J S ರಜಪೂತ (J S Rajput)
=========
UNESCO ದ Executive Board ಗೆ ಭಾರತ ಪ್ರತಿನಿಧಿಯಾಗಿ, ಮಾಜಿ NCERT ನಿರ್ದೇಶಕ "ಪ್ರೊಫೆಸರ್ J S ರಜಪೂತ"ರನ್ನು ನಾಮನಿರ್ದೇಶನ ಮಾಡಲು ಭಾರತ ಸರ್ಕಾರ ನಿರ್ಧರಿಸಿದೆ. ಪ್ರೊಫೆಸರ್ J S ರಜಪೂತ ರವರು ಯುನೆಸ್ಕೋ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹೆಚ್ಚು ಅನುಭವ ಹೊಂದಿರುವ ಅತ್ಯುತ್ತಮ ಶಿಕ್ಷಣತಜ್ಞರಾಗಿದ್ದಾರೆ. 1994 ರಲ್ಲಿ ನ್ಯಾಷನಲ್ ಕೌನ್ಸಿಲ್ ಫಾರ್ ಟೀಚರ್ ಎಜುಕೇಷನ್ (NCTE) ಯನ್ನು ಸ್ಥಾಪಿಸಿದಾಗ, ಇವರು ಈ ಕೌನ್ಸಿಲ್ನ ಸಂಸ್ಥಾಪಕ ಅಧ್ಯಕ್ಷರಾಗಿದ್ದರು. National Council of Educational Research and Training (NCERT) ಗೆ 1999 ರಲ್ಲಿ ನಿರ್ದೇಶಕರಾಗಿ ನೇಮಕವಾದರು. UNESCO ದ ನೀತಿಗಳನ್ನು ಮತ್ತು ಕಾರ್ಯಕ್ರಮಗಳನ್ನು ರೂಪಿಸುವಲ್ಲಿ ಮತ್ತು ಪರಿಶೀಲಿಸುವಲ್ಲಿ ಈ ಪ್ರತಿನಿಧಿಯು ಪ್ರಮುಖವಾದಂತಹ ಪಾತ್ರವನ್ನು ವಹಿಸುತ್ತಾರೆ. ಉದಾ : ಶಿಕ್ಷಣ, ನೈಸರ್ಗಿಕ ವಿಜ್ಞಾನ, ಸಾಮಾಜಿಕ ವಿಜ್ಞಾನ, ಮಾನವ ವಿಜ್ಞಾನ, ಸಂಸ್ಕೃತಿ, ಸಂವಹನ ಮತ್ತು ಮಾಹಿತಿ, ಇತ್ಯಾದಿ.
==========
UNESCO ದ Executive Board ಕುರಿತು.
==========
> ಇದು ನಾಲ್ಕು ವರ್ಷಗಳ ಅಧಿಕಾರಾವಧಿ ಮತ್ತು 58 ಸೀಟುಗಳನ್ನು ಹೊಂದಿದೆ.
> ಯುನೆಸ್ಕೋದ ಸಾಂವಿಧಾನಿಕ ಅಂಗಗಳಲ್ಲಿ ಎಕ್ಸಿಕ್ಯುಟಿವ್ ಬೋರ್ಡ್ ಒಂದಾಗಿದೆ ಮತ್ತು ಜನರಲ್ ಕಾನ್ಫರೆನ್ಸ್ ಇದನ್ನು ಚುನಾಯಿಸುತ್ತದೆ.
> Executive Board ವು UNESCO ದ ಕಾರ್ಯಗಳನ್ನು ಮತ್ತು ಬಜೆಟ್ ಅಂದಾಜುಗಳನ್ನು ಪರಿಶೀಲಿಸುತ್ತದೆ.
======
ಸಂರಕ್ಷಿತ ಪ್ರದೇಶ ಪರವಾನಗಿ (Protected area permit)
===========
ಪ್ರವಾಸಿಗರಿಗೆ ಗಡಿ ಪ್ರದೇಶಗಳನ್ನು ಪ್ರವೇಶಿಸಲು ಅವಕಾಶ ನೀಡಲು "ಸಂರಕ್ಷಿತ ಪ್ರದೇಶ ಪರವಾನಗಿ" (ಪಿಪಿಪಿ)ಯನ್ನು ನೀಡಲು ಕೇಂದ್ರ ಗೃಹ ಸಚಿವಾಲಯವು ಯೋಜಿಸಿದೆ. ಅರುಣಾಚಲ ಪ್ರದೇಶ, ಹಿಮಾಚಲ ಪ್ರದೇಶ, ಸಿಕ್ಕಿಂ, ಉತ್ತರಾಖಂಡ್, ನಾಗಾಲ್ಯಾಂಡ್, ಮಣಿಪುರ ಮತ್ತು ಪ್ರವಾಸೋದ್ಯಮ ಸಚಿವಾಲಯಗಳು ಕೇಂದ್ರಕ್ಕೆ ಹಲವು ಬಾರಿ ಮನವಿಗಳನ್ನು ಮಾಡಿದ್ದವು.
============
ಏನಿದು...?
==========
Under the Foreigners (Protected Areas) Order, 1958 ಅಡಿಯಲ್ಲಿ, ರಾಜ್ಯಗಳ ಗಡಿ ಮತ್ತು ಅಂತರಾಷ್ಟ್ರೀಯ ಗಡಿಯ ನಡುವೆ ಇರುವ ಎಲ್ಲಾ ಪ್ರದೇಶಗಳನ್ನು ಸಂರಕ್ಷಿತ ಪ್ರದೇಶಗಳಾಗಿ ಘೋಷಿಸಲಾಗಿದೆ. ಉದಾ : ಸಂರಕ್ಷಿತ ಗಡಿ ಪ್ರದೇಶಗಳು : ಅರುಣಾಚಲ ಪ್ರದೇಶ, ಮಣಿಪುರ, ಮಿಜೋರಾಂ, ನಾಗಾಲ್ಯಾಂಡ್ ಮತ್ತು ಸಿಕ್ಕಿಂ, ಹಿಮಾಚಲ ಪ್ರದೇಶ, ರಾಜಸ್ಥಾನ, ಉತ್ತರಾಖಂಡ್ ಮತ್ತು ಜಮ್ಮು ಮತ್ತು ಕಾಶ್ಮೀರದ ಕೆಲವು ಭಾಗಗಳು. ಸಿಕ್ಕಿಂನ ಕೆಲವು ಭಾಗಗಳು ಸಂರಕ್ಷಿತ ಪ್ರದೇಶದ ಆಳ್ವಿಕೆಗೆ ಒಳಗಾಗುತ್ತವೆ ಮತ್ತು ಉಳಿದ ಭಾಗಗಳು ನಿರ್ಬಂಧಿತ ಪ್ರದೇಶದ ಆಳ್ವಿಕೆಗೆ ಒಳಗಾಗುತ್ತವೆ.
========
ಕಾರಣ..?
=======
ದೇಶದ ರಕ್ಷಣೆ, ಭದ್ರತೆಗಳ ಉದ್ದೇಶದಿಂದ ವಿದೇಶಿಯರನ್ನು ಇಂತಹ ಪ್ರದೇಶಗಳಿಗೆ ಅನುಮತಿಸುವುದಿಲ್ಲ.
============
"ಪ್ರಿಂಟ್ ಬೈನಾಲೆ ಇಂಡಿಯಾ 2018"(‘Print Biennale India 2018’)
===========
ಇದು ಇತ್ತೀಚೆಗೆ ನವದೆಹಲಿಯಲ್ಲಿ ನಡೆದ "ಗ್ರಾಫಿಕ್ ಪ್ರಿಂಟ್ಸ್ನ"(Graphic Prints ) ಮೊದಲ ಅಂತರರಾಷ್ಟ್ರೀಯ ಪ್ರದರ್ಶನವಾಗಿದೆ. ಇದು ಭಾರತದಲ್ಲಿ ನಡೆದ ಮೊದಲ ಪ್ರದರ್ಶನವಾಗಿದೆ. "ಲಲಿತ್ ಕಲಾ ಅಕಾಡೆಮಿ" ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. ಅಮೇರಿಕಾ, ಯುಕೆ, ಶ್ರೀಲಂಕಾ, ಇಟಲಿ, ಮೆಕ್ಸಿಕೋ, ಚೀನಾ, ಇಸ್ರೇಲ್, ಸ್ವೀಡೆನ್, ಲಿಥುವೇನಿಯಾ, ಪೋಲೆಂಡ್, ಅರ್ಜೆಂಟೈನಾ, ಗ್ರೀಸ್, ನೇಪಾಳ, ಬಾಂಗ್ಲಾದೇಶ, ಮತ್ತು ಮಾರಿಷಸ್ ದೇಶಗಳ ಪ್ರತಿಭೆಗಳು ಭಾಗವಹಿಸಿದ್ದರು.
========
ಲಲಿತ್ ಕಲಾ ಅಕಾಡೆಮಿ ಕುರಿತು.
========
ಲಲಿತ ಕಲಾ ಅಕಾಡೆಮಿ ಅಥವಾ ನ್ಯಾಷನಲ್ ಅಕಾಡೆಮಿ ಆಫ್ ಆರ್ಟ್ ಭಾರತದ ಲಲಿತ ಕಲೆಗಳ ರಾಷ್ಟ್ರೀಯ ಅಕಾಡೆಮಿಯಾಗಿದೆ. ಇದು ಸ್ವಾಯತ್ತ ಸಂಸ್ಥೆಯಾಗಿದೆ. ಭಾರತೀಯ ಕಲೆಯನ್ನು ಉತ್ತೇಜಿಸಲು ಮತ್ತು ಪ್ರಚಾರ ಮಾಡಲು 1954 ರಲ್ಲಿ ಭಾರತ ಸರ್ಕಾರವು "ಲಲಿತ್ ಕಲಾ ಅಕಾಡೆಮಿ"ಯನ್ನು ನವದೆಹಲಿಯಲ್ಲಿ ಸ್ಥಾಪಿಸಿತು.
==========
> ಪ್ರಧಾನ ಕಚೇರಿ : ದೆಹಲಿ.
> ಸ್ಥಳ : ನವ ದೆಹಲಿ.
> ಸ್ಥಾಪನೆ : 11 ಮಾರ್ಚ್ 1954.
========
ಮಂಗಳವಾರ, ಮಾರ್ಚ್ 27, 2018
KAS IAS IPS PSI important POINTS
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ