*##ಮಾಹಿತಿ ವೇದಿಕೆ##*
*ಏಷ್ಯನ್ ಕುಸ್ತಿ; ಕೌರ್ ಚಿನ್ನ ದಾಖಲೆ, ಸಾಕ್ಷಿಗೆ ಬೆಳ್ಳಿ*
##################
*ಹೊಸದಿಲ್ಲಿ: ಕಿರ್ಗಿಸ್ತಾನ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಹಿರಿಯರ ಕುಸ್ತಿ ಚಾಂಪಿಯನ್‌ಶಿಪ್ಸ್‌ನಲ್ಲಿ ಭಾರತದ ನವಜೋತ್ ಕೌರ್ ಚಿನ್ನದ ಪದಕ ಗೆದ್ದಿದ್ದಾರೆ.*
##############
*ಈ ಮೂಲಕ ಏಷ್ಯನ್ ಹಿರಿಯರ ಕುಸ್ತಿ ಚಾಂಪಿಯನ್‌ಶಿಪ್ಸ್‌ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಕುಸ್ತಿಪಟು ಎಂಬ ಕೀರ್ತಿಗೆ ಪಾತ್ರವಾಗಿದ್ದಾರೆ.*
############
*65 ಕೆ.ಜಿ ಫ್ರಿಸ್ಟೈಲ್ ವಿಭಾಗದಲ್ಲಿ ಕೌರ್, ಫೈನಲ್‌ನಲ್ಲಿ ಜಪಾನ್‌ನ ಮಿಯಾ ಇಮಾಯ್ ವಿರುದ್ಧ 9-1ರ ಅಂತರದ ಗೆಲುವು ದಾಖಲಿಸಿ ಇತಿಹಾಸ ನಿರ್ಮಿಸಿದರು.*
##############
*ಇದಕ್ಕೂ ಮೊದಲು 62 ಕೆ.ಜಿ ಫ್ರಿಸ್ಟೈಲ್ ವಿಭಾಗದಲ್ಲಿ ಭಾರತದ ಸಾಕ್ಷಿ ಮಲಿಕ್ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದರು. 2016 ರಿಯೋ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆಯಾಗಿರುವ ಸಾಕ್ಷಿ, ಕಂಚಿಗಾಗಿನ ಹೋರಾಟದಲ್ಲಿ ಕಜಕಿಸ್ತಾನದ ಅಯ್ಯುಲಿಯಮ್ ಕ್ಯಾಸಿಮೊವಾ ವಿರುದ್ಧ 10-7ರ ಅಂತರದ ಗೆಲುವು ದಾಖಲಿಸಿದರು.*
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ