ಭಾನುವಾರ, ಮಾರ್ಚ್ 25, 2018

ರಸ ಪ್ರಶ್ನೆಗಳು ಆಯ್ದ ಪ್ರಶ್ನೋತ್ತರ ಉತ್ತರ ಸಹಿತ

ರಸಪ್ರಶ್ನೆ
========={=
೧.           ಭಾರತದಲ್ಲಿರುವ ಅತಿ ದೊಡ್ಡ ದೇವಾಲಯ ಸಂಕೀರ್ಣ ಯಾವುದು?
೨.           ಸಮುದ್ರತಳದಲ್ಲಿರುವ ಅತಿ ದೊಡ್ಡ ಪರ್ವತಶ್ರೇಣಿ ಯಾವುದು?
೩.           ಭಾರತದ ರಾಷ್ಟ್ರಾಧ್ಯಕ್ಷರನ್ನು ಯಾರಾರು ಚುನಾಯಿಸುತ್ತಾರೆ?
೪.           ‘ಚೌಸಾ’ ಯುದ್ಧ ಯಾರಾರ ನಡುವೆ ನಡೆಯಿತು?
೫.           ಸ್ವತಂತ್ರಭಾರತದ ಮೊತ್ತಮೊದಲ ಕಾನೂನುಮಂತ್ರಿ ಯಾರು?
೬.           ಭಾರತದಲ್ಲಿ ಪ್ರತಿ ವ್ಯಕ್ತಿಯ ಸರಾಸರಿ ವರಮಾನವನ್ನು ಮೊತ್ತಮೊದಲು ಅಂದಾಜು ಮಾಡಿದ ಅರ್ಥಶಾಸ್ತ್ರಜ್ಞ ಯಾರು?
೭.           ‘ಆಗಾಖಾನ್ ಟ್ರೋಫಿ’ ಯಾವ ಕ್ರೀಡೆಗೆ ಸಂಬಂಧಿಸಿದ್ದು?
೮.           ದೇಶದಲ್ಲಿ ಎಲ್ಲೆಡೆ ಜನಪ್ರಿಯವಾಗಿರುವ ‘ಹಂಸ-ದಮಯಂತಿ’ ಚಿತ್ರ ಯಾರು ರಚಿಸಿದ್ದು?
೯.           ಕೋಲಾರದ ಚಿನ್ನದ ಗಣಿ ಯಾವ ದಿವಾನರ ಕಾಲದಲ್ಲಿ ಸ್ಥಾಪಿಸಲ್ಪಟ್ಟಿತು?
೧೦.        ‘ಆಲಿಯಂ ಸೆಪಾ’ – ಇದು ಯಾವ ದಿನಬಳಕೆವಸ್ತುವಿನ ವೈಜ್ಞಾನಿಕ ಹೆಸರು?
========

ಉತ್ತರಗಳು

೧.ದೆಹಲಿಯಲ್ಲಿರುವ ‘ಅಕ್ಷರಧಾಮ’
೨. ದಕ್ಷಿಣ ಅಮೆರಿಕಕ್ಕೂ ಆಫ್ರಿಕಕ್ಕೂ ನಡುವೆ ಅಟ್ಲಾಂಟಿಕ್ ಸಾಗರದ ತಳದಲ್ಲಿರುವ ಪರ್ವತಶ್ರೇಣಿ
೩. ಲೋಕಸಭೆ, ರಾಜ್ಯಸಭೆ ಮತ್ತು ರಾಜ್ಯ ವಿಧಾನಸಭೆಗಳ ಸದಸ್ಯರು
೪. ಹುಮಾಯೂನ್ ಮತ್ತು ಶೇರ್‌ಖಾನ್
೫.ಡಾ|| ಬಿ.ಆರ್. ಅಂಬೇಡ್ಕರ್
೬.ದಾದಾಭಾಯಿ ನವರೋಜಿ
೭. ಹಾಕಿ
೮. ರಾಜಾ ರವಿವರ್ಮ
೯. ಕೆ. ಶೇಷಾದ್ರಿ ಅಯ್ಯರ್
೧೦.ಈರುಳ್ಳಿ
=============
೧.  ಗಗನಯಾತ್ರಿ ಸುನೀತಾ ವಿಲಿಯಮ್ಸ್ ಮಾಡಿದ ದಾಖಲೆ ಏನು?
೨.ಬೆಣಚುಕಲ್ಲು ಗುಂಡಗೆ ನುಣಪಾಗಿ ಇರುವುದು ಏಕೆ?
೩.ಶರೀರ ಸವೆಯುವುದಕ್ಕೆ ಆರಂಭವಾಗುವುದು ಯಾವಾಗ?
೪. ಸಿಡಿಮದ್ದಿನಲ್ಲಿ ಬಳಕೆಯಾಗುವ ರಾಸಾಯನಿಕ ಯಾವುದು?
೫.ಇಂಗ್ಲೆಂಡನ್ನು ‘ಸೂರ್ಯ ಮುಳುಗದ ನಾಡು’ ಎನ್ನುತ್ತಾರೆ, ಹಾಗೆ ‘ಸೂರ್ಯೋದಯದ ನಾಡು’ ಎನಿಸಿರುವ ದೇಶ ಯಾವುದು?
೬.‘ಕೈಪಿಲ್ಲಿ ಶಂಕರ ಭಟ್ಟಾದ್ರಿಪಾದ’ – ಇದು ಯಾರ ಹುಟ್ಟುಹೆಸರು?
೭. ‘ಮಾರಿ ಕುಣಿತ’ ಹೆಚ್ಚಾಗಿ ಯಾವ ಜಿಲ್ಲೆಗಳಲ್ಲಿ ಪ್ರಚಲಿತವಾಗಿದೆ?
೮.ಕೇಂದ್ರಸರ್ಕಾರದ ಮೊತ್ತಮೊದಲ ಮಹಿಳಾಸಚಿವೆ ಯಾರು?
೯. ‘ಭುವನ ವಿಜಯ’ – ಇದು ಯಾವುದರ ಹೆಸರು?
೧0.  ಬೆಂಗಳೂರಿನಿಂದ ೫೮ ಕಿ.ಮೀ. ದೂರದಲ್ಲಿರುವ ಸಾವನದುರ್ಗ ಯಾರ ಅಡಗುದಾಣವಾಗಿತ್ತು?
========
ಉತ್ತರಗಳು
==========
೧.ಅವಿಚ್ಛಿನ್ನವಾಗಿ ೧೯೫ ದಿನಗಳ ಕಾಲ ಬಾಹ್ಯಾಕಾಶದಲ್ಲಿ ಇದ್ದ ಮಹಿಳೆ.
೨.ಸತತವಾಗಿ ನೀರು ಅಪ್ಪಳಿಸುತ್ತಿರುವುದರಿಂದ.
೩.  ಹುಟ್ಟಿದ ಕ್ಷಣದಿಂದಲೇ!
೪. ಪೊಟ್ಯಾಸಿಯಂ ನೈಟ್ರೇಟ್.
೫. ಜಪಾನ್.
೬.ಆದಿಶಂಕರಾಚಾರ್ಯ.
೭. ಮಂಡ್ಯ, ಮೈಸೂರು.
೮.  ವಿಜಯಲಕ್ಷ್ಮಿ ಪಂಡಿತ್.
೯. ಕೃಷ್ಣದೇವರಾಯನ ಆಸ್ಥಾನ.
೧೦.ಕೆಂಪೇಗೌಡ.
==========
೧. ಕುಕ್ಕೆ ಸುಬ್ರಹ್ಮಣ್ಯ ಯಾವ ಬೆಟ್ಟ ಸಾಲಿನ ನೆರೆಯಲ್ಲಿದೆ?
೨. ಕಶ್ಮೀರದ ಬಾರಾಮುಲ್ಲಾ-ಜಮ್ಮು ರೈಲುಸೇತುವೆಯ ವೈಶಿಷ್ಟ್ಯವೇನು?
೩ ಪ್ರಾಚ್ಯಜಗತ್ತಿನಲ್ಲಿ ಅತಿ ಪ್ರಾಚೀನ ಕಾಲದಿಂದ ಬಳಕೆಯಲ್ಲಿರುವ ಸಂಭಾರಪದಾರ್ಥ ಯಾವುದು?
೪ ಉಜ್ಜಯಿನಿ ಯಾವ ರಾಜ್ಯದ ರಾಜಧಾನಿಯಾಗಿತ್ತು?
೫. ಬುದ್ಧನ ಮೊದಲ ಸಾರ್ವಜನಿಕ ಬೋಧನೆ ಯಾವ ಹೆಸರನ್ನು ತಳೆದಿದೆ?
೬.‘ಸಿಂಹನೃತ್ಯ’ ಯಾವ ಪ್ರದೇಶದಲ್ಲಿ ಪ್ರಚಲಿತವಿದೆ?
೭.ಖಗ್ರಾಸ ಸೂರ್ಯಗ್ರಹಣದ ಗರಿಷ್ಠ ಅವಧಿ ಎಷ್ಟು?
೮.   ವರ್ಷದ ಅತಿ ಕಡಮೆ ಅವಧಿ ಹಗಲು ಇರುವ ದಿನಾಂಕ ಯಾವುದು?
೯. ಸೂರ್ಯನಲ್ಲಿ ಅಧಿಕ ಪ್ರಮಾಣದಲ್ಲಿ ಇರುವ ಅನಿಲ ಯಾವುದು?
೧೦. ಏಳುನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ ವಿಶ್ವದಾಖಲೆ ಮಾಡಿರುವ ನಟ ಯಾರು?

ಉತ್ತರಗಳು
============
೧.ಬಿಸಿಲೆ ಘಾಟ್ ಮತ್ತು ಕುಮಾರಪರ್ವತ.
೨.  ಜಗತ್ತಿನಲ್ಲಿಯೆ ಅತಿ ಎತ್ತರದ ರೈಲು ಸೇತುವೆ: ಚೀನಾಬ್ ನದಿ ದಾಟಲು.
೩. ಲವಂಗ.
೪. ಅವಂತಿದೇಶ.
೫. ಧಮ್ಮಚಕ್ಕಪ್ಪಬತ್ತನಸುತ್ತ.
೬. ಹೊನ್ನಾವರ, ಉತ್ತರಕನ್ನಡ ಜಿಲ್ಲೆ.
೭.  ಸುಮಾರು ೮ ನಿಮಿಷ.
೮. ಡಿಸೆಂಬರ್ ೨೧ (ಮಕರ ಸಂಕ್ರಮಣ).
೯. ಜಲಜನಕ (ಶೇ. ೭೩ರಷ್ಟು).
೧೦. ಮಲಯಾಳಂ ಚಿತ್ರನಟ ಪ್ರೇಮ್ ನಜೀರ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ