*##ಮಾಹಿತಿ ವೇದಿಕೆ##*
*ನಿಮಗಿದು ಗೊತ್ತಿರಲಿ*
#########
*ಪಾವಗಡದಲ್ಲಿ ಸೂರ್ಯ ಶಿಕಾರಿ: ಭರದ ನಾಡಲ್ಲಿ ಭರಪೂರ ಸೌರ ವಿದ್ಯುತ್*
################
*ವಿಶ್ವದಲ್ಲೇ ಅತಿ ದೊಡ್ಡ ಸೋಲಾರ್ ಪಾರ್ಕ್ ನಿರ್ಮಾಣವಾಗುವ ಮೂಲಕ ತುಮಕೂರುಜಿಲ್ಲೆಯ ಪಾವಗಡ ತಾಲೂಕು ಪ್ರಪಂಚದ ಭೂಪಟದಲ್ಲಿ ಜಗಮಗಿಸುತ್ತಿದೆ. ಪಾವಗಡ ತಾಲೂಕಿನ ನಾಗಲಮಡಿಕೆ ಹೋಬಳಿಯ 13 ಸಾವಿರ ಎಕರೆ ಪ್ರದೇಶದಲ್ಲಿ ಸೋಲಾರ್ ಪಾರ್ಕ್ ನಿರ್ಮಾಣವಾಗುವ ಮೂಲಕ ರಾಜ್ಯದ ಗಡಿ ಪಾವಗಡದಲ್ಲಿ ಜನಜೀವನ ಸುಧಾರಿಸುವ ಹೊಸ ಭರವಸೆ ಮೂಡಿದೆ. ಆಂಧ್ರಪ್ರದೇಶಕ್ಕೆ ಹೊಂದಿಕೊಂಡಿರುವ ಈ ತಾಲೂಕು ಕಳೆದ 40 ವರ್ಷಗಳಿಂದ ಶಾಶ್ವತವಾಗಿ ಬರಗಾಲಕ್ಕೆ ತುತ್ತಾಗಿದೆ. ಒಂದು ಕಾಲದಲ್ಲಿ ಶೇಂಗಾ ಬೆಳೆ ಯತೇಚ್ಛವಾಗಿ ಬೆಳೆಯುತ್ತಿದ್ದ ಇಲ್ಲಿ ನೂರಾರು ಎಣ್ಣೆ ಮಿಲ್‌ಗಳಿದ್ದವು. ಕಾಲಾನಂತರದಲ್ಲಿ ಮಳೆಯ ಕೊರತೆಯಿಂದಾಗಿ ಬರ ಆವರಿಸಿದ್ದು, ನೂರಾರು ಎಕರೆ ಜಮೀನಿದ್ದವರೂ ಉದ್ಯೋಗಕ್ಕಾಗಿ ಊರು ತೊರೆದಿದ್ದಾರೆ. ಇಂತಹ ಸಂದರ್ಭದಲ್ಲಿ ಇಂಧನ ಇಲಾಖೆಯು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ (ಕ್ರೆಡಿಲ್)ನೊಂದಿಗೆ ಅಭಿವೃದ್ಧಿ ಪಡಿಸಿರುವ ಸೋಲಾರ್ ಪಾರ್ಕ್ ಪಾವಗಡದ ಪಾಲಿಗೆ ಅಭಿವೃದ್ಧಿಯ ಹೊಸ ಭರವಸೆ ಮೂಡಿಸಿದೆ.*
###############
*ವಿದ್ಯುತ್ ಉತ್ಪಾದನೆ ಹೇಗೆ?*===============
*2000 ಮೆಗಾ ವ್ಯಾಟ್ ಸೌರ ವಿದ್ಯುತ್ ಉತ್ಪಾದನೆಯ ಸೋಲಾರ್ ಪಾರ್ಕ್ ಅನ್ನು ತಲಾ 250 ಮೆ.ವ್ಯಾ ಸಾಮಾರ್ಥ್ಯದ 8 ಬ್ಲಾಕ್‌ಗಳಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಪ್ರತಿ 250 ಮೆಗಾ ವ್ಯಾಟ್ ಸೌರ ವಿದ್ಯುತ್ ಬ್ಲಾಕ್‌ಗೆ 220 ಕೆ.ವಿ. ಸಾಮಾರ್ಥ್ಯದ ಒಂದು ಪೊಲಿಂಗ್ ಉಪಕೇಂದ್ರ ಸ್ಥಾಪಿಸಲಾಗಿದೆ. ಈ 250 ಮೆಗಾ ವ್ಯಾಟ್ ಸಾಮರ್ಥ್ಯದ ಬ್ಲಾಕ್ ಅನ್ನು ಮತ್ತೆ 50 ಮೆಗಾ ವ್ಯಾಟ್ ಸಾಮರ್ಥ್ಯದ ಉಪ ಬ್ಲಾಕ್‌ಗಳಾಗಿ ವಿಭಾಗಿಸಲಾಗಿದೆ. ಹಿಗಾಗಿ ಈ 5್ಡ50 ಮೆಗಾ ವ್ಯಾಟ್ ಸಾಮರ್ಥ್ಯದ ಉಪ ಬ್ಲಾಕ್‌ಗಳು 33 ಕೆವಿ ಅಥವಾ 66 ಕೆವಿ ಭೂಗತ ಕೇಬಲ್‌ಗಳ ಮೂಲಕ ಪೂಲಿಂಗ್ ಉಪಕೇಂದ್ರಕ್ಕೆ ವಿದ್ಯುತ್ ಹರಿಸುತ್ತದೆ. ಇಲ್ಲಿಂದ ಈ ವಿದ್ಯುತ್ ಅನ್ನು 220 ಕೆ.ವಿ. ಪೂಲಿಂಗ್ ಕೇಂದ್ರಕ್ಕೆ ರವಾನಿಸಲಾಗುತ್ತದೆ. ಇಲ್ಲಿಂದ ಮತ್ತೆ ಸೋಲಾರ್ ಪಾರ್ಕ್‌ನಲ್ಲಿ ಪವರ್‌ಗ್ರಿಡ್‌ನವರು ನಿರ್ಮಿಸುತ್ತಿರುವ 400 ಕೆ.ವಿ. ಗ್ರಿಡ್ ಕೇಂದ್ರಕ್ಕೆ ರವಾನಿಸಲಾಗುತ್ತದೆ.*
###########
*ಪಾವಗಡ ಸೋಲಾರ್ ಪಾರ್ಕ್‌ನಲ್ಲಿ ಉತ್ಪತ್ತಿಯಾಗುವ 2000 ಮೆ.ವ್ಯಾ ಸೌರ ವಿದ್ಯುತ್ ರವಾನೆಗಾಗಿ ಕರ್ನಾಟಕ ಸೌರಶಕ್ತಿ ವಿದ್ಯುತ್ ಅಭಿವೃದ್ಧಿ ನಿಗಮ ನಿಯಮಿತವು ಪಾವಗಡ ಸೋಲಾರ್ ಪಾರ್ಕ್ ಪ್ರದೇಶದಲ್ಲಿ 220 ಕೆವಿಯ 8 ಪೊಲಿಂಗ್ ಕೇಂದ್ರಗಳನ್ನು ಸ್ಥಾಪಿಸಿದೆ. ಸೌರಶಕ್ತಿ ಯೋಜನೆಯಲ್ಲಿರುವ 400 ಕೆವಿ ಗ್ರಿಡ್ ಉಪಕೇಂದ್ರವನ್ನು ಮಧುಗಿರಿಯಲ್ಲಿನ ಪವರ್‌ಗ್ರಿಡ್‌ನ 765 ಕೆವಿ ಕೇಂದ್ರಕ್ಕೆ ಸಂಪರ್ಕಿಸಲಾಗುತ್ತದೆ.*
################
*ವಿಶ್ವದ ದೊಡ್ಡ ಸೋಲಾರ್ ಪಾರ್ಕ್ ಹೇಗೆ?*
==============
*ಪಾವಗಡ ಸೋಲಾರ್ ಪಾರ್ಕ್ ಅನ್ನು ರಾಜ್ಯ ಸರಕಾರ ವಿಶ್ವದ ಅತಿ ದೊಡ್ಡ ಸೋಲಾರ್ ಪಾರ್ಕ್ ಎಂದು ಹೇಳಿಕೊಂಡಿದೆ. 2000 ಮೆಗಾ ವ್ಯಾಟ್ ಸೌರ ವಿದ್ಯುತ್ ಉತ್ಪಾದನೆಯ ಸೋಲಾರ್ ಪಾರ್ಕ್ ಬೇರೆ ಯಾವ ದೇಶದಲ್ಲೂ ಇಲ್ಲ. 1500 ಮೆಗಾ ವ್ಯಾಟ್ ಘಟಕ ನಿರ್ಮಿಸಿರುವುದೇ ಕೊನೆ. ತೆಲಂಗಾಣದಲ್ಲಿ 1000 ಮೆಗಾ ವ್ಯಾಟ್ ಘಟಕ ನಿರ್ಮಾಣವಾಗುತ್ತಿದೆ. ಅದರಲ್ಲೂ ಒಂದೇ ಕಡೆ ಖಾಸಗಿ ಭೂಮಿಯಲ್ಲಿ 13 ಸಾವಿರ ಎಕರೆ ಪ್ರದೇಶದ ಬೃಹತ್ ಸೋಲಾರ್ ಪಾರ್ಕ್ ಬೇರೆಲ್ಲೂ ಇಲ್ಲ. ಹೀಗಾಗಿ ಪಾವಗಡ ಸೋಲಾರ್ ಪಾರ್ಕ್ ವಿಶ್ವದಲ್ಲೇ ಅತಿ ದೊಡ್ಡದು ಎಂದು ಸರಕಾರ ಹೇಳಿದೆ. ಪಾವಗಡ ಸೋಲಾರ್ ಪಾರ್ಕ್ ಯೋಜನೆಯಿಂದ ರಾಜ್ಯ ಒಟ್ಟು 3,628 ಮೆಗಾ ವ್ಯಾಟ್ ಸೌರ ವಿದ್ಯುತ್ ಉತ್ಪಾದನೆ ಮಾಡಲಿದ್ದು, ದೇಶದಲ್ಲೇ ಅತೀ ಹೆಚ್ಚು ಸೌರವಿದ್ಯುತ್ ಉತ್ಪಾದನೆ ಮಾಡುವ ರಾಜ್ಯ ಎಂಬ ಹೆಗ್ಗಳಿಯೂ ಹೊಂದಿದೆ. ಈ ಯೋಜನೆಯಲ್ಲಿ ಕೇಂದ್ರ ಸರಕಾರದ ಪಾಲು ಇದೆ. ಕೇಂದ್ರವು ಒಂದು ಮೆಗಾ ವ್ಯಾಟ್‌ಗೆ 20 ಲಕ್ಷ ರೂ.ನಂತೆ ಅನುದಾನ ನೀಡಿದೆ.*
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ