಾ (ಬಿಯಾಸ್), ದೇವಿಕಾ (ಡೇನ್)
========
ಅರಾವಳಿ ಅಥವಾ ಪಾರಿಯಾತ್ರ
============
ಇಲ್ಲಿ ಹುಟ್ಟುವ ಎಲ್ಲಾ ಪ್ರವಾಹಗಳು ಪಶ್ಚಿಮ ಸಮುದ್ರ ಸೇರುತ್ತವೆ. ಹಲವು ನದಿಗಳು, ಪ್ರಮುಖ ಪ್ರವಾಹಗಳಲ್ಲಿ ಒಂದಾಗಿ, ಸಮುದ್ರ ಸೇರುತ್ತವೆ. ಹಿಮಾಲಯದ ನದಿಗಳಿಗೆ ಹೋಲಿಸಿದಾಗ ಉದ್ದ ಹೆಚ್ಚೇನೂ ಇಲ್ಲವಾದರೂ, ಇವು ಹರಿಯುವ ಪಾತ್ರದ ಪರಿಸರ ಅತ್ಯಂತ ರಮಣೀಯವಾಗಿ ಕಂಗೊಳಿಸುತ್ತದೆ.
ವೇದಸ್ಮೃತಿ (ಬನಾಸ್), ವೇದವತಿ (ಬೀರಫ್), ವೃತ್ರಘ್ನ (ಉತ್ತಂಗನ), ವೇಣ್ಯ, ನಂದಿನಿ (ಸಾಬರ ಮತಿ), ಸದಾನೀರ್ (ಪಾರ್ವತಿ), ಚರ್ಮಣ್ಯತಿ (ಚಂಬಲ್), ವಿದುಶ (ಬೇಸ್), ವೇಣುಮತಿ (ಬೇತಾರ್), ಸತ್ತಾ ಅಥವಾ ಆವಂತಿ ಮೊದಲಾದವು ಅರಾವಳಿಯಿಂದ ಹುಟ್ಟುತ್ತವೆ.
======
ಋಕ್ಷ ಪರ್ವತ
==========
ಮಂದಾಕಿನಿ, ದಶಾರ್ಣ (ಧಸಾನ್), ಚಿತ್ರಕೂಟ, ತಮಸಾ (ತೋಸ್), ಪಿಪ್ಪಲಿ, ಶ್ರೇಣಿ (ದೈಸುನೇ), ಪಿಶಾಚಿಕಾ, ಕರಮೋದಾ (ಕರ್ಮನಾಶಾ), ನೀಲೋತ್ಪಲಾ, ವಿಮಲಾ (ಬೇರಾಸ್), ಚಂಚಲಾ (ಜಮ್ನಿ), ಬಾಲುವಾಹಿನಿ, ಶ್ರುತಿ ಮಿತಿ, ಶಕುಲಿ, ತ್ರಿದಿವಾ ಮೊದಲಾದ ವೇದೋಕ್ತ, ಪುರಾಣೋಕ್ತ ಪುಣ್ಯ ಪ್ರವಾಹಗಳು, ಇಲ್ಲಿಂದ ಹುಟ್ಟಿ ಹರಿಯುತ್ತವೆ.
ಇವುಗಳು ನೇರವಾಗಿ ಸಾಗರ ಸೇರುವುದಿಲ್ಲ. ಬದಲಾಗಿ ಮುಖ್ಯ ಪ್ರವಾಹಗಳೊಂದಿಗೆ ಸಂಗಮಿಸಿ ಸಂಭ್ರಮಿಸುತ್ತವೆ. ರಾಮಾಯಣಾದಿ ಇತಿಹಾಸ ಘಟನೆಗಳು, ಪುರಾಣೋಕ್ತ ವಿವಿಧ ಪ್ರಸಂಗಗಳಿಗೆ ಈ ನದಿಗಳು ಸಾಕ್ಷಿಯಾಗಿರುವುದರಿಂದ ಜನ ಮಾನಸದಲ್ಲಿ ಶ್ರದ್ಧಾ ಕೇಂದ್ರಗಳಾಗಿ ವಿಕಸಿತವಾಗಿವೆ.
==========
ವಿಂಧ್ಯ ಪರ್ವತ
=========
ವಿಂಧ್ಯ ಪರ್ವತದ ಪ್ರವಾಹಗಳು, ದಕ್ಷಿಣಾಭಿಮುಖವಾಗಿ ಪೂರ್ವ ದಿಕ್ಕಿಗೆ ಹರಿಯುವಂತೆ, ಕೆಲವು ಉತ್ತರಾಭಿಮುಖಿಯಾಗಿ ಪಶ್ಚಿಮದ ಕಡೆಗೆ ಹರಿಯುತ್ತವೆ. ಇದಲ್ಲದೆ ಸಮ ದಿಕ್ಕಿನಲ್ಲಿ ಹರಿದು ಪೂರ್ವ, ಪಶ್ಚಿಮ ಸಮುದ್ರಗಳೆರಡೂ ಸೇರುತ್ತವೆ. ಈ ದೃಷ್ಟಿಯಿಂದ ಇವು ಹಿಮಾಲಯದ ನದಿಗಳಂತೆ ವಿಶೇಷವಾಗಿವೆ. ಪಾತ್ರದಲ್ಲಿ ಹಲವು ನದಿಗಳು ಹಿಮಾಲಯದ ನದಿಗಳಂತೆ ಅಗಲವೂ, ಉದ್ದವೂ ಆಗಿವೆ.
ಪಯೋಷ್ಟೋ, ನಿಬೇಂದ್ಯ (ಸೇವೋಜ್), ತಾಪಿ, ನೀಷಧಾವತಿ ವೇಣೂ (ವೈಣ ಗಂಗಾ), ವೈತರಣೀ (ಚೇತೃಣಿ), ಕುಮದ್ವತಿ (ಪೂರ್ಣರೇಖಾ), ತೇಯಾ (ಬ್ರಹ್ಮಶ್ರೀ), ಮಹಾಗೌರೇ (ದಾಮೋದರ), ಪೂರ್ಣಶೋಣ (ಸೇನಾ), ಮಹಾನದಿ, ನರ್ಮದಾ, ಇವು ವಿಂಧ್ಯಜನ್ಯ ಪ್ರಮುಖ ನದಿಗಳಾಗಿವೆ. ನರ್ಮದೆಯು ಉತ್ತರಾಭಿಮುಖವಾಗಿ ಹರಿದು, ಗುಜರಾತ್‌ನಲ್ಲಿ ಪಶ್ಚಿಮ ಸಮುದ್ರ ಸೇರುತ್ತಾಳೆ. ಜಗತ್ತಿನಲ್ಲಿ ದಕ್ಷಿಣದಿಂದ ಉತ್ತರಕ್ಕೆ ಹರಿಯುವ ಏಕಮಾತ್ರ ನದಿ ಇದಾಗಿದೆ.
========
ಸಹ್ಯ ಪರ್ವತ ನದಿಗಳು
=============
ಭೀಮರಥ (ಭೀಮಾ), ಕೃಷ್ಣವೇಣ್ಯ (ಕೃಷ್ಣ) ವೇಣ್ಯ (ವೇಣೂ), ತುಂಗಾ (ಪಂಪಾ), ಭದ್ರಾ, ಕಾಳಿ, ಲೋಕಪಾವನೆ, ಸುಪ್ರಿಯೋಗ (ಹಗರಿ), ಬಾಹ್ಯಾ (ವರದಾ), ಕಾವೇರಿ ಮುಂತಾದವು ಪ್ರಮುಖ ನದಿಗಳು. ಈ ಎಲ್ಲಾ ನದಿಗಳು ದಕ್ಷಿಣಾಭಿಮುಖವಾಗಿಯೇ ಹರಿದು, ಪೂರ್ವ ಸಮುದ್ರ ಸೇರುತ್ತವೆ.
ತನ್ನ ಪ್ರವಾಹದ ದಿಕ್ಕನ್ನೇ ಸರಕ್ಕನೇ ಬದಲಾಯಿಸಿ ಸಂಪೂರ್ಣ ಹಿಂತಿರುಗಿ ಸ್ವಲ್ಪ ದೂರ ಹರಿದು ಮತ್ತೆ ಸರಿ ದಿಕ್ಕಿಗೆ ಚಲಿಸುವ ‘ಪಶ್ಚಿಮ ವಾಹಿನಿ’ ಹೆಸರಿನ ಮಹಾ ಕೌತಕವನ್ನು ಹೋಲುವ ‘ಕಾವೇರಿ’ ಈ ಭಾಗದ ಪ್ರಮುಖ ಜೀವನದಿ. ಈ ರೀತಿ ವಿಲಕ್ಷಣ ತಿರುವಿನ ಪ್ರವಾಹ ಕಾವೇರಿ ಹೊರತು ಇನ್ನಾವ ನದಿಗೂ ಇಲ್ಲ!
==========
ಮಲಯ ಪರ್ವತ
==========
ಕೃತಮಾಲಾ (ಬೈಗಾಯೀ) ತಾಮ್ರ ಪರ್ಣಿ, ಪುಷ್ಪಜಾ (ಪಂಬೇಲ್) ಸತ್ಫಲಾವತಿ, ಪೂರ್ಣಾ (ಪೇರಿಯಾಲ್) ಮೊದಲಾದ ನದಿಗಳು, ‘ಮಲಯ’ ಪ್ರದೇಶದ ಪುಣ್ಯ ತೀರ್ಥಗಳೆಂದು ಹೆಸರಾಗಿವೆ. ಇವೆಲ್ಲವೂ ದಕ್ಷಿಣಾಭಿಮುಖವಾಗಿ, ಪಶ್ಚಿಮ ಸಮುದ್ರವನ್ನು ಸೇರುತ್ತವೆ. ನೈಸರ್ಗಿಕ ಗಿಡ ಮೂಲಿಕಾ ಪ್ರದೇಶಗಳಲ್ಲಿ ಹರಿದು ಬರುವುದು ಇವುಗಳ ವಿಶೇಷವಾಗಿದೆ. ಬಹು ಅಪರೂಪವಾದ ದೇವತಾರ್ಚನ ವಿಧಿಗಳು, ಇಲ್ಲಿ ರೂಢಿಗತವಾಗಿವೆ. ಆಯುರ್ವೇದಾದಿ ಔಷಧಿ ನಗಳ ದೇವತೆ ‘ಧನ್ವಂತರಿ’ಯ ಆವಾಸಸ್ಥಾನ ಮಲಯ ಪರ್ವತವಾಗಿದ್ದು, ಆತನ ದೇವಾಲಯ ಸಹ ಇಲ್ಲಿರುವುದು ವಿಶೇಷ. (ಕಾಲಟಿಯಿಂದ 10 ಕಿ.ಮಿ ದೂರ)
===========
ಮಹೇಂದ್ರ ಪರ್ವತ
=============
ತ್ರಿಸಾಮಾ, ಋಷ ಕುಲ್ಯಾ, ಇಕ್ಷುಲಾ, ವೇಗವತಿ, ಲಾರಿ ಗೂಲಿನ, ಮಂಶಾಧಾರಾ, ಮಹೇಂದ್ರ ತನಯಾ, ಮುಂತಾದ ನದಿಗಳು ಹುಟ್ಟುತ್ತವೆ. ಉನ್ನತವಾದ ಜಲಪಾತಗಳನ್ನು ಅವು ಸೃಷ್ಪಿಸುತ್ತವೆ. ಭೋರ್ಗರತ ಇವುಗಳ ಪ್ರಮುಖ ಲಕ್ಷಣ. ಅನೇಕ ಋಷಿಗಳು ಇವುಗಳ ತೀರದಲ್ಲಿ ತಪೋನಿರತರಾಗಿದ್ದು, ಆಶ್ರಮ ನಿರ್ಮಿಸಿಕೊಂಡು ಮಂತ್ರ ದ್ರಷ್ಟಾರರೆನಿಸಿದ್ದರು.
=========
ಶಕ್ತಿ ಪರ್ವತ
==========
ಋಷಕಾ, ಸುಕುಮಾರಿ, ಮದಂಗಾ, ಮಂದವಾಹಿನಿ, ಕೃಪಾಮಾಶಿನಿ ಹಾಗೂ ವಾಮನ ಇಲ್ಲಿನ ಪ್ರಮುಖ ನದಿಗಳು, ಕಾಲಾನುಕ್ರಮದಲ್ಲಿ ಶಕ್ತಿ ಪರ್ವತ ಧಾರೆಗಳು, ವಿವಿಧ ಹೆಸರಿನಿಂದ ಕರೆಯಲ್ಪಟ್ಟಿವೆ. ಅದೆಷ್ಟೋ ನದಿಗಳು, ಇಂಗಿ ಹೋಗಿವೆ. ಶಕ್ತಿ ಪರ್ವತದ ಧಾರೆಗಳು ಜಲಚರಗಳ ವಿಶೇಷ ಆವಾಸಸ್ಥಾನವಾಗಿವೆ. ಉತ್ಕಲ ಪ್ರದೇಶದಲ್ಲಿ ಸಮುದ್ರ ಸೇರುವ ದೊಡ್ಡ ನದಿಗಳಿಗೆ ಇವು ಉಪನದಿಗಳಾಗಿವೆ.
=============
ಭಾನುವಾರ, ಮಾರ್ಚ್ 25, 2018
ಭಾರತದ ನದಿಗಳು
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ