================
2017ನೇ ಸಾಲಿನ ವೈದ್ಯಕೀಯ ನೊಬೆಲ್ ಪ್ರಶಸ್ತಿಗೆ ಅಮೆರಿಕ ಮೂಲದವರಾದ ಜೆಫ್ರಿ ಹಾಲ್, ಮೈಕೆಲ್ ರೋಸ್ಬಾಶ್ ಮತ್ತು ಮೈಕೆಲ್ ಡಬ್ಲ್ಯೂ. ಯಂಗ್ ಈ ಸಾಲಿನ ವೈದ್ಯಕೀಯ ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
> ಜೀವಿಗಳ ಆಂತರಿಕ ಜೈವಿಕ ಗಡಿಯಾರದ ಕುರಿತ ಕೈಗೊಂಡ ಸಂಶೋಧನೆಗೆ ಈ ಪ್ರಶಸ್ತಿ ನೀಡಲಾಗಿದ್ದು, ಇವರ ಸಂಶೋಧನೆಗೆ 'ಸರ್ಕಾಡಿಯನ್ ಗಡಿಯಾರ' ಎಂದು ಹೆಸರಿಸಲಾಗಿದೆ.
=================
`ದಿ ರಿಮೇನ್ಸ್ ಆಫ್ ದಿ ಡೇ’ ಕಾದಂಬರಿ ಖ್ಯಾತಿಯ ಬ್ರಿಟಿಷ್ ಲೇಖಕ ಕಜುವೊ ಇಶಿಗುರೊ ಅವರಿಗೆ 2017ನೇ ಸಾಲಿನ ಪ್ರತಿಷ್ಠಿತ ಸಾಹಿತ್ಯ ನೊಬೆಲ್ ಪ್ರಶಸ್ತಿ ಲಭಿಸಿದೆ.
================
ಪರಮಾಣುಗಳ ಮಟ್ಟದಲ್ಲಿ ಕೆಲಸ ಮಾಡುವ ಮಾನವ ಜೀವಕೋಶಗಳ ವೀಕ್ಷಣೆಯ ಸಂಶೋಧನೆಗೆ 2017ನೇ ಸಾಲಿನ ರಸಾಯನಿಕ ವಿಭಾಗದ ನೊಬೆಲ್ ಪ್ರಶಸ್ತಿ ಸ್ವಿಟ್ಜರ್ಲಾಂಡ್ ನ ಸಂಶೋಧಕ ಜಾಕ್ವೆಸ್ ಡುಬೋಶೆಟ್, ಅಮೆರಿಕಾದ ಜೋಕಿಮ್ ಫ್ರಾಂಕ್ ಮತ್ತು ಬ್ರಿಟನ್ ನ ರಿಚರ್ಡ್ ಹೆಂಡರ್ಸನ್ ಅವರಿಗೆ ಸಿಕ್ಕಿದೆ.
================
2018ನೇ ಸಾಲಿನ 90ನೇ ಆವೃತ್ತಿಯ ಆಸ್ಕರ್ ಪ್ರಶಸ್ತಿ ಪ್ರಕಟವಾಗಿದ್ದು ನಾಮಾಂಕಿತವಾದ 13 ಚಿತ್ರಗಳಲ್ಲಿ, ದಿ ಶೇಪ್ ಆಫ್ ವಾಟರ್ ಸರ್ವೋತ್ತಮ ಚಲನಚಿತ್ರ ಪ್ರಶಸ್ತಿ ಪಡೆದುಕೊಂಡಿದೆ.
=================
'ಗುರುತ್ವ ತರಂಗ'ಗಳ ಅನ್ವೇಷಣೆಗೆ 2017ನೇ ಸಾಲಿನ ಭೌತಶಾಸ್ತ್ರ ನೊಬೆಲ್ ಪ್ರಶಸ್ತಿ ಅಮೆರಿಕಾದ ಭೌತ ವಿಜ್ಞಾನಿಗಳಾದ ರೈನರ್ ವೆಯಿಸ್, ಬ್ಯಾರಿ ಬ್ಯಾರಿಶ್ ಮತ್ತು ಕಿಪ್ ಥಾರ್ನೆ ಅವರಿಗೆ ಸಂದಿದೆ.
============
ಈ ಗುರುತ್ವ ಅಲೆಗಳ ಅನ್ವೇಷಣೆಯಲ್ಲಿ ಇಬ್ಬರು ಭಾರತೀಯ ವಿಜ್ಞಾನಿಗಳಾದ ದಿವಂಗತ ಸಿ.ವಿ.ವಿಶ್ವೇಶ್ವರ ಮತ್ತು ಸಂಜೀವ್ ಧುರಂಧರ್ ಪಾಲ್ಗೊಂಡಿದ್ದರು ಎಂಬುದು ಹೆಮ್ಮೆಯ ಸಂಗತಿ.
===========
ಶನಿವಾರ, ಮಾರ್ಚ್ 24, 2018
IMPORTANT POINTS
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ